ಇಂದಿನಿಂದ ವಿಧಾನಮಂಡಲ ಅಧಿವೇಶನ
ಮೈಸೂರು

ಇಂದಿನಿಂದ ವಿಧಾನಮಂಡಲ ಅಧಿವೇಶನ

February 17, 2020

ಬೆಂಗಳೂರು,ಫೆ.16-ರಾಜ್ಯ ವಿಧಾನ ಮಂಡಲ ಅಧಿ ವೇಶನ ಸೋಮವಾರ (ಫೆ.17) ಆರಂಭ ವಾಗಿ ಮಾರ್ಚ್ 31ರವರೆಗೆ ನಡೆಯ ಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇ ಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸೋಮವಾರದಂದು ರಾಜ್ಯಪಾಲ ವಜುಭಾಯ್ ವಾಲಾ ಅವರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಮಧ್ಯಾಹ್ನ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ನಂತರ ರಾಜ್ಯಪಾಲರ ಭಾಷಣ ಕುರಿತ ಚರ್ಚೆ ಹಾಗೂ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕಾರ್ಯಕ್ರಮಗಳು ಫೆ.20ರವರೆಗೆ ನಡೆಯಲಿವೆ ಎಂದು ಹೇಳಿದರು.

ಮಾರ್ಚ್ 2ರಂದು ವಿಧಾನ ಮಂಡಲ ಅಧಿ ವೇಶನ ಮರು ಸಮಾವೇಶಗೊಳ್ಳಲಿದ್ದು, ಮಾರ್ಚ್ 2 ಮತ್ತು 3ರಂದು ಭಾರತದ ಸಂವಿಧಾನದ ಆಶಯಗಳು, ಸ್ವರೂಪ ಹಾಗೂ ಸಾಕಾರ ಕುರಿತಂತೆ 2 ದಿನಗಳ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸ ಲಾಗಿದೆ. ಮಾರ್ಚ್ 5ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ. ಕರ್ನಾ ಟಕ ಲೋಕಾಯುಕ್ತ ವಿಧೇಯಕವು ಒಳಗೊಂಡಂತೆ 6 ವಿಧೇಯಕಗಳು ಸದನದಲ್ಲಿ ಮಂಡಿಸಿ ಪರಿಶೀಲನೆ ಗೊಳಪಡಿಸಲು ಯೋಜಿಸಲಾಗಿದೆ. ಮಾರ್ಚ್ 31 ರವರೆಗೆ ಅಧಿವೇಶನ ನಡೆಯಲಿದ್ದು, ಈ ಅಧಿವೇಶನ ದಲ್ಲಿ ರಾಜ್ಯದ ಅಭಿವೃದ್ಧಿ ಕುರಿತ ಚರ್ಚೆಗೆ ವಿಫುಲ ಅವಕಾಶ ದೊರೆಯಲಿದೆ. ಲೋಕಸಭೆ ಮತ್ತು ರಾಜ್ಯ ಸಭೆ ಮಾದರಿಯಲ್ಲಿಯೇ ಸದನ ನಡೆಯಬೇಕೆಂಬ ಹಿನ್ನೆಲೆಯಲ್ಲಿ ಖಾಸಗಿ ಮಾಧ್ಯಮಗಳ ಕ್ಯಾಮರಾ ಗಳಿಗೆ ಸದನದ ಅಂಗಳದಲ್ಲಿ ಪ್ರವೇಶಕ್ಕೆ ಅವಕಾಶ ವಿರುವುದಿಲ್ಲ. ಆದರೆ, ದೂರದರ್ಶನವು ಕಲಾಪ ವನ್ನು ಚಿತ್ರೀಕರಿಸಿ ಬ್ರಾಂಡ್‍ವಿಡ್ತ್ ಸಂಕೇತಗಳ ಮೂಲಕ ಖಾಸಗಿ ವಾಹಿನಿಗಳಿಗೆ ಕಲಾಪದ ಚಿತ್ರಣವನ್ನು ನೀಡಲಿದೆ ಎಂದು ವಿಧಾನಸಭಾಧ್ಯಕ್ಷರು ಸ್ಪಷ್ಟಪಡಿಸಿದರು.

Translate »