ಪ್ರೇಕ್ಷಕರ ಮೂಕವಿಸ್ಮಿತರನ್ನಾಗಿಸಿದ ಕಚ-ದೇವಯಾನಿ ಯಕ್ಷಗಾನ
ಮೈಸೂರು

ಪ್ರೇಕ್ಷಕರ ಮೂಕವಿಸ್ಮಿತರನ್ನಾಗಿಸಿದ ಕಚ-ದೇವಯಾನಿ ಯಕ್ಷಗಾನ

February 18, 2020

ಮೈಸೂರು,ಫೆ.17(ವೈಡಿಎಸ್)-ಶುಕ್ರಾ ಚಾರ್ಯನ ಪುತ್ರಿ ದೇವಯಾನಿಯು ಕಚನನ್ನು ಕಂಡು ಮೋಹಿತಳಾಗುತ್ತಾಳೆ. ವಿಷಯ ತಿಳಿದ ದಾನವರು, ಕಚನನ್ನು ಹತ್ಯೆ ಗೈಯ್ಯುತ್ತಾರೆ. ಆದರೆ, ಶುಕ್ರಾಚಾ ರ್ಯರು ಸಂಜೀವಿನೀ ಮಂತ್ರಬಲ ದಿಂದ ಕಚನನ್ನು ಬದುಕಿಸುವ ಪ್ರಸಂಗ ಗಳು ಪ್ರೇಕ್ಷಕರ ಮನಗೆದ್ದವು.

`ಗಾಂಧಿ ಪಥ’ ಶೀರ್ಷಿಕೆಯಡಿ ಆಯೋ ಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವದ 4ನೇ ದಿನವಾದ ಸೋಮ ವಾರ, ವನರಂಗದಲ್ಲಿ ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್ ತಂಡದವರು ಕೃಷ್ಣಮೂರ್ತಿ ತುಂಗ ನಿರ್ದೇಶನದ `ಕಚ-ದೇವ ಯಾನಿ’ (ಕನ್ನಡ) ಯಕ್ಷಗಾನದಲ್ಲಿ ದೇವ ಗುರುವಾದ ಬೃಹಸ್ಪತಿಯ ಪುತ್ರ ಕಚ, ದೇವತೆಗಳ ಪ್ರಾರ್ಥನೆಯಂತೆ ಅಸುರ ಗುರುವಾದ ಶುಕ್ರಾಚಾರ್ಯನ ಶಿಷ್ಯನಾಗಿ ಮೃತ ಸಂಜೀವಿನೀ ವಿದ್ಯೆಯನ್ನು ಪಡೆ ಯಲು ಪ್ರಯತ್ನಿಸುತ್ತಾನೆ. ಇದೇ ವೇಳೆ ಗುರುಗಳ ಪುತ್ರಿ ದೇವಯಾನಿ ಕಚನನ್ನು ಕಂಡು ಮೋಹಿತಳಾಗುತ್ತಾಳೆ. ಈ ವಿಷಯ ತಿಳಿದ ದಾನವರು, 2 ಬಾರಿ ಕಚನನ್ನು ಕೊಲೆ ಮಾಡುತ್ತಾರೆ. ಆದರೆ, ಶುಕ್ರಾಚಾರ್ಯರು ಪುತ್ರಿ ದೇವಯಾನಿಯ ಅಪೇಕ್ಷೆಯಂತೆ ಸಂಜೀ ವಿನಿ ಮಂತ್ರಬಲದಿಂದ 2 ಬಾರಿಯೂ ಕಚನನ್ನು ಬದುಕಿಸುವ ಸನ್ನಿವೇಶಗಳು ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದವು.

ಮತ್ತೆ ಬದುಕಿ ಬಂದ ಕಚನನ್ನು ದಾನ ವರು 3ನೇ ಬಾರಿ ಕೊಲ್ಲುತ್ತಾರೆ. ಆಗಲೂ ಮಗಳ ಬೇಡಿಕೆಯಂತೆ ಸಂಜೀವಿನೀ ವಿದ್ಯೆ ಯಿಂದ ಕಚನನ್ನು ಬದುಕಿಸುತ್ತಾನೆ. ಆದರೆ, ಗುರುಗಳ ಪುತ್ರಿ ಎಂಬ ಕಾರಣಕ್ಕೆ ಮದುವೆಯಾಗಲು ನಿರಾಕರಿಸುತ್ತಾನೆ. ಇದರಿಂದ ಕುಪಿತಗೊಂಡ ದೇವಯಾನಿ, ಕಚ ಕಲಿತ ದಿವ್ಯಮಂತ್ರ ಫಲಿಸದಿರಲೆಂದು ಶಪಿಸುವ ಪ್ರಸಂಗಗಳು ಸಭಿಕರ ಕಣ್ಣು ಗಳನ್ನು ತೇವವಾಗಿಸಿದವು.

