ಪ್ರಮೋದಾದೇವಿ ಭೇಟಿ ಮಾಡಿದ ಮೇಯರ್, ಉಪ ಮೇಯರ್
ಮೈಸೂರು

ಪ್ರಮೋದಾದೇವಿ ಭೇಟಿ ಮಾಡಿದ ಮೇಯರ್, ಉಪ ಮೇಯರ್

February 18, 2020

ಮೈಸೂರು, ಫೆ. 17(ಆರ್‍ಕೆ)- ನೂತನ ಮೈಸೂರು ಮೇಯರ್ ತಸ್ನೀಂ ಹಾಗೂ ಉಪ ಮೇಯರ್ ಸಿ. ಶ್ರೀಧರ್, ಭಾನು ವಾರ ಬೆಳಿಗ್ಗೆ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಅವರನ್ನು ಅರಮನೆಯ ಅವರ ನಿವಾಸದಲ್ಲಿ ಭೇಟಿ ಮಾಡಿ ಕುಶಲೋಪರಿ ನಡೆಸಿದರು.

ಮೇಯರ್, ಉಪ ಮೇಯರ್ ಆಗಿ ಆಯ್ಕೆ ಗೊಂಡು ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿ ಭೇಟಿ ಮಾಡಿದ ಅವರು, ಮೈಸೂರಿನ ಅಭಿವೃದ್ಧಿ, ನಿರ್ವಹಣೆ, ಸ್ವಚ್ಛತೆ ಕಾಪಾಡಲು ಸದಾ ನಿಮ್ಮ ಸಲಹೆ, ಮಾರ್ಗದರ್ಶನಗಳನ್ನು ಕೊಡಿ, ಅದರಂತೆ ನಾವು ಕೆಲಸ ಮಾಡುತ್ತೇವೆ ಎಂದು ರಾಜಮಾತೆ ಅವರನ್ನು ಕೇಳಿಕೊಂಡರು.

ಈ ಸಂದರ್ಭ ಮೈಸೂರು ಸಾಂಸ್ಕøತಿಕ ನಗರಿ, ಇಲ್ಲಿನ ಪರಂಪರೆಯನ್ನು ಉಳಿಸಿ ಕೊಂಡೇ ಅಭಿವೃದ್ಧಿ ಮಾಡಬೇಕು. ನಗರದ ಹೃದಯ ಭಾಗದಲ್ಲಿರುವ ಅತೀ ಹಳೆಯ ದಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ, ಒಮ್ಮೆ ಕೆಡವಿದರೆ, ಮತ್ತೆ ಆ ಮಾದರಿಯ ಪಾರಂಪರಿಕ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಪ್ರಮೋದಾ ದೇವಿ ಒಡೆಯರ್ ಅವರು ಮೇಯರ್, ಉಪ ಮೇಯರ್‍ಗೆ ಸಲಹೆ ನೀಡಿದರು.

ಮೈಸೂರಿನ ಸಮಗ್ರ ಅಭಿವೃದ್ಧಿ, ಪ್ರಗತಿ ಕಾರ್ಯಗಳಿಗೆ ನನ್ನಿಂದೇನಾದರೂ ಬೇಕಾ ದರೆ ಹೇಳಿ, ಸದಾ ನಿಮ್ಮೊಂದಿಗಿರುತ್ತೇನೆ ಎಂದು ರಾಜಮಾತೆ ತಿಳಿಸಿದರು ಎಂದು ತಸ್ನೀಂ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾ ಮಟ್ಟದ ವಿಶೇಷ ಪಾರಂಪರಿಕ ಸಮಿತಿ ನೀಡಿದ ಶಿಫಾರಸ್ಸಿನನುಸಾರ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಕೆಡವಿ ಹೊಸದಾಗಿ ನಿರ್ಮಿಸಬೇಕೆಂದು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯ ವನ್ನು ಕಳೆದ ಬುಧವಾರ ಸರ್ಕಾರಕ್ಕೆ ರವಾ ನಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ನ್ಯಾಯಾಲಯದ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಬೇಕಾಗುತ್ತದೆ ಎಂದು ಮೇಯರ್ ತಿಳಿಸಿದರು.

Translate »