Tag: Mysore

ಮದ್ದೂರು ಬಳಿ ಹೆದ್ದಾರಿ ದರೋಡೆಗೆ ಸಂಚು ರೂಪಿಸಿದ್ದ ನಾಲ್ವರ ಬಂಧನ
ಮೈಸೂರು

ಮದ್ದೂರು ಬಳಿ ಹೆದ್ದಾರಿ ದರೋಡೆಗೆ ಸಂಚು ರೂಪಿಸಿದ್ದ ನಾಲ್ವರ ಬಂಧನ

February 17, 2020

ಮಂಡ್ಯ, ಫೆ.16(ನಾಗಯ್ಯ)- ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಮೈಸೂರು-ಬೆಂಗಳೂರು ಹೆದ್ದಾರಿ ಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮದ್ದೂರು ಪೆÇಲೀಸರು ಯಶಸ್ವಿ ಯಾಗಿದ್ದಾರೆ. ಬೆಂಗಳೂರಿನ ಪದ್ಮ ನಾಭನಗರದ ಓಂ ಪ್ರಕಾಶ್, ಉತ್ತರಹಳ್ಳಿಯ ಸುರೇಶ್, ಮದ್ದೂ ರಿನ ಲೀಲಾವತಿ ಬಡಾವಣೆ ನಿವಾಸಿ ಸಂಜಯ್ ಹಾಗೂ ಪ್ರಜ್ವಲ್ ಬಂಧಿತರು. ಮತ್ತೊಬ್ಬ ಆರೋಪಿ ಕಾರ್ತಿಕ್ ಪರಾರಿಯಾಗಿದ್ದಾನೆ. ಹಿನ್ನೆಲೆ: ಬೆಂಗಳೂರು ಮೂಲದ ಓಂಪ್ರಕಾಶ್ ಎಂಬುವರಿಗೆ ಸೇರಿದ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಓಂ ಪ್ರಕಾಶ್, ಸುರೇಶ್, ಸಂಜಯ್,…

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಫೌಂಡೇಷನ್‍ನ ನೂತನ ಕಟ್ಟಡ ಉದ್ಘಾಟನೆ
ಮೈಸೂರು

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಫೌಂಡೇಷನ್‍ನ ನೂತನ ಕಟ್ಟಡ ಉದ್ಘಾಟನೆ

February 17, 2020

ಮೈಸೂರು, ಫೆ.16(ಪಿಎಂ)- ಮೈಸೂರಿನ ಜೆಪಿ ನಗರದ ಎಫ್ ಬ್ಲಾಕ್‍ನಲ್ಲಿ ವಿವಿಧ ಅನುದಾನ ಹಾಗೂ ದೇಣಿಗೆ ಸೇರಿದಂತೆ 52 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಫೌಂಡೇಷನ್‍ನ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಲಾಯಿತು. ಕಟ್ಟಡದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ದೀನ-ದಲಿತರ ಪಾಲಿಗೆ ಡಾ. ಅಂಬೇಡ್ಕರ್ ಸೂರ್ಯನಂತೆ ಬೆಳಕಾಗಿದ್ದಾರೆ. ಮಹಾನ್ ಮಾನವತಾವಾದಿಯಾದ ಅವರ ಚಿಂತನೆಗಳತ್ತ ಇಂದು ಇಡೀ ವಿಶ್ವವೇ ತಿರುಗಿ ನೋಡುತ್ತಿದೆ ಎಂದರು. ಬುದ್ಧನ ಸಂದೇಶಗಳು ನಮಗೆ ಮಾರ್ಗದರ್ಶನ…

ರಾಮದಾಸ್ ಆರೋಗ್ಯ ವಿಚಾರಿಸಿದ ಸಹಕಾರ ಸಚಿವ ಸೋಮಶೇಖರ್
ಮೈಸೂರು

ರಾಮದಾಸ್ ಆರೋಗ್ಯ ವಿಚಾರಿಸಿದ ಸಹಕಾರ ಸಚಿವ ಸೋಮಶೇಖರ್

February 17, 2020

ಮೈಸೂರು, ಫೆ.16 (ಆರ್‍ಕೆಬಿ)- ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭಾನುವಾರ ಮೈಸೂರಿನ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ನಿವಾ ಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಇತ್ತೀಚೆಗೆ ರಾಮದಾಸ್ ಅವರು ಅನಾರೋಗ್ಯಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯು ತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಇದಕ್ಕೂ ಮುನ್ನ ಸಚಿವರು ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಮಾಧ್ಯಮ ವಕ್ತಾರ ಪ್ರಭಾಕರ ಶಿಂಧೆ ಇನ್ನಿತರರು…

ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತ, ಜಾಗೃತಿ ಜಾಥಾ ಕಾರ್ಯಕ್ರಮ
ಮೈಸೂರು

ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತ, ಜಾಗೃತಿ ಜಾಥಾ ಕಾರ್ಯಕ್ರಮ

February 17, 2020

ಮೈಸೂರು, ಫೆ.16-ಜಯಲಕ್ಷ್ಮೀಪುರಂನ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಯೂತ್ ರೆಡ್ ಕ್ರಾಸ್ ವತಿಯಿಂದ ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದ ರೆಡ್ ಕ್ರಾಸ್ ಅಧಿಕಾರಿ ಡಾ.ದಿವಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜು ಪ್ರಾಂಶುಪಾಲ ಎಸ್.ವೆಂಕಟರಾಮು ಅಧ್ಯಕ್ಷತೆ ವಹಿಸಿದ್ದರು. ಸ್ವಚ್ಛ ಪÀರಿವರ್ತನಾ ಅಂಗವಾಗಿ ವಿದ್ಯಾರ್ಥಿಗಳು ‘ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತ’ ನಿರ್ಮಾಣ ಕ್ಕಾಗಿ ಪ್ರಮಾಣ ಸ್ವೀಕರಿಸಿದರು. ‘ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿ, ಮಾಲಿನ್ಯವನ್ನು ತಡೆಗಟ್ಟಿ’ ಎಂಬ ಧ್ಯೇಯವಾಕ್ಯದೊಂದಿಗೆ ಜಾಥಾ…

ಭಾರತದಲ್ಲಿನ ಸಾಮಾಜಿಕ ಪ್ರಗತಿಯ ಆಯಾಮಗಳು ಮತ್ತಷ್ಟು ಸ್ಪಷ್ಟವಾಗಬೇಕಿದೆ
ಮೈಸೂರು

ಭಾರತದಲ್ಲಿನ ಸಾಮಾಜಿಕ ಪ್ರಗತಿಯ ಆಯಾಮಗಳು ಮತ್ತಷ್ಟು ಸ್ಪಷ್ಟವಾಗಬೇಕಿದೆ

February 17, 2020

ಮೈಸೂರು, ಫೆ.16-ವಿಜ್ಞಾನ ಮತ್ತು ತಂತ್ರಜ್ಞಾನವು ಮುಂದುವರೆದಂತೆ ಕೈಗಾರಿಕೆಗಳು ಹೆಚ್ಚಾಗಿ ಅದು ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಮಾನವ ಸಂಸ್ಕøತಿ ಗಳನ್ನು ವಿನಾಶದತ್ತ ಒಯ್ಯುತ್ತಿವೆ. ಅಲ್ಲದೆ ಅಭಿವೃದ್ಧಿ ಪರಿಕಲ್ಪನೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದಂತೆ ಅಭಿವೃದ್ಧಿಯ ವೇಗ ಕುಂಠಿತವಾಗುತ್ತದೆ. ತಲೆಮಾರು ಗಳು ಅಭಿವೃದ್ಧಿ ಫಲವನ್ನು ಕಾಣಲು ಸಾಧ್ಯವಾಗುವು ದಿಲ್ಲವೆಂದು ಮೈಸೂರು ವಿವಿಯ ರಾಜ್ಯಶಾಸ್ತ್ರ ಪ್ರಾಧ್ಯಾ ಪಕ ಪೆÇ್ರ. ಮುಜಾಫರ್ ಅಸಾದಿ ಅಭಿಪ್ರಾಯಪಟ್ಟರು. ಮೈಸೂರು ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಡಿ.ಸಿ ನಂಜುಂಡ ಅವರ ‘ಅಪೂರ್ವ ಜಾರ್ಖಂಡ್’ ಮತ್ತು 18ನೇ ಅಕ್ಷರೆÀೀಖೆ…

1.10 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ
ಮೈಸೂರು

1.10 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ

February 17, 2020

ಮೈಸೂರು, ಫೆ.16(ಪಿಎಂ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1.10 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು. ರಾಜ್ಯ ಹಣಕಾಸು ಆಯೋಗದ (ಎಸ್‍ಎಫ್‍ಸಿ) ಅನುದಾನ ದಲ್ಲಿ ಪಾಲಿಕೆ ವತಿಯಿಂದ ನಡೆಯುವ ವಿವಿಧ ಅಭಿವೃದ್ಧಿ ಕಾಮ ಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರಿನ ಯಾದವಗಿರಿಯ ಆಕಾಶವಾಣಿ ವೃತ್ತದ ಬಳಿಯ ಚೆಲುವಾಂಬ ಉದ್ಯಾನವನದ ಸಮಗ್ರ ಅಭಿವೃದ್ಧಿಯ 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು….

