ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಜೊತೆಗೆ ಎಸ್‍ಟಿ ಸ್ಥಾನಮಾನಕ್ಕೆ ಸಿಎನ್‍ಸಿ ಆಗ್ರಹ
ಮೈಸೂರು

ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಜೊತೆಗೆ ಎಸ್‍ಟಿ ಸ್ಥಾನಮಾನಕ್ಕೆ ಸಿಎನ್‍ಸಿ ಆಗ್ರಹ

February 18, 2020

ಮೈಸೂರು, ಫೆ.17(ಆರ್‍ಕೆಬಿ)- ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಜೊತೆಗೆ ಎಸ್‍ಟಿ ಸ್ಥಾನಮಾನ ನೀಡುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಸೋಮವಾರ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಬೋಡೋಲ್ಯಾಂಡ್ ಒಪ್ಪಂದದ ಜೊತೆಯಲ್ಲಿಯೇ ಕೊಡವ ಲ್ಯಾಂಡ್ ಸ್ವಾಯತ್ತತೆಗೆ ಸರ್ಕಾರ ಸಂಕಲ್ಪ ತೊಡಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಪ್ರಧಾನಿ, ಗೃಹಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಕೊಡಗಿನ ಆದಿಮ ಸಂಜಾತ ಬುಡಕಟ್ಟು ಸಮುದಾಯವಾದ ಕೊಡವರ ಆಶೋತ್ತರವಾದ ಕೊಡವ ಲ್ಯಾಂಡ್ ಭೂ-ರಾಜಕೀಯ ಹಕ್ಕೊತ್ತ್ತಾಯ ವನ್ನು ಮುಂದಿಟ್ಟು 3 ದಶಕಗಳ ತಮ್ಮ ಶಾಂತಿ ಯುತ ಶಿಷ್ಟ ಮಾರ್ಗದ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಬೋಡೋಲ್ಯಾಂಡ್ ಒಪ್ಪಂದದ ಕರಡಿ ನಲ್ಲಿ ಪ್ರಮುಖ 5 ಅಂಶಗಳಿಗೆ ಆದ್ಯತೆ ನೀಡ ಲಾಗಿದೆ. (1). ಬಿಟಿಎಡಿ ಅಂದರೆ ಬೋಡೋ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಟಿವ್ ಡೆವ ಲಪ್‍ಮೆಂಟ್ ಅನ್ನು ಬೋಡೋಲ್ಯಾಂಡ್ ಟೆರಿಟೋರಿಯಲ್ ರೀಜನ್ ಎಂದು ಮರು ನಾಮಕರಣ ಮಾಡಬೇಕು. (2). ಬೋಡೋ ಬಾಹುಳ್ಯ ಗ್ರಾಮಗಳನ್ನು ಈ ಉದ್ದೇಶಿತ ಬಿಟಿಅರ್‍ನಲ್ಲಿ ಸೇರಿಸಬೇಕು. (3). ಬೋಡೋ ಭಾಷೆ ಮತ್ತು ದೇವನಾಗರಿ ಲಿಪಿಯ ನ್ನೊಳಗೊಂಡಂತೆ ಇಡೀ ಅಸ್ಸಾಂನಾದ್ಯಂತ ಅಧಿಕೃತ ಭಾಷೆಯಾಗಬೇಕು. (4).ಅಸ್ಸಾಂ ಸರ್ಕಾರವು ಬಿಟಿಆರ್‍ನ ಹೊರಗೆ ವಾಸಿ ಸುವ ಬೋಡೋ ಮತ್ತು ಕಛಾರಿ ಜನಾಂ ಗದ ಕಲ್ಯಾಣಕ್ಕಾಗಿ ಪ್ರತ್ಯೇಕ ಪರಿಷತ್ ಸ್ಥಾಪಿಸ ಬೇಕು. (5).ಬೋಡೋಗಳ ಭೂಹಕ್ಕು ಸಂವಿಧಾನಾತ್ಮಕವಾಗಿ ಸ್ಥಿರೀಕರಿಸಬೇಕು.

