Tag: Mysore

ಪ್ರಮೋದಾದೇವಿ ಭೇಟಿ ಮಾಡಿದ ಮೇಯರ್, ಉಪ ಮೇಯರ್
ಮೈಸೂರು

ಪ್ರಮೋದಾದೇವಿ ಭೇಟಿ ಮಾಡಿದ ಮೇಯರ್, ಉಪ ಮೇಯರ್

February 18, 2020

ಮೈಸೂರು, ಫೆ. 17(ಆರ್‍ಕೆ)- ನೂತನ ಮೈಸೂರು ಮೇಯರ್ ತಸ್ನೀಂ ಹಾಗೂ ಉಪ ಮೇಯರ್ ಸಿ. ಶ್ರೀಧರ್, ಭಾನು ವಾರ ಬೆಳಿಗ್ಗೆ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಅವರನ್ನು ಅರಮನೆಯ ಅವರ ನಿವಾಸದಲ್ಲಿ ಭೇಟಿ ಮಾಡಿ ಕುಶಲೋಪರಿ ನಡೆಸಿದರು. ಮೇಯರ್, ಉಪ ಮೇಯರ್ ಆಗಿ ಆಯ್ಕೆ ಗೊಂಡು ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿ ಭೇಟಿ ಮಾಡಿದ ಅವರು, ಮೈಸೂರಿನ ಅಭಿವೃದ್ಧಿ, ನಿರ್ವಹಣೆ, ಸ್ವಚ್ಛತೆ ಕಾಪಾಡಲು ಸದಾ ನಿಮ್ಮ ಸಲಹೆ, ಮಾರ್ಗದರ್ಶನಗಳನ್ನು ಕೊಡಿ, ಅದರಂತೆ ನಾವು ಕೆಲಸ ಮಾಡುತ್ತೇವೆ…

ಕಾರ್ಕಳ ಬಳಿ ಪ್ರವಾಸಿ ಬಸ್ ಅಪಘಾತ ಪ್ರಕರಣ: 25 ಮಂದಿ ಆಸ್ಪತ್ರೆಯಿಂದ ಬಿಡುಗಡೆ: ಐವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ
ಮೈಸೂರು

ಕಾರ್ಕಳ ಬಳಿ ಪ್ರವಾಸಿ ಬಸ್ ಅಪಘಾತ ಪ್ರಕರಣ: 25 ಮಂದಿ ಆಸ್ಪತ್ರೆಯಿಂದ ಬಿಡುಗಡೆ: ಐವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ

February 18, 2020

ಮೈಸೂರಿನ ಖಾಸಗಿ ಕಂಪನಿಯಲ್ಲಿ ದುಃಖ, ಆತಂಕ ಪರಿಸ್ಥಿತಿ, ಸಹೋದ್ಯೋಗಿಗಳನ್ನು ಕಳೆದುಕೊಂಡ ನೋವಿನಲ್ಲಿ ಸಿಬ್ಬಂದಿ ಮೈಸೂರು, ಫೆ. 17 (ಆರ್‍ಕೆ)- ಶನಿವಾರ ಸಂಜೆ ಕಾರ್ಕಳ ಬಳಿ ಸಂಭವಿಸಿದ ಭೀಕರ ಪ್ರವಾಸಿ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ 9 ಮಂದಿಯ ಪಾರ್ಥಿವ ಶರೀರವನ್ನು ಭಾನುವಾರ ಅವರವರ ಸ್ಥಳಗಳಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೈಸೂರಿನ ಮೇಟಗಳ್ಳಿ ವ್ಯಾಪ್ತಿಯಲ್ಲಿರುವ ಬೆಳ ಗೊಳ ಕೈಗಾರಿಕಾ ಪ್ರದೇಶದ ವೈಟಲ್ ರೆಕಾಡ್ರ್ಸ್ ಡೇಟಾ ಬೇಸ್ಡ್ ಖಾಸಗಿ ಕಂಪನಿಯ ನಾಲ್ವರು ಸಿಬ್ಬಂದಿ, ನಂಜನಗೂಡಿನ ಇಬ್ಬರು ಅಡಿಗೆ ಸಹಾಯಕರು ಸೇರಿ ಸಾವನ್ನಪ್ಪಿದ ಎಲ್ಲಾ…

