ನವದೆಹಲಿ, ಫೆ.16-ಅರವಿಂದ್ ಕೇಜ್ರಿವಾಲ್ ಸತತ 3ನೇ ಬಾರಿ ದೆಹಲಿಯ ಮುಖ್ಯ ಮಂತ್ರಿಯಾಗಿ ಭಾನುವಾರ ಅಧಿಕಾರ ಸ್ವೀಕಾರ ಮಾಡಿದರು. ರಾಮಲೀಲಾ ಮೈದಾನ ದಲ್ಲಿ ಆಯೋಜಿಸಲಾಗಿದ್ದ ವಿಭಿನ್ನ ಕಾರ್ಯಕ್ರಮದಲ್ಲಿ ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿನಿಂದಲೂ ರಾಜ್ ನಿವಾಸದಲ್ಲೇ ಮುಖ್ಯಮಂತ್ರಿಗಳು ಪ್ರಮಾಣ ಸ್ವೀಕಾರ ಮಾಡುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದ ಅವರು, ರಾಮಲೀಲಾ ಮೈದಾನದಲ್ಲಿ ಅಧಿಕಾರ ಸ್ವೀಕರಿಸಿದ ಮೊದಲ ದೆಹಲಿ ಸಿಎಂ ಎಂಬ ದಾಖಲೆ ಸೃಷ್ಟಿಸಿ ದರು. ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕೈಲಾಶ್ ಗಹ್ಲೋಟ್, ರಾಜೇಂದ್ರ ಪಾಲ್ ಗೌತಮ್ ಮತ್ತು ಇಮ್ರಾನ್ ಹುಸೇನ್ ಅವರೂ ಈ ಸಂದರ್ಭದಲ್ಲಿ ಸಚಿವರಾಗಿ ಪ್ರಮಾಣ ವಚನ ಪಡೆದರು. ಅರವಿಂದ್ ಕೇಜ್ರಿವಾಲ್ ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಆಮಂತ್ರಣ ಕೊಟ್ಟಿದ್ದರು. ಆದರೆ, ಮೋದಿ ಈ ಕಾರ್ಯಕ್ರಮಕ್ಕೆ ಬರಲಿಲ್ಲ.
ಅರವಿಂದ್ ಕೇಜ್ರಿವಾಲ್ ಈ ಕಾರ್ಯಕ್ರಮಕ್ಕೆ ದೆಹಲಿಯ ಶಾಲಾ ಶಿಕ್ಷಕರನ್ನು ಆಹ್ವಾನಿ ಸಿದ್ದರು. ಆಡಳಿತಕ್ಕೆ ಕೊಡುಗೆ ನೀಡಿದ ವಿವಿಧ ಕ್ಷೇತ್ರಗಳ 50 ಪ್ರತಿನಿಧಿಗಳನ್ನೂ ಆಮಂ ತ್ರಿಸಲಾಗಿತ್ತು. ಇವರಲ್ಲಿ ಅಂಗನವಾಡಿ ಕಾರ್ಯಕರ್ತರು, ಡೋರ್ ಡೆಲಿವರಿ ನೌಕರರು, ಸ್ವಚ್ಛ ಕಾರ್ಮಿಕರು, ರೈತರು, ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ, ಸಾರ್ವಜನಿಕ ಸಾರಿಗೆಯ ಪ್ರತಿನಿಧಿಗಳೂ ಇದ್ದರು. ಚುನಾವಣೆಗಳು ಮುಗಿದುಹೋಗಿವೆ. ನೀವು ಯಾರಿಗೆ ವೋಟು ಮಾಡಿದ್ದೀರಿ ಎಂಬುದು ನನಗೆ ಬೇಕಿಲ್ಲ. ಈಗ ದೆಹಲಿಯ ಪ್ರತಿಯೊಬ್ಬರೂ ನನ್ನ ಕುಟುಂಬದವರೇ ಆಗಿದ್ದಾರೆ. ಯಾವುದೇ ಪಕ್ಷದವರಿರಲಿ, ಯಾವುದೇ ಧರ್ಮೀಯರಾಗಿ, ಯಾವುದೇ ಜಾತಿ ಮತ್ತು ವರ್ಗದವರೇ ಆಗಲಿ ಪ್ರತಿಯೊಬ್ಬರ ಶ್ರೇಯೋಭಿವೃದ್ಧಿ ನನ್ನ ಗುರಿ. ನಾನು ಕೇವಲ ಎಎಪಿಯ ಮುಖ್ಯಮಂತ್ರಿಯಲ್ಲ. ನಾನು ಬಿಜೆಪಿಯ ಮುಖ್ಯಮಂತ್ರಿಯೂ ಹೌದು, ಕಾಂಗ್ರೆಸ್‍ನ ಮುಖ್ಯಮಂತ್ರಿಯೂ ಹೌದು, ಪ್ರತಿಯೊಬ್ಬರ ಮುಖ್ಯಮಂತ್ರಿಯೂ ಹೌದು ಎಂದರು. ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ದೆಹಲಿ ಪೆÇಲೀಸರು ಬಿಗಿ ಭದ್ರತೆಯ ವ್ಯವಸ್ಥೆ ಮಾಡಿದ್ದರು. ರಾಮಲೀಲಾ ಮೈದಾನದಲ್ಲಿ ಬರೋಬ್ಬರಿ 3,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.