ಅದರೊಂದಿಗೆ ವಿಶ್ವಬ್ಯಾಂಕ್ ಮತ್ತು ಐಎಂಎಫ್‍ನಿಂದ ನೇರವಾಗಿ ಬೋಡೋ ಲ್ಯಾಂಡ್‍ಗೆ ಆರ್ಥಿಕ ನೆರವು ಹರಿದುಬರು ವಂತೆ ಕರಾರಿನಲ್ಲಿ ಬದ್ಧತೆ ವ್ಯಕ್ತಪಡಿಸಲಾಗಿದೆ. ಬೋಡೋ ಲ್ಯಾಂಡ್ ಒಪ್ಪಂದದ ಕರಾರಿ ನಲ್ಲಿನ ಬದ್ಧತೆಯ ಮಾನದಂಡವನ್ನೇ ಕೊಡ ವರ ವಿಚಾರದಲ್ಲಿಯೂ ಕೊಡವ ನ್ಯಾಷ ನಲ್ ಕೌನ್ಸಿಲ್ ಮಂಡಿಸಿರುವ ಪ್ರಮುಖ 5 ಹಕ್ಕೊತ್ತಾಯಗಳನ್ನು ಪರಿಗಣಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

(1) ಆದಿಮಸಂಜಾತ ಕೊಡವ ಬುಡ ಕಟ್ಟು ಸಮುದಾಯದ ಸಾಂಪ್ರದಾಯಿಕ ಜನ್ಮ ನೆಲೆಯಾದ 45 ಪ್ರಾಚೀನ ಅವಿಭಾಜ್ಯ ನಾಡುಗಳನ್ನು (ಸೂರ್ಲಟಿ ನಾಡಿನಿಂದ ಮರೆನಾಡಿನತನಕ- ಗಡಿನಾಡಿನಿಂದ ಕಡಿ ಯತ್‍ನಾಡ್ ತನಕ) ಕೊಡವರ ಸ್ವಯಂ ಶಾಸನದ ಜನ್ಮಭೂಮಿ `ಕೊಡವ ಲ್ಯಾಂಡ್’ ಅನ್ನು ಸಂವಿಧಾನದ 244, 371 ವಿಧಿಗಳು, 6 ಮತ್ತು 8ನೇ ಶೆಡ್ಯೂಲ್ ವ್ಯಾಪ್ತಿಯಲ್ಲಿ ರಾಜ್ಯಾಂಗ ಭದ್ರತೆ ನೀಡಬೇಕು. (2) ಆದಿಮ ಸಂಜಾತ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲವನ್ನು ಸಂವಿ ಧಾನದ 340 ಮತ್ತು 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. (3) ಆದಿಮಸಂಜಾತ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪ ಸಂಖ್ಯಾತ ಕೊಡವ ಬುಡಕಟ್ಟು ಕುಲ ಮತ್ತು ಅವರ ಅನನ್ಯ ಜನಪದೀಯ ಸಂಸ್ಕøತಿ ಯನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕು. (4) ಪ್ರಾಚೀನವೂ ಶ್ರೀಮಂತವೂ, ಸಮೃದ್ಧವು, ಅಭಿಜಾತ ಭಾಷೆಯೂ ಆದ ಕೊಡವರ ಮಾತೃ ಭಾಷೆಯಾದ ಕೊಡವತಕ್ಕ್ ಅನ್ನು ಸಂವಿ ಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು. (5) ಶಸ್ತ್ರಾಸ್ತ್ರ ನಾಗರಿಕತೆಯಿಂದ ಉತ್ಪತ್ತಿಯಾದ ಕೊಡವರ ಧಾರ್ಮಿಕ ಸಂಸ್ಕಾರವಾದ ತೋಕ್ /ಬಂದೂಕ ಕೊಡವರ ಧಾರ್ಮಿಕ ಸಂಕೇತ ವಾಗಿದ್ದು, ಇಂಡಿಯನ್ ಆಮ್ರ್ಸ್ ಆಕ್ಟ್ ಸೆಕ್ಷನ್ 3 ಮತ್ತು 4ರಲ್ಲಿನ ವಿಶೇಷ ವಿನಾಯಿತಿ ಯಾವುದೇ ನಿರ್ಬಂಧವಿಲ್ಲದೆ ನಿರಂತರ ಮುಂದುವರಿಯಬೇಕು ಎಂಬ ಬೇಡಿಕೆ ಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.

