ಮೈಸೂರು,ಫೆ.19(ಎಂಟಿವೈ)- ಮೈಸೂರು ಆಕಾಶವಾಣಿ ವೃತ್ತದ ಬಳಿ ಬುಧವಾರ ಬೆಳಿಗ್ಗೆ ಮೋಟಾರ್ ಬೈಕ್ ಹಾಗೂ ಮಿನಿಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂ ಕಿನ ಸೀತಾಪುರ ಗ್ರಾಮದ ನಾರಾಯಣಪ್ಪ (50) ಮೃತರು. ಹೆಲ್ಮೆಟ್ ಧರಿಸಿದ್ದರೂ, ನೆಲಕ್ಕೆ ಬಿದ್ದ ರಭಸಕ್ಕೆ ಹೆಲ್ಮೆಟ್ ಹಾರಿ ಹೋಗಿದೆ. ಇದರಿಂದ ಹಿಂಬದಿ ಚಕ್ರ ಹರಿದು ಸಾವಿಗೀಡಾಗಿದ್ದಾರೆ. ನಂಜನಗೂಡು ರಸ್ತೆಯ ಶಕ್ತಿಧಾಮದಲ್ಲಿ ಗಾರೆ ಕೆಲಸಕ್ಕೆಂದು ಬೈಕ್‍ನಲ್ಲಿ ತೆರಳುವಾಗ ಈ ದುರ್ಘಟನೆ ನಡೆದಿದೆ. ಮೇಸ್ತ್ರ್ರಿಯೊಬ್ಬರ ಬಳಿ ಸೀತಾಪುರದ…
ಮೈಸೂರಿನ ಪ್ರವಾಸಿ ತಾಣಗಳಿಗೆ ಆನ್‍ಲೈನ್ ಟಿಕೆಟ್ ಜಾರಿಗೆ ಚಿಂತನೆ
February 20, 2020ಮೈಸೂರು, ಫೆ.19- ಮೈಸೂರು ನಗರವು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ನಗರದ ವಿವಿಧ ಪ್ರವಾಸಿ ತಾಣಗಳಿಗೆ ದೇಶ, ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯು ಬುಕ್ ಮೈ ಶೋ ಆಪ್ ಸಹಯೋಗದಲ್ಲಿ ಸಿಟಿ ಪಾಸ್ ಹಾಗೂ ಸಿಂಗಲ್ ಟಿಕೆಟಿಂಗ್ ಸಿಸ್ಟಮ್ ಜಾರಿ ಮಾಡಲು ಉದ್ದೇಶಿಸಿ ಕರ್ನಾಟಕ ರಾಜ್ಯ ಪ್ರವಾ ಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಲಾಯಿತು. ನಗರದ ಹೋಟೆಲ್ ಮಯೂರದಲ್ಲಿ ನಡೆದ ಸಭೆಯಲ್ಲಿ ವ್ಯವ ಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್…
ಕಲೆಯಿಂದ ಮನುಷ್ಯನ ಬದುಕು ಅರ್ಥಪೂರ್ಣ
February 20, 2020ಮೈಸೂರು,ಫೆ.19-ನಗರದ ವಿ.ವಿ.ಮೊಹಲ್ಲಾದಲ್ಲಿರುವ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಸುರಭಿ ಗಾನಕಲಾ ಮಂದಿರ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀಪುರಂದರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ-2020 ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಾಪೋಷಕ, ಕೈಗಾ ರಿಕೋದ್ಯಮಿ ಕೆ.ವಿ.ಮೂರ್ತಿಯವರು ‘ಕಲಾ ಸೇವಾರತ್ನ’ ಪ್ರಶಸ್ತಿ ಸ್ವೀಕರಿಸಿ, ಮಾತ ನಾಡುತ್ತಾ, ಕಲೆಯಿಂದ ನಮ್ಮ ಬದುಕು ಅರ್ಥಪೂರ್ಣ. ಸಾಹಿತ್ಯ, ಸಂಗೀತ, ನೃತ್ಯ, ಯಕ್ಷಗಾನ ಮನುಷ್ಯನಿಗೆ ವಿಶೇಷ ಆನಂದ ಮತ್ತು ತೃಪ್ತಿಯನ್ನು ತರುವುದಲ್ಲದೇ, ಮನಸ್ಸನ್ನೂ ಸಂತೋಷದಿಂದಿರಿಸಲು ಸಹಾಯಕವಾಗುತ್ತದೆಂದು ಹೇಳಿದರಲ್ಲದೇ, ಪುರಾಣ ಕಾಲದಲ್ಲಿ ಸಂಗೀತವು…
