ಮೈಸೂರು,ಫೆ.19-ನಗರದ ವಿ.ವಿ.ಮೊಹಲ್ಲಾದಲ್ಲಿರುವ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಸುರಭಿ ಗಾನಕಲಾ ಮಂದಿರ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀಪುರಂದರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ-2020 ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಾಪೋಷಕ, ಕೈಗಾ ರಿಕೋದ್ಯಮಿ ಕೆ.ವಿ.ಮೂರ್ತಿಯವರು ‘ಕಲಾ ಸೇವಾರತ್ನ’ ಪ್ರಶಸ್ತಿ ಸ್ವೀಕರಿಸಿ, ಮಾತ ನಾಡುತ್ತಾ, ಕಲೆಯಿಂದ ನಮ್ಮ ಬದುಕು ಅರ್ಥಪೂರ್ಣ. ಸಾಹಿತ್ಯ, ಸಂಗೀತ, ನೃತ್ಯ, ಯಕ್ಷಗಾನ ಮನುಷ್ಯನಿಗೆ ವಿಶೇಷ ಆನಂದ ಮತ್ತು ತೃಪ್ತಿಯನ್ನು ತರುವುದಲ್ಲದೇ, ಮನಸ್ಸನ್ನೂ ಸಂತೋಷದಿಂದಿರಿಸಲು ಸಹಾಯಕವಾಗುತ್ತದೆಂದು ಹೇಳಿದರಲ್ಲದೇ, ಪುರಾಣ ಕಾಲದಲ್ಲಿ ಸಂಗೀತವು ಗಾಯನ ಮತ್ತು ವಾದನ ಎಂಬ ಎರಡು ವಿಧಗಳಲ್ಲಿ ಬಳಕೆಯಾಗುತ್ತಿದ್ದುದ್ದನ್ನು ಕಾಣಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತಗಳಲ್ಲಿಯೂ ಗಾಯನ ಮತ್ತು ವಾದನವನ್ನು ಕಾಣುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದು ತಿಳಿಸಿದರು.
ಸಂಗೀತ ಕ್ಷೇತ್ರದಲ್ಲಿ ಪುರಂದರರು ಮತ್ತು ತ್ಯಾಗರಾಜರ ಸಂಗೀತ ಕೀರ್ತನೆಗಳು ಎಂದೆಂದಿಗೂ ಅಜರಾಮರ ಎಂದು ತಿಳಿಸಿದ ಅವರು, ಇಂತಹ ಶಾಸ್ತ್ರೀಯ ಸಂಗೀತ ವನ್ನು ಇಂದಿನ ಯುವ ಜನಾಂಗ ಕಲಿತು ಮುಂದುವರಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುರಭಿ ಗಾನಕಲಾ ಮಂದಿರದ ಅಧ್ಯಕ್ಷರಾದ ಪ್ರಭಾಕರ್ ಮಾತನಾಡಿ, ಸುರಭಿ ಗಾನಕಲಾ ಮಂದಿರವು ಹತ್ತಾರು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಕೆ ಹೆಸರು ವಾಸಿಯಾಗಿದ್ದು, ಮೈಸೂರಿನ ಸಾಂಸ್ಕøತಿಕ ಕ್ಷೇತ್ರವಲ್ಲದೇ ರಾಜ್ಯದಾದ್ಯಂತ ಸಂಗೀತದ ಕಂಪನ್ನು ಪಸರಿಸಿರುವುದು ಶ್ಲಾಘನೀಯ ಎಂದರು. ನಂತರ ನಡೆದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಪುರಂದರರ ನವರತ್ನ ಕೃತಿಗಳ ಗೋಷ್ಠಿ ಗಾಯನ, ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ವಿದುಷಿ ಡಾ.ಸುಕನ್ಯಾ ಪ್ರಭಾಕರ್, ಕಾರ್ಯದರ್ಶಿ ಶ್ರೀಮತಿ ವಿಜಯಾ, ವಿದುಷಿ ಮೀರಾ ಮಂಜುನಾಥ್, ಕೇಶವ ಸರಳಾಯ, ರಾವiಪ್ರಸಾದ್, ಡಾ.ಸಿ.ಜಿ.ನರಸಿಂಹನ್ ಹಾಗೂ ಕ್ಯಾಪ್ಟನ್ ಆರ್.ಎ.ಮಂಜುನಾಥ್ ಉಪಸ್ಥಿತರಿದ್ದರು. ನಂತರ ಸಾಂಸ್ಕøತಿಕ ಕಾರ್ಯ ಕ್ರಮದಲ್ಲಿ ಶ್ರೀ ಪುರಂದರ ಮತ್ತು ಶ್ರೀ ತ್ಯಾಗರಾಜರ ಗೀತಗಾಯನ ಕಾರ್ಯಕ್ರಮ ನಡೆಯಿತು.