ಮೈಸೂರಲ್ಲಿ ನಾಳೆ ಛತ್ರಪತಿ ಶಿವಾಜಿ ಪುತ್ಥಳಿ ಮೆರವಣಿಗೆ
ಮೈಸೂರು

ಮೈಸೂರಲ್ಲಿ ನಾಳೆ ಛತ್ರಪತಿ ಶಿವಾಜಿ ಪುತ್ಥಳಿ ಮೆರವಣಿಗೆ

February 18, 2020

ಮೈಸೂರು, ಫೆ.17(ಆರ್‍ಕೆಬಿ)- ಛತ್ರಪತಿ ಶಿವಾಜಿ ಮಹಾ ರಾಜರ 393ನೇ ಜಯಂತ್ಯೋತ್ಸವದÀ ಅಂಗವಾಗಿ ಫೆ.19 ರಂದು ಮೈಸೂರಿನಲ್ಲಿ ಬೃಹತ್ ಮೆರವಣಿಗೆ, ಉಪನ್ಯಾಸ, ನಾಟಕ ಆಯೋಜಿಸಲಾಗಿದೆ ಎಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್.ಗೋಪಾಲರಾವ್ ಜಾಧವ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಯಂತ್ಯೋತ್ಸವ ಸಮಿತಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಶಿವಾಜಿ ಮಹಾರಾಜರ ಪುತ್ಥಳಿಯ ಮೆರವಣಿಗೆ ಮೈಸೂರು…

ಇಂದಿನಿಂದ ವಿಧಾನಮಂಡಲ ಅಧಿವೇಶನ
ಮೈಸೂರು

ಇಂದಿನಿಂದ ವಿಧಾನಮಂಡಲ ಅಧಿವೇಶನ

February 17, 2020

ಬೆಂಗಳೂರು,ಫೆ.16-ರಾಜ್ಯ ವಿಧಾನ ಮಂಡಲ ಅಧಿ ವೇಶನ ಸೋಮವಾರ (ಫೆ.17) ಆರಂಭ ವಾಗಿ ಮಾರ್ಚ್ 31ರವರೆಗೆ ನಡೆಯ ಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇ ಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಸೋಮವಾರದಂದು ರಾಜ್ಯಪಾಲ ವಜುಭಾಯ್ ವಾಲಾ ಅವರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಮಧ್ಯಾಹ್ನ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ನಂತರ ರಾಜ್ಯಪಾಲರ ಭಾಷಣ ಕುರಿತ ಚರ್ಚೆ ಹಾಗೂ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕಾರ್ಯಕ್ರಮಗಳು ಫೆ.20ರವರೆಗೆ ನಡೆಯಲಿವೆ ಎಂದು ಹೇಳಿದರು. ಮಾರ್ಚ್ 2ರಂದು ವಿಧಾನ ಮಂಡಲ…

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣ 
ಮೈಸೂರು

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣ 

February 17, 2020

ವಾರಣಾಸಿ,ಫೆ.16-ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಣಾಸಿಯಲ್ಲಿಂದು 63 ಅಡಿ ಎತ್ತರದ ಮಾಜಿ ಭಾರತೀಯ ಜನ ಸಂಘ ನಾಯಕ ಪಂಡಿತ್ ದೀನ್ ದಯಾಳ್ ಉಪಾ ಧ್ಯಾಯ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಪಂಚ ಲೋಹದಿಂದ ಈ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಇದು ದೇಶದಲ್ಲಿಯೇ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಎತ್ತರದ ಪ್ರತಿಮೆಯಾಗಿದೆ. ಸುಮಾರು 200 ಶಿಲ್ಪಿಗಳು ಒಂದು ವರ್ಷಗಳ ಕಾಲ ಶ್ರಮ ವಹಿಸಿ ಈ ಪ್ರತಿಮೆ ಯನ್ನು ಪೂರ್ಣಗೊಳಿಸಿದ್ದಾರೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ…