ಭೂಮಿಗೀತ: ರಂಗಾಯಣ ಮೈಸೂರು ತಂಡವು ಸಿ.ಬಸವಲಿಂಗಯ್ಯ ನಿರ್ದೇ ಶನದ ಗಾಂಧಿ ವರ್ಸಸ್ ಗಾಂಧಿ (ಕನ್ನಡ) ನಾಟಕವು ಗಾಂಧೀಜಿ ಅವರ ವೈಯಕ್ತಿಕ ಬದುಕಿನ ವಿವರ ಹಾಗೂ ಕುಟುಂಬದ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ರಾಷ್ಟ್ರ ಪಿತನಾದ ಗಾಂಧೀಜಿ ಅವರು ತನ್ನ ಉದರದಲ್ಲಿ ಜನಿಸಿದ ಮಕ್ಕಳಿಗೂ ಆಡಂಬರವಿಲ್ಲದ ತಂದೆಯಾಗಿ ಬದು ಕುವ ಮಾರ್ಗ ತೋರಿಸಿದ ಮತ್ತು ಸತ್ಯಾನ್ವೇಷಣೆಗೆ ಮುಖಾಮುಖಿಯಾದ ಅಂಶಗಳು, ತಂದೆ ಗಾಂಧಿ ಮತ್ತು ಪುತ್ರ ಹರಿಲಾಲ್ ನಡುವಿನ ಸಂಘರ್ಷ ಗಳನ್ನು ಒಳಗೊಂಡ ನಾಟಕವಾಗಿದೆ.

ವನರಂಗ: ಮೈಸೂರು ನಟನ ಸಂಸ್ಥೆ ತಂಡದವರು ಮಂಡ್ಯ ರಮೇಶ್ ನಿರ್ದೆ ಶನದ ಸುಭದ್ರಾ ಕಲ್ಯಾಣ(ಕನ್ನಡ) ನಾಟ ಕವು ಸಂಗೀತಮಯ ನಾಟಕವಾಗಿದ್ದು, ಮಹಾಭಾರತದಿಂದ ಆಯ್ದ ಸುಭದ್ರಾ ಪ್ರಹಸನ ಮತ್ತು ಸುಭದ್ರಾಕಲ್ಯಾಣದ ಕಥೆಯನ್ನು ಒಳಗೊಂಡಿದೆ. ಬಲರಾಮ ತನ್ನ ಸಹೋದರಿ ಸುಭದ್ರೆಯನ್ನು ದುರ್ಯೋಧನನಿಗೆ ಕೊಡಲು ನಿಶ್ಚಯಿ ಸುತ್ತಾನೆ. ಇದನ್ನರಿತ ಅರ್ಜುನ ಶ್ರೀ ಕೃಷ್ಣನ ಸಹಾಯದೊಂದಿಗೆ ಕಪಟ ಮುನಿಯ ವೇಷದಲ್ಲಿ ದ್ವಾರಕೆಯನ್ನು ಪ್ರವೇಶಿಸಿ, ಸುಭದ್ರೆಯನ್ನು ಅಪಹರಿಸಿ, ವಿವಾಹವಾಗುತ್ತಾನೆ.

ಕಿರುರಂಗ ಮಂದಿರ: ದೆಹಲಿಯ ದ ಹೌಸ್‍ಫುಲ್ ಥಿಯೇಟರ್ ಕಂಪೆನಿ ತಂಡವು ರಾಜೇಶ್ ಸಿಂಗ್ ನಿರ್ದೇಶನದ `ದ ಬ್ಲ್ಯಾಕ್ ಬೋರ್ಡ್ ಲ್ಯಾಂಡ್ (ಹಿಂದಿ/ ಇಂಗ್ಲಿಷ್) ನಾಟಕವು ಯುದ್ಧಗಡಿಯ ಪ್ರತ್ಯೇಕ ಸ್ಥಳಗಳಲ್ಲಿ ಸಿಲುಕಿಕೊಂಡ ಮೂವರನ್ನು ಕುರಿತ ನಾಟಕವಾಗಿದೆ.

Translate »