ಸಿಎಎ ವಿರುದ್ಧದ ಹೋರಾಟ ದಮನ: ಪೊಲೀಸ್ ವಿರುದ್ಧ ಮಾನವಹಕ್ಕು ಆಯೋಗಕ್ಕೆ ಸಿಎಫ್‍ಐ ದೂರು
February 20, 2020ಮೈಸೂರು, ಫೆ.19(ಆರ್‍ಕೆಬಿ)-ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹೋರಾಟ ದಮನಿಸಲು ರಾಜ್ಯದ ಪೊಲೀಸರು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗ ಗಂಭೀರ ಗಮನ ಹರಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‍ಐ) ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಪೊಲೀಸ್ ಇಲಾಖೆ ಆರ್‍ಎಸ್‍ಎಸ್ ನಿರ್ದೇಶನದಂತೆ ನಡೆಯು ತ್ತಿರುವ ಶಂಕೆ ಇದೆ. ಮೈಸೂರಲ್ಲಿ `ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ ವಿದ್ಯಾರ್ಥಿನಿಗೆ 10 ಗಂಟೆ ವಿಚಾರಣೆ ನೆಪದಲ್ಲಿ ಮಾನಸಿಕ ಹಿಂಸೆ ನೀಡಲಾಗಿದೆ. ರಾಯಚೂರಲ್ಲಿ ಸಿಎಎ…
ಆಯುರ್ ಮಟಂ ಸಂಸ್ಥೆಯಿಂದ ಆಯುರ್ವೇದ ಸಹಾಯಕ ಚಿಕಿತ್ಸಕರ ತರಬೇತಿ
February 20, 2020ಪಂಚಕರ್ಮ, ಯೋಗ ವಿಜ್ಞಾನ, ಮರ್ಮ ಚಿಕಿತ್ಸಾ ಪದ್ಧತಿಯ ಸರ್ಟಿಫಿಕೇಟ್ ಕೋರ್ಸ್ ಮೈಸೂರು,ಫೆ.19(ಆರ್‍ಕೆಬಿ)-ಮೈಸೂರಿನಲ್ಲಿ ನೆಲೆಗೊಂಡಿರುವ `ಆಯುರ್ ಮಟಂ ಅಕಾಡೆಮಿಕ್ ಇನ್ಸ್‍ಟಿಟ್ಯೂಟ್ ಆಫ್ ಆಯುರ್ವೇದ ಅಂಡ್ ಯೋಗಿಕ್ ಸೈನ್ಸ್’ ಸಂಸ್ಥೆಯು ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದು ಹೊಸದಾಗಿ ಶೈಕ್ಷಣಿಕ ಕೋರ್ಸ್ ಗಳನ್ನು ಆರಂಭಿಸುತ್ತಿದೆ ಎಂದು ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಡಾ.ಮನು ಬಿ.ಮೆನನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ, ಆಯುರ್ವೇದ ವೈದ್ಯಕೀಯ ಮಾದರಿ ಚಿಕಿತ್ಸಾ ತರಬೇತಿ ನೀಡುವ ಸಂಸ್ಥೆ…
ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದ `ಗಾಂಧಿ ಪಥ’ ಹಿನ್ನಡೆ