ಕಾರ್ಕಳ ಬಳಿ ನಡೆದ ಬಸ್ ಅಪಘಾತದಲ್ಲಿ ಮೈಸೂರಿನ ಮೂವರು, ನಂ.ಗೂಡಿನ ಇಬ್ಬರು ಸಾವು
ಮೈಸೂರು

ಕಾರ್ಕಳ ಬಳಿ ನಡೆದ ಬಸ್ ಅಪಘಾತದಲ್ಲಿ ಮೈಸೂರಿನ ಮೂವರು, ನಂ.ಗೂಡಿನ ಇಬ್ಬರು ಸಾವು

February 17, 2020

ನಂಜನಗೂಡು, ಫೆ.16- ಶನಿವಾರ ಸಂಜೆ ಕಾರ್ಕಳ ಬಳಿ ನಡೆದ ಬಸ್ ಅಪಘಾತದಲ್ಲಿ ಮೈಸೂರಿನ ಮೂವರು, ಮತ್ತು ನಂಜನಗೂಡು ತಾಲೂಕಿನ ಇಬ್ಬರು ಅಡುಗೆ ಭಟ್ಟರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಶಂಭುಲಿಂಗಪ್ಪ ಪುತ್ರ ಮಹ ದೇವಸ್ವಾಮಿ(36) ಹಾಗೂ ಶಿವಯ್ಯ ಪುತ್ರ ಬಸವರಾಜು (24) ಮೃತ ದುರ್ದೈವಿಗಳು. ಸುನಿಲ್ ಎಂಬಾತನು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಒಬ್ಬನೇ ಮಗನಾಗಿದ್ದ ಮಹದೇವಸ್ವಾಮಿ ಅವರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಹೇಳತೀರದ್ದಾಗಿದೆ. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಇನ್ನು ಬಸವ ರಾಜು…

ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಸೇರಿಕೊಂಡಿವೆ
ಮೈಸೂರು

ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಸೇರಿಕೊಂಡಿವೆ

February 17, 2020

ಶಿವಮೊಗ್ಗ, ಫೆ.16-ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಬಂದು ಸೇರಿ ಕೊಂ ಡಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ. ನಗರದಲ್ಲಿ ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಅನೇಕ ಸಮಸ್ಯೆ ಗಳನ್ನು ಒಂದು ರೀತಿಯ ವೈರಸ್ ರೀತಿಯಲ್ಲಿ ಇಂಜೆಕ್ಟ್ ಮಾಡಿಬಿಟ್ಟಿದೆ. ನೆಹರು ನಂತರ ಬಂದಂತಹ ಕಾಂಗ್ರೆಸ್, ರಾಜಕೀಯ ಪಕ್ಷಗಳಲ್ಲಿ ಅನೇಕ ವೈರಸ್ ಬಿಟ್ಟು, ನಮ್ಮ ದೇಶಕ್ಕೆ ಅತಿ ದೊಡ್ಡ ಅನ್ಯಾಯ…

ಜಿಎಸ್‍ಟಿ ಜಾಗೃತಿ ಕ್ರಮಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ
ಮೈಸೂರು

ಜಿಎಸ್‍ಟಿ ಜಾಗೃತಿ ಕ್ರಮಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ

February 17, 2020

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ -ಜಿಎಸ್‍ಟಿ ಕುರಿತಂತೆ ಸ್ಥಳೀಯ ಮತ್ತು ಜಿಲ್ಲಾ ಮಟ್ಟದಲ್ಲಿ ಜಾಗೃತಿ ಕಾರ್ಯವನ್ನು ಚುರುಕುಗೊಳಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ಜಿಎಸ್‍ಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಎಸ್‍ಟಿ ಕುರಿತಂತೆ ಅನೇಕ ವರ್ತಕ ಪ್ರತಿನಿಧಿಗಳ ಸಂದೇಹ, ಸ್ಪಷ್ಟನೆಗಳಿಗೆ ಪ್ರತಿಕ್ರಿಯಿಸಿರುವ ಸಚಿ ವರು ಜಿಎಸ್‍ಟಿ ಕುರಿತ ಸಂದೇಹ ನಿವಾರಣೆಗೆ ಜಿಲ್ಲಾ ಮಟ್ಟದ ಸಂವಹನ ಕಾರ್ಯಕ್ರಮಗಳನ್ನು ನಡೆಸುವಂತೆ, ಎಲ್ಲಾ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಎಸ್‍ಟಿ ಅನು ಷ್ಠಾನವಾಗಿ 3 ವರ್ಷಗಳಾಗುತ್ತಿದ್ದು, ಈ ಕುರಿತಂತೆ ಯಾವುದೇ…