ಎಲ್‍ಪಿಜಿ ದರ ಏರಿಕೆ ಖಂಡಿಸಿ ಪ್ರತಿಭಟನೆ
ಮೈಸೂರು

ಎಲ್‍ಪಿಜಿ ದರ ಏರಿಕೆ ಖಂಡಿಸಿ ಪ್ರತಿಭಟನೆ

February 17, 2020

ಮೈಸೂರು, ಫೆ.16(ಆರ್‍ಕೆಬಿ)- ಜನಸಾಮಾನ್ಯರು ಬಳಸುವ ಎಲ್‍ಪಿಜಿ ದರವನ್ನು ಏಕಾಏಕಿ 150 ರೂ.ಗಳಷ್ಟು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಭಾನುವಾರ ಮೈಸೂರಿನ ಆರ್‍ಟಿಓ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅತಿ ಅಗತ್ಯವಾದ ಎಲ್‍ಪಿಸಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸತತವಾಗಿ ಏರಿಕೆ ಮಾಡುತ್ತಲೇ ಬಂದಿದೆ. ಕಳೆದ ತಿಂಗಳಷ್ಟೆ 150 ರೂ. ಏರಿಕೆ ಮಾಡಿದ್ದ ಸರ್ಕಾರ, ಇದೀಗ ಮತ್ತೆ ತಿಂಗಳ ಅವಧಿಯಲ್ಲಿ ಮತ್ತೆ 150 ರೂ.ಗಳಷ್ಟು…

`ಮುಖ್ಯಮಂತ್ರಿ’ ನೋಡಲು ಕಿಕ್ಕಿರಿದ ಜನ!
ಮೈಸೂರು

`ಮುಖ್ಯಮಂತ್ರಿ’ ನೋಡಲು ಕಿಕ್ಕಿರಿದ ಜನ!

February 16, 2020

ಮೈಸೂರು,ಫೆ.15(ವೈಡಿಎಸ್)-ಕಲಾ ಮಂದಿರದಲ್ಲಿ ಶನಿವಾರ ಪ್ರದರ್ಶನಗೊಂಡ `ಮುಖ್ಯಮಂತ್ರಿ’ ನಾಟಕದ 701ನೇ ಪ್ರದರ್ಶನ ವನ್ನು ಜನರು ಮುಗಿಬಿದ್ದು ವೀಕ್ಷಿಸಿದರು. ಕಲಾಮಂದಿರದಲ್ಲಿ ಪ್ರದರ್ಶನಗೊಂಡ ಮುಖ್ಯಮಂತ್ರಿ ನಾಟಕ ಹೌಸ್‍ಫುಲ್ ಆಗಿತ್ತು. ಈವರೆಗೆ 7 ಶತಕ ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕಕ್ಕೆ ರಂಗಾಸಕ್ತರು ಮುಗಿ ಬಿದ್ದು ವೀಕ್ಷಿಸಿದರು. ಆನ್‍ಲೈನ್, ಆಫ್‍ಲೈನ್ ಎರಡರಲ್ಲೂ ನಾಟಕದ ಟಿಕೆಟ್ ಬಿಕರಿ ಯಾಗಿತ್ತು. ಕೆಲವರು ಟಿಕೆಟ್ ಸಿಗದೆ ಹಿಂದಿರುಗಿದರು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ 2ನೇ ದಿನವಾದ ಶನಿ ವಾರ, ಬೆಂಗಳೂರಿನ ಕಲಾಗಂಗೋತ್ರಿ ತಂಡವು ಟಿ.ಎಸ್.ಲೋಹಿತಾಶ್ವ ರಚನೆಯ ಡಾ.ಬಿ.ವಿ.ರಾಜಾರಾಂ ನಿರ್ದೇಶನದ `ಮುಖ್ಯಮಂತ್ರಿ’(ಕನ್ನಡ)…

