ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣ 
ಮೈಸೂರು

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣ 

February 17, 2020

ವಾರಣಾಸಿ,ಫೆ.16-ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಣಾಸಿಯಲ್ಲಿಂದು 63 ಅಡಿ ಎತ್ತರದ ಮಾಜಿ ಭಾರತೀಯ ಜನ ಸಂಘ ನಾಯಕ ಪಂಡಿತ್ ದೀನ್ ದಯಾಳ್ ಉಪಾ ಧ್ಯಾಯ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.

ಪಂಚ ಲೋಹದಿಂದ ಈ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಇದು ದೇಶದಲ್ಲಿಯೇ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಎತ್ತರದ ಪ್ರತಿಮೆಯಾಗಿದೆ. ಸುಮಾರು 200 ಶಿಲ್ಪಿಗಳು ಒಂದು ವರ್ಷಗಳ ಕಾಲ ಶ್ರಮ ವಹಿಸಿ ಈ ಪ್ರತಿಮೆ ಯನ್ನು ಪೂರ್ಣಗೊಳಿಸಿದ್ದಾರೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಕೇಂದ್ರವನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿ ಸಿದರು. ಈ ಸ್ಮಾರಕ ದೀನ್ ದಯಾಳ್ ಉಪಾಧ್ಯಾಯ ಅವರ ಬದುಕು ಮತ್ತು ಜೀವನದ ಬಗ್ಗೆ ಬೆಳಕು ಚೆಲ್ಲಲಿದೆ. 30 ಒಡಿಶಾದ ಕುಶಲ ಕರ್ಮಿಗಳು ಈ ಸ್ಮಾರಕ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇಂದು ಬೆಳಿಗ್ಗೆ ವಾರಾಣಸಿಗೆ ಆಗಮಿಸಿದ ಪ್ರಧಾನಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ  430 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ, 74 ಹಾಸಿಗೆ ಮಾನಸಿಕ ಆರೋಗ್ಯ ಆಸ್ಪತ್ರೆ, ವಸ್ತುಪ್ರದರ್ಶನ, ಮಹಾಕಾಲ್ ಎಕ್ಸ್‍ಪ್ರೆಸ್‍ಗೆ ಚಾಲನೆ ಸೇರಿದಂತೆ ಸುಮಾರು 30 ಯೋಜನೆಗಳನ್ನು ಉದ್ಘಾಟಿಸಿದರು. ಮಹಾಕಾಲ್ ಎಕ್ಸ್‍ಪ್ರೆಸ್  ಮೂರು ಜ್ಯೋತಿರ್ಲಿಂಗ ಕೇಂದ್ರಗಳಾದ ವಾರಾಣಸಿ, ಉಜ್ಜೈನಿ ಮತ್ತು ಓಂಕಾರೇಶ್ವರವನ್ನು ಸಂಪರ್ಕಿಸಲಿದೆ.

Statue of Pandit Deen Dayal Upadhyaya unveiled-1

ರಾಷ್ಟ್ರದ ಹಿತದೃಷ್ಟಿಯಿಂದ ಸಿಎಎ, ಕಲಂ 370  ರದ್ದು ನಿರ್ಧಾರದಲ್ಲಿ ನಮ್ಮ ಸರ್ಕಾರ ಅಚಲ 

ವಾರಾಣಸಿ, ಫೆ.16-ರಾಷ್ಟ್ರೀಯ ಹಿತದೃಷ್ಟಿ ಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿ ಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಪ್ರಧಾನಿ ಮೋದಿ ಸ್ಪಷ್ಪಪಡಿಸಿದ್ದಾರೆ.

ಭಾರತೀಯ ಜನ ಸಂಘದ ಮಾಜಿ ನಾಯಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಹಿತದೃಷ್ಟಿ ಯಿಂದ ದಶಕಗಳಿಂದ ಬಾಕಿ ಉಳಿದಿದ್ದ ನಿರ್ಧಾರ ಗಳನ್ನು ಕೈಗೊಳ್ಳಲಾಗಿದ್ದು, ಈ ವಿಚಾರಗಳಲ್ಲಿ ನಮ್ಮ ಸರ್ಕಾರ ಅಚಲವಾಗಿದೆ ಎಂದರು.

ದೀನ್ ದಯಾಳ್ ಉಪಾಧ್ಯಾಯರು ಯಾವಾ ಗಲೂ ಬಡವರ ಬಗ್ಗೆ ಗಮನಹರಿಸುತ್ತಿದ್ದರು. ಅವರ ಸ್ವಾವಲಂಬನೆ ಮತ್ತು ಸ್ವ-ಸೇವೆ ಪರಿಕಲ್ಪನೆ ಆಧಾರದ ಮೇಲೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಉಚಿತ ಅಡುಗೆ ಅನಿಲ ಪೂರೈಕೆ, ಶೌಚಾಲಯ ಮತ್ತಿತರ ಸೌಲಭ್ಯಗಳನ್ನು ಬಡವರಿಗೆ ನೀಡಲಾಗುತ್ತಿದೆ ಎಂದರು.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಆತ್ಮ ಯಾವಾಗಲೂ ಪ್ರೇರಣೆ ನೀಡುತ್ತಿರು ತ್ತದೆ. ಹಾಗಾಗೀ ಬಡವರ ಪರ ಕೆಲಸಗಳನ್ನು ಮುಂದುವರೆಸಲಾಗಿದೆ. ವಾರಾಣಸಿಯಲ್ಲಿ 25 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳು ಪೂರ್ಣ ವಾಗಿರಬೇಕು ಅಥವಾ ನಡೆಯುತ್ತಿರಬಹುದು. ಆಸ್ಪತ್ರೆ, ಶಾಲೆ, ರಸ್ತೆ, ಮೇಲ್ಸೇತುವೆ ಮತ್ತು ನೀರಾವರಿ ಯೋಜನೆ ಸೇರಿದಂತೆ ಸುಮಾರು 12 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಪಶ್ಚಿಮ ಉತ್ತರ ಪ್ರದೇಶ ವನ್ನು ಮೆಡಿಕಲ್ ಹಬ್ ಆಗಿ ಪರಿವರ್ತಿಸುವ ಪ್ರಯತ್ನ ಸಾಗಿದೆ. ದೇಶದಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕುರಿತು ಮಾತನಾಡುತ್ತೇವೆ. ಆದರೆ, ಪ್ರವಾಸೋದ್ಯಮ ಬಹು ಮುಖ್ಯ ಎಂಬು ದನ್ನು ಅರಿತುಕೊಳ್ಳಬೇಕಿದೆ. ಗುರಿ ಸಾಧಿಸುವಲ್ಲಿ ಪರಿಸರ ಹೊರತುಪಡಿಸಿದಂತೆ ಪಾರಂಪರಿಕ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣ ಸದ್ಯದಲ್ಲಿಯೇ ಹೊಸ ರೂಪ ಪಡೆಯಲಿದೆ. ಅಯೋಧ್ಯೆಯಲ್ಲಿನ ರಾಮಮಂದಿರ ನೈಜ ರೂಪ ಪಡೆದುಕೊಳ್ಳಲಿದೆ ಎಂದು ಮೋದಿ ಹೇಳಿದರು.

 

Translate »