ಜಿಎಸ್‍ಟಿ ಜಾಗೃತಿ ಕ್ರಮಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ
ಮೈಸೂರು

ಜಿಎಸ್‍ಟಿ ಜಾಗೃತಿ ಕ್ರಮಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ

February 17, 2020

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ -ಜಿಎಸ್‍ಟಿ ಕುರಿತಂತೆ ಸ್ಥಳೀಯ ಮತ್ತು ಜಿಲ್ಲಾ ಮಟ್ಟದಲ್ಲಿ ಜಾಗೃತಿ ಕಾರ್ಯವನ್ನು ಚುರುಕುಗೊಳಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ಜಿಎಸ್‍ಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಎಸ್‍ಟಿ ಕುರಿತಂತೆ ಅನೇಕ ವರ್ತಕ ಪ್ರತಿನಿಧಿಗಳ ಸಂದೇಹ, ಸ್ಪಷ್ಟನೆಗಳಿಗೆ ಪ್ರತಿಕ್ರಿಯಿಸಿರುವ ಸಚಿ ವರು ಜಿಎಸ್‍ಟಿ ಕುರಿತ ಸಂದೇಹ ನಿವಾರಣೆಗೆ ಜಿಲ್ಲಾ ಮಟ್ಟದ ಸಂವಹನ ಕಾರ್ಯಕ್ರಮಗಳನ್ನು ನಡೆಸುವಂತೆ, ಎಲ್ಲಾ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಎಸ್‍ಟಿ ಅನು ಷ್ಠಾನವಾಗಿ 3 ವರ್ಷಗಳಾಗುತ್ತಿದ್ದು, ಈ ಕುರಿತಂತೆ ಯಾವುದೇ ಸಂದೇಹ ಇರಬಾರದು ಎಂದು ಅಭಿಪ್ರಾಯಪಟ್ಟ ಅವರು, ಸಂದೇಹ ನಿವಾರಣೆಗೆ ಜಾಗೃತಿ ಮೂಡಿಸುವಂತೆ ಅಧಿಕಾರಿ ಗಳಿಗೆ ಸೂಚಿಸಿದ್ದಾರೆ. ಕಳೆದ ವರ್ಷದ ಏಪ್ರಿಲ್‍ನಿಂದ ಜಿಎಸ್‍ಟಿ ರಿಟರ್ನ್ಸ್ ಸಲ್ಲಿಕೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಸರಳಗೊಳಿ ಸಲಾಗಿದೆ ಎಂದರು. ಜಿಎಸ್‍ಟಿ ಕುರಿತಂತೆ ಜಾಗೃತಿ ಮೂಡಿಸು ವಲ್ಲಿ ರಾಜ್ಯಸರ್ಕಾರಗಳ ಜವಾಬ್ದಾರಿ ಕೂಡ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Translate »