ವಿವಿಧ ರಾಜ್ಯ, ಸಂಸ್ಕøತಿಗಳ ಕಲಾವಿದರಿಂದ ಕಳೆಗಟ್ಟಿದ ಜನಪದೋತ್ಸವ
ಮೈಸೂರು

ವಿವಿಧ ರಾಜ್ಯ, ಸಂಸ್ಕøತಿಗಳ ಕಲಾವಿದರಿಂದ ಕಳೆಗಟ್ಟಿದ ಜನಪದೋತ್ಸವ

February 16, 2020

ಮೈಸೂರು, ಫೆ.15(ಎಸ್‍ಬಿಡಿ)- `ಬಹು ರೂಪಿ’ಯಲ್ಲಿ ಶನಿವಾರ ವಿವಿಧ ರಾಜ್ಯಗಳ ಜಾನಪದ ವೈಭವ ಮೇಳೈಸಿತು. `ಬಹುರೂಪಿ’ ರಾಷ್ಟ್ರೀಯ ನಾಟಕೋ ತ್ಸವದ ಭಾಗವಾಗಿ ಕಿಂದರಜೋಗಿ ಆವ ರಣದಲ್ಲಿ ಏರ್ಪಡಿಸಿರುವ `ಜನಪದೋ ತ್ಸವ’ದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳ ಸಂಸ್ಕøತಿ ಸಮ್ಮಿಳಿತವಾಗಿ, ನೂರಾರು ಪ್ರೇಕ್ಷಕರ ಹೃನ್ಮನ ತಣಿಸಿತು. ತಮಿಳುನಾಡು ತಂಜಾವೂರಿನ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ಕಲಾವಿ ದರು ಪ್ರಸ್ತುತಪಡಿಸಿದ ಜನಪದ ನೃತ್ಯ ವಿಶೇಷವಾಗಿತ್ತು. ನಾದಸ್ವರ, ಡೋಲು, ತಮಟೆ ಸದ್ದಿನ ಸಮ್ಮಿಳಿತಕ್ಕೆ ಕಲಾವಿದರು ಆಕರ್ಷಕ ಹೆಜ್ಜೆ ಹಾಕಿದರು. ನಡುವೆ…

ಬಹುರೂಪಿಯಲ್ಲಿ ಬಾಯಲ್ಲಿ ನೀರೂರಿಸುವ ಮಲೆನಾಡಿನ ತೊಡದೇವು, ಕಾಯಿಗರಿಕೆ!
ಮೈಸೂರು

ಬಹುರೂಪಿಯಲ್ಲಿ ಬಾಯಲ್ಲಿ ನೀರೂರಿಸುವ ಮಲೆನಾಡಿನ ತೊಡದೇವು, ಕಾಯಿಗರಿಕೆ!

February 16, 2020

ಮೈಸೂರು,ಫೆ.15- ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವವು ಬಹುಭಾಷೆ ನಾಟಕಗಳ ಮೂಲಕ ರಂಗಾಸಕ್ತರ ಮನ ತಣಿಸುತ್ತಿದ್ದರೆ, ರಂಗಾಯಣದ ಆವರಣದಲ್ಲಿನ ಆಹಾರ ಮೇಳದಲ್ಲಿ ಮಲೆನಾಡಿನ ತೊಡದೇವು, ಕಾಯಿಗರಿಕೆ, ಕಾಯಿ ಮುಳಕ ಹಾಗೂ ದಕ್ಷಿಣ ಕರ್ನಾಟಕದ ಪ್ರಮುಖ ಆಹಾರ ಗಳಾದ ರಾಗಿಮುದ್ದೆ, ನಾಟಿಶೈಲಿ ಸಾಂಬಾರ್, ಪಾಯಸದ ರುಚಿ ಸವಿದು ನಾಲಿಗೆ ಚಪ್ಪರಿಸುವಂತೆ ಮಾಡುತ್ತಿದೆ. ಗಾಂಧಿಪಥ ಶಿರೋನಾಮೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ರಂಗಾಸಕ್ತರಿಗೆ ನಾಟಕಗಳು, ಚಲನ ಚಿತ್ರಗಳು ವಿಭಿನ್ನ ಹಾಗೂ ಸದಭಿರುಚಿ ಅನುಭವ ನೀಡು ತ್ತಿದ್ದರೆ, ಆಹಾರ ಮೇಳದಲ್ಲಿ ಬಗೆಬಗೆಯ ರುಚಿಕರ ಆಹಾರ…

1 39 40 41 42 43 330
Translate »