ಮೂರನೇ ಬಾರಿಗೆ ದೆಹಲಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಪದಗ್ರಹಣ
ಮೈಸೂರು

ಮೂರನೇ ಬಾರಿಗೆ ದೆಹಲಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಪದಗ್ರಹಣ

February 17, 2020

ನವದೆಹಲಿ, ಫೆ.16-ಅರವಿಂದ್ ಕೇಜ್ರಿವಾಲ್ ಸತತ 3ನೇ ಬಾರಿ ದೆಹಲಿಯ ಮುಖ್ಯ ಮಂತ್ರಿಯಾಗಿ ಭಾನುವಾರ ಅಧಿಕಾರ ಸ್ವೀಕಾರ ಮಾಡಿದರು. ರಾಮಲೀಲಾ ಮೈದಾನ ದಲ್ಲಿ ಆಯೋಜಿಸಲಾಗಿದ್ದ ವಿಭಿನ್ನ ಕಾರ್ಯಕ್ರಮದಲ್ಲಿ ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿನಿಂದಲೂ ರಾಜ್ ನಿವಾಸದಲ್ಲೇ ಮುಖ್ಯಮಂತ್ರಿಗಳು ಪ್ರಮಾಣ ಸ್ವೀಕಾರ ಮಾಡುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದ ಅವರು, ರಾಮಲೀಲಾ ಮೈದಾನದಲ್ಲಿ ಅಧಿಕಾರ ಸ್ವೀಕರಿಸಿದ ಮೊದಲ ದೆಹಲಿ ಸಿಎಂ ಎಂಬ ದಾಖಲೆ ಸೃಷ್ಟಿಸಿ ದರು. ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕೈಲಾಶ್ ಗಹ್ಲೋಟ್,…

ಐವರು ಅಂತರ ಜಿಲ್ಲಾ ಹೆದ್ದಾರಿ ದರೋಡೆಕೋರರ ಬಂಧನ
ಮೈಸೂರು

ಐವರು ಅಂತರ ಜಿಲ್ಲಾ ಹೆದ್ದಾರಿ ದರೋಡೆಕೋರರ ಬಂಧನ

February 17, 2020

ಮಂಡ್ಯ, ಫೆ.16-ಶ್ರೀರಂಗಪಟ್ಟಣ ಪೊಲೀಸರು ಐವರು ಹೆದ್ದಾರಿ ದರೋಡೆಕೋರರನ್ನು ಬಂಧಿಸಿ 21.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಐವರಲ್ಲಿ ನಾಲ್ವರು ಅಪ್ರಾಪ್ತ ವಯಸ್ಸಿನವರು ಎಂಬುದು ಆತಂಕಕಾರಿ ವಿಚಾರವಾಗಿದೆ. ಬೆಂಗಳೂರಿನ ಕೆ.ಪಿ.ಅಗ್ರಹಾರದ ಉದಯ ಅಲಿ ಯಾಸ್ ಗೊಗ್ಗಯ್ಯ ಅಲಿಯಾಸ್ ಕಲಾಕಾರ್(19) ಈ ದರೋಡೆಕೋರರ ತಂಡದ ಕಿಂಗ್‍ಪಿನ್ ಆಗಿದ್ದು, ಈತ ಅಪ್ರಾಪ್ತ ವಯಸ್ಸಿನಲ್ಲಿಯೇ ಅಪರಾಧ ಕೃತ್ಯವೆಸಗಿ ಬಾಲ ಮಂದಿರ ಸೇರಿದ್ದ. ಅಪ್ರಾಪ್ತನಾಗಿರುವ ಈತನ ಸಹೋದರ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಾಲಮಂದಿರದಿಂದ ಬಿಡುಗಡೆಯಾಗಿದ್ದಾನೆ. ಈ ಸಹೋದರರು ಬಾಲಮಂದಿರ ದಲ್ಲಿರುವ ಬಾಲಕರನ್ನೇ…

1 38 39 40 41 42 330
Translate »