ಕೊಡವರ ಭೂ ರಾಜಕೀಯ ಆಶೋ ತ್ತರ, ಸಂಸ್ಕøತಿಯ ಜತನದ ಅಭಿಲಾಷೆ, ಸಂವೇದನೆಗಳೆಲ್ಲವನ್ನೂ ಬೋಡೋಗಳೊಂ ದಿಗೆ ಸಮೀಕರಣಗೊಳಿಸಬಹುದಾಗಿದೆ. ಬೋಡೋಗಳನ್ನು ಹೇಗೆ ಅಸ್ಸಾಂ ಸರ್ಕಾರ ಶೋಷಿಸುತ್ತಿದೆಯೋ ಹಾಗೆಯೇ 1956 ರವರೆಗೆ ತಮ್ಮದೇ `ಸಿ’ ರಾಜ್ಯವಾಗಿದ್ದ ಕೊಡವ ರನ್ನು ರಾಜ್ಯ ಪುನರ್ ಘಟನೆಯ ನಂತರ ಕರ್ನಾಟಕವು ನಿರಂತರವಾಗಿ ಶೋಷಿ ಸುತ್ತಾ ಬಂದಿದೆ. ಆದರೆ, ಬೋಡೋಗಳು ತೀವ್ರಗಾಮಿತ್ವದ ಮೂಲಕ ಹಿಂಸಾತ್ಮಕ ರೂಪದಲ್ಲಿ ತಮ್ಮ ಬಯಕೆ, ಅಭಿಲಾಷೆ ಯನ್ನು ವ್ಯಕ್ತಪಡಿಸಿದರೆ, ಕೊಡವರು ಅತ್ಯಂತ ಸುಸಂಸ್ಕøತ ಮತ್ತು ಶಿಷ್ಟ ಮಾರ್ಗದಲ್ಲಿ ಶಾಂತಿ ಯುತವಾಗಿ ತಮ್ಮ ಆಶೋತ್ತರದ ಉತ್ಕ ಟತೆ ಮತ್ತು ಅಭಿಲಾಷೆಗಳನ್ನು ಪ್ರಕಟಪಡಿ ಸುತ್ತಾ ಬಂದಿದ್ದಾರೆ. ಇದನ್ನು ಕೊಡವರ ದೌರ್ಬಲ್ಯ ಅಥವಾ ಅನರ್ಹತೆ ಎಂದು ಸರ್ಕಾರ ಪರಿಗಣಿಸಬಾರದು. ಕಾಶ್ಮೀರಿ ಪಂಡಿತರು ಹೇಗೆ ಕಾಶ್ಮೀರಕ್ಕೆ ಆದಿಮಸಂಜಾತರೋ ಅದೇ ರೀತಿ ಕೊಡಗಿಗೆ ಕೊಡವರು ಆದಿಮ ಸಂಜಾತರು. ಕೊಡಗಲ್ಲದೇ ಕೊಡಗಿನಿಂದ ಹೊರಗೆ ಕೊಡವರಿಗೆ ಸಂಸ್ಕøತಿ ತಾಯಿ ಬೇರುಗಳಿಲ್ಲ. ಕೊಡಗಿನಲ್ಲಿ ನೆಲೆಸಿರುವ ಇತರರೆಲ್ಲರಿಗೂ ಅನ್ಯ ಪ್ರದೇಶಗಳಲ್ಲಿ ಅವರ ತಾಯಿ ಬೇರಿದೆ ಎಂದು ಹೇಳಿದರು.

ಕೊಡವರನ್ನು ವಿಶೇಷವಾದ ಯೋಧ ಬುಡಕಟ್ಟು ಮತ್ತು ಜನಾಂಗೀಯ ಬುಡಕಟ್ಟು ಎಂದು ಘೋಷಿಸಬೇಕು. ಆದರೆ ಸಂವಿ ಧಾನದಲ್ಲಿ ಆ ವ್ಯವಸ್ಥೆ ಇಲ್ಲದ ಕಾರಣ ಸದ್ಯಕ್ಕೆ ಎಸ್‍ಟಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು. ಸಿಎನ್‍ಸಿಯ ದೀರ್ಘ ಕಾಲದ ಹಕ್ಕೊತ್ತಾಯಗಳನ್ನು ಪರಿಗಣಿಸಿದ ಸಂವಿಧಾನ ಪುನರ್ ಘಟನಾ ಆಯೋ ಗವು 2002ರಲ್ಲಿ ಸಂವಿಧಾನದ 371ನೇ ವಿಧಿಯಂತೆ ಪ್ರತ್ಯೇಕ ಸ್ವಾಯತ್ತ ಕೊಡಗು ಅಭಿವೃದ್ಧಿ ಪರಿಷತ್ ಸ್ಥಾಪಿಸಲು ಶಿಫಾರಸು ಮಾಡಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರ ಹ್ಮಣ್ಯನ್ ಸ್ವಾಮಿ ಈ ವಿಷಯಕ್ಕೆ ಒತ್ತು ನೀಡಿ, ಕೊಡವ ಸ್ವಾಯತ್ತ ಪರಿಷತ್ ರಚನೆಗೆ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದಾರೆ.

ಇಂದು ಕೊಡವ ಬುಡಕಟ್ಟು ಜನರು ತಮ್ಮ ತಾಯಿನೆಲದಲ್ಲಿ ಅನಾಥರಾಗಿ ಸಂವಿ ಧಾನದ ಮೂಲಕ ಜಾರಿಯಾಗುವ ಪರಿ ಕಲ್ಪನೆಗಳಾದ ಸ್ಟೇಟ್, ವೆಲ್ಫೇರ್ ಸ್ಟೇಟ್ ಮತ್ತು ಗಣರಾಜ್ಯ ಪರಿಕಲ್ಪನೆಯ ಎಲ್ಲಾ ಸಬಲೀ ಕರಣ ಯೋಜನೆಯಿಂದ ವಂಚಿತರಾಗಿ ದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೋಡೋಲ್ಯಾಂಡ್ ಒಪ್ಪಂದದ ಅನುಷ್ಠಾನ ಮಾಡಲು ಕೈಗೊಳ್ಳಲಿರುವ ಸಂವಿಧಾನ ತಿದ್ದುಪಡಿ ಕಸರತ್ತಿನೊಂದಿಗೆ `ಕೊಡವ ಲ್ಯಾಂಡ್’ ಭೂ ರಾಜಕೀಯ ಆಶೋತ್ತರ ಗಳನ್ನು ಸಂವಿಧಾನಾತ್ಮಕವಾಗಿ ಸ್ವೀಕರಿಸುವ ಮೂಲಕ ಕೊಡವರ ದೀರ್ಘ ಕಾಲದ ಶಾಸನಬದ್ಧ ಅಭಿಲಾಷೆಯನ್ನು ಈಡೇರಿ ಸುವ ಇಚ್ಛಾಶಕ್ತಿ ಪ್ರದರ್ಶಿಸಲಿ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಮುಖಂಡರಾದ ಅಪ್ಪಾರಂಡ ರೀನಾ ಪೂವಣ್ಣ, ಕಲಿಯಂಡ ಪ್ರಕಾಶ್, ಚಂಬಂಡ ಜನತ್ ಕುಮಾರ್, ಅಪ್ಪಾ ರಂಡ ಪೂವಣ್ಣ ಉಪಸ್ಥಿತರಿದ್ದರು.

Translate »