February 18, 2020ಮೈಸೂರು, ಫೆ.17(ಪಿಎಂ)- ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದು, ಈ ಅವಧಿಯಲ್ಲಿ ನಮ್ಮ ಜನಪ್ರತಿನಿಧಿಗಳು ಇಚ್ಛಾ ಸಕ್ತಿ ಪ್ರದರ್ಶಿಸಿದ್ದರೆ ಗಾಂಧಿಯ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತಿತ್ತು. ಗಾಂಧಿಯ ಪಥದಲ್ಲಿ ಮುನ್ನಡೆಯುವ ಬದಲು ಹಿಮ್ಮುಖ ಚಲನೆಯಲ್ಲಿದ್ದೇವೆಯೇ ಎಂಬ ಆತಂಕ ಎದುರಾಗಿದೆ ಎಂದು ಲೇಖಕಿ ರೂಪಾ ಹಾಸನ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರ ಆವರಣದ ಸಂಪತ್ ರಂಗ ಅಂಗಳದಲ್ಲಿ ರಂಗಾಯಣದ ಬಹುರೂಪಿ ನಾಟಕೋತ್ಸವದ ಅಂಗವಾಗಿ ನಡೆಯು ತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ಸೋಮವಾರ `ಗಾಂಧಿ-ಗ್ರಾಮ…
`ಸತ್ತರೂ ಸಮಾಧಿಯಿಂದಲೇ ಮಾತನಾಡುತ್ತೇನೆ’ ಎಂದ ಗಾಂಧಿ ಮಾತು ಮಾತ್ರ ಸಾರ್ವಕಾಲಿಕ
February 18, 2020ಮೈಸೂರು,ಫೆ.17(ಎಸ್‍ಬಿಡಿ)-`ನಾನು ಸತ್ತರೂ ಸಮಾಧಿ ಯಿಂದಲೇ ಮಾತನಾಡುತ್ತೇನೆ’ ಎಂಬ ಗಾಂಧಿ ಮಾತು ಸಾರ್ವಕಾಲಿಕವಾದುದು ಎಂದು ಬೆಂಗಳೂರು ವಿವಿ ಸೆಂಟರ್ ಫಾರ್ ಗಾಂಧಿಯನ್ ಸ್ಟಡೀಸ್‍ನ ನಿರ್ದೇಶಕ, ವಿಮರ್ಶಕ ನಟರಾಜ್ ಹುಳಿಯಾರ್ ಹೇಳಿದರು. `ಗಾಂಧಿ ಪಥ’ ರಾಷ್ಟ್ರೀಯ ವಿಚಾರ ಸಂಕಿರಣದ ಕೊನೆಯ ಗೋಷ್ಠಿಯಲ್ಲಿ `ಗಾಂಧಿ- ಅಭಿವ್ಯಕ್ತಿ ಮಾಧ್ಯಮ’ ಕುರಿತು ವಿಷಯ ಮಂಡಿಸಿದ ಅವರು, ಎಲ್ಲಾ ಕ್ಷೇತ್ರದಲ್ಲೂ ಗಾಂಧಿ ಪ್ರಭಾವವಿದೆ. ಎಲ್ಲಾ ಚಳವಳಿಗಳಲ್ಲೂ ಗಾಂಧಿ ಇದ್ದಾರೆ. ಎನ್‍ಆರ್‍ಸಿ, ಸಿಎಎ ವಿರುದ್ಧ ಹೋರಾಟ ನಡೆಸುತ್ತಿರುವ ಮಹಿಳೆಯರಿಗೂ ಗಾಂಧಿಯೇ ಶಕ್ತಿಯಾಗಿ ದ್ದಾರೆ. ಯಾವುದೇ ಪ್ರತಿಭಟನೆಯಲ್ಲಿ ಗಾಂಧಿ…
ಪ್ರೇಕ್ಷಕರ ಮೂಕವಿಸ್ಮಿತರನ್ನಾಗಿಸಿದ ಕಚ-ದೇವಯಾನಿ ಯಕ್ಷಗಾನ
February 18, 2020ಮೈಸೂರು,ಫೆ.17(ವೈಡಿಎಸ್)-ಶುಕ್ರಾ ಚಾರ್ಯನ ಪುತ್ರಿ ದೇವಯಾನಿಯು ಕಚನನ್ನು ಕಂಡು ಮೋಹಿತಳಾಗುತ್ತಾಳೆ. ವಿಷಯ ತಿಳಿದ ದಾನವರು, ಕಚನನ್ನು ಹತ್ಯೆ ಗೈಯ್ಯುತ್ತಾರೆ. ಆದರೆ, ಶುಕ್ರಾಚಾ ರ್ಯರು ಸಂಜೀವಿನೀ ಮಂತ್ರಬಲ ದಿಂದ ಕಚನನ್ನು ಬದುಕಿಸುವ ಪ್ರಸಂಗ ಗಳು ಪ್ರೇಕ್ಷಕರ ಮನಗೆದ್ದವು. `ಗಾಂಧಿ ಪಥ’ ಶೀರ್ಷಿಕೆಯಡಿ ಆಯೋ ಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವದ 4ನೇ ದಿನವಾದ ಸೋಮ ವಾರ, ವನರಂಗದಲ್ಲಿ ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್ ತಂಡದವರು ಕೃಷ್ಣಮೂರ್ತಿ ತುಂಗ ನಿರ್ದೇಶನದ `ಕಚ-ದೇವ ಯಾನಿ’ (ಕನ್ನಡ) ಯಕ್ಷಗಾನದಲ್ಲಿ ದೇವ ಗುರುವಾದ ಬೃಹಸ್ಪತಿಯ ಪುತ್ರ…
ಪತ್ರಿಕೆಗಳ ಓದುಗರು ಕಡಿಮೆಯಾಗಲು ಡಿಜಿಟಲ್ ಮಾಧ್ಯಮ ಕಾರಣವಲ್ಲ
February 18, 2020ಮೈಸೂರು, ಫೆ.17(ಪಿಎಂ)- ಪತ್ರಿಕೆಗಳ ಓದುಗರು ಕಡಿಮೆಯಾಗಲು ಡಿಜಿಟಲ್ ಮಾಧ್ಯಮ ಕಾರಣ ಎಂಬ ಮಾತಿದೆ. ಆದರೆ ಇದು ವಾಸ್ತವವಲ್ಲ. ಬದಲಿಗೆ ಜನಪರ ವಿಷಯಗಳಿಗೆ ಆದ್ಯತೆ ನೀಡದೇ ಇರುವುದೇ ಇದಕ್ಕೆ ಕಾರಣ ಎಂದು ಪತ್ರಕರ್ತ ಹೃಷಿ ಕೇಶ್ ಬಹದ್ದೂರ್ ದೇಸಾಯಿ ಹೇಳಿದರು. ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರ ಆವರಣದ ಸಂಪತ್ ರಂಗ ಅಂಗಳ ದಲ್ಲಿ ರಂಗಾಯಣದ ಬಹುರೂಪಿ ನಾಟ ಕೋತ್ಸವದ ಅಂಗವಾಗಿ ನಡೆಯುತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ `ಗಾಂಧಿ -ಪತ್ರಿಕೋದ್ಯಮ’ ಕುರಿತು ಮಾತನಾಡಿದ ಅವರು, ಜನ ಪತ್ರಿಕೆಗಳಿಂದ ದೂರವಾಗಲು ಕಾರಣ…
ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಜೊತೆಗೆ ಎಸ್‍ಟಿ ಸ್ಥಾನಮಾನಕ್ಕೆ ಸಿಎನ್‍ಸಿ ಆಗ್ರಹ
February 18, 2020ಮೈಸೂರು, ಫೆ.17(ಆರ್‍ಕೆಬಿ)- ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಜೊತೆಗೆ ಎಸ್‍ಟಿ ಸ್ಥಾನಮಾನ ನೀಡುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಸೋಮವಾರ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಬೋಡೋಲ್ಯಾಂಡ್ ಒಪ್ಪಂದದ ಜೊತೆಯಲ್ಲಿಯೇ ಕೊಡವ ಲ್ಯಾಂಡ್ ಸ್ವಾಯತ್ತತೆಗೆ ಸರ್ಕಾರ ಸಂಕಲ್ಪ ತೊಡಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಪ್ರಧಾನಿ, ಗೃಹಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಕೊಡಗಿನ ಆದಿಮ ಸಂಜಾತ ಬುಡಕಟ್ಟು ಸಮುದಾಯವಾದ ಕೊಡವರ…










