`ಸತ್ತರೂ ಸಮಾಧಿಯಿಂದಲೇ ಮಾತನಾಡುತ್ತೇನೆ’ ಎಂದ ಗಾಂಧಿ ಮಾತು ಮಾತ್ರ ಸಾರ್ವಕಾಲಿಕ
ಮೈಸೂರು

`ಸತ್ತರೂ ಸಮಾಧಿಯಿಂದಲೇ ಮಾತನಾಡುತ್ತೇನೆ’ ಎಂದ ಗಾಂಧಿ ಮಾತು ಮಾತ್ರ ಸಾರ್ವಕಾಲಿಕ

February 18, 2020

ಮೈಸೂರು,ಫೆ.17(ಎಸ್‍ಬಿಡಿ)-`ನಾನು ಸತ್ತರೂ ಸಮಾಧಿ ಯಿಂದಲೇ ಮಾತನಾಡುತ್ತೇನೆ’ ಎಂಬ ಗಾಂಧಿ ಮಾತು ಸಾರ್ವಕಾಲಿಕವಾದುದು ಎಂದು ಬೆಂಗಳೂರು ವಿವಿ ಸೆಂಟರ್ ಫಾರ್ ಗಾಂಧಿಯನ್ ಸ್ಟಡೀಸ್‍ನ ನಿರ್ದೇಶಕ, ವಿಮರ್ಶಕ ನಟರಾಜ್ ಹುಳಿಯಾರ್ ಹೇಳಿದರು.

`ಗಾಂಧಿ ಪಥ’ ರಾಷ್ಟ್ರೀಯ ವಿಚಾರ ಸಂಕಿರಣದ ಕೊನೆಯ ಗೋಷ್ಠಿಯಲ್ಲಿ `ಗಾಂಧಿ- ಅಭಿವ್ಯಕ್ತಿ ಮಾಧ್ಯಮ’ ಕುರಿತು ವಿಷಯ ಮಂಡಿಸಿದ ಅವರು, ಎಲ್ಲಾ ಕ್ಷೇತ್ರದಲ್ಲೂ ಗಾಂಧಿ ಪ್ರಭಾವವಿದೆ. ಎಲ್ಲಾ ಚಳವಳಿಗಳಲ್ಲೂ ಗಾಂಧಿ ಇದ್ದಾರೆ. ಎನ್‍ಆರ್‍ಸಿ, ಸಿಎಎ ವಿರುದ್ಧ ಹೋರಾಟ ನಡೆಸುತ್ತಿರುವ ಮಹಿಳೆಯರಿಗೂ ಗಾಂಧಿಯೇ ಶಕ್ತಿಯಾಗಿ ದ್ದಾರೆ. ಯಾವುದೇ ಪ್ರತಿಭಟನೆಯಲ್ಲಿ ಗಾಂಧಿ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರ ಇದ್ದೇ ಇರುತ್ತದೆ. `ನಾನು ಸಾಯುವುದಿಲ್ಲ. ಸತ್ತರೂ ಸಮಾಧಿಯಿಂದಲೇ ಮಾತನಾ ಡುತ್ತೇನೆ’ ಎಂಬ ಗಾಂಧಿಯ ಮಾತು ಸಾರ್ವಕಾಲಿಕ. ಎಲ್ಲರೂ ಗಾಂಧಿ ಪಥದಲ್ಲೇ ಸಾಗೋಣ ಎಂದರು.

ಸಾಹಿತ್ಯದ ಎಲ್ಲಾ ಪ್ರಕಾರದಲ್ಲೂ ಗಾಂಧಿಯಂತೆ ಹಾಜರಿ ಇರುವ ಮತ್ತೋರ್ವ ವ್ಯಕ್ತಿಯಿಲ್ಲ. ಕನ್ನಡ ಸಂಸ್ಕøತಿಯಲ್ಲಿ ಗಾಂಧಿ ನಿಧಾನವಾಗಿ ಪಸರಿಸಿದ್ದಾರೆ. 12 ವರ್ಷದ ಬಾಲಕ ನಾಗಿದ್ದಾಗ ಭಾರತ ಒಂದು ಸುಂದರ ತೋಟವಾಗಿ ಕನ ಸಲ್ಲಿ ಕಂಡಿದ್ದನ್ನು 1948ರಲ್ಲಿ ಅವರ ಕಡೇ ಭಾಷಣ ದಲ್ಲಿ ಪ್ರಸ್ತಾಪಿಸಿ, ಅದನ್ನು ನನಸು ಮಾಡುವಂತೆ ಕೋರಿ ದ್ದರು. ಈ ಕಲ್ಪನೆ ರಾಷ್ಟ್ರಕವಿ ಕುವೆಂಪು ಅವರ `ಸರ್ವ ಜನಾಂಗದ ಶಾಂತಿಯ ತೋಟ’ ಸಾಲಿನಲ್ಲೂ ಕಾಣಬಹುದು. ಗಾಂಧಿಯ ಬಗ್ಗೆ ಓದಿಕೊಂಡಿದ್ದೇ ನನ್ನ ಧೈರ್ಯದ ಮೂಲ ಎಂದು ಡಾ.ಸಿದ್ದಲಿಂಗಯ್ಯ ಹೇಳಿಕೊಂಡಿದ್ದರು. ಕಾರಂತರ `ಚೋಮನದುಡಿ’ಯಲ್ಲಿ ಗಾಂಧಿ ದೃಷ್ಟಿಕೋನ ಕಾಣಬಹುದು. ಲಂಕೇಶರ ಮಾಧ್ಯಮ ಕೃಷಿಯಲ್ಲೂ ಗಾಂಧಿ ಪ್ರಭಾವವಿತ್ತು. ಕನ್ನಡದ ಶ್ರೇಷ್ಠ ಲೇಖಕರು ಗಾಂಧಿಯನ್ನು ಒಪ್ಪುತ್ತಾರೆ. ವಿಮರ್ಶಾತ್ಮಕವಾಗಿ ಗಾಂಧಿಗೆ ಹತ್ತಿರವಾಗು ತ್ತಾರೆ. ಗಾಂಧಿಯನ್ನು ಒಪ್ಪದವರು ಶ್ರೇಷ್ಠ ಲೇಖಕರಲ್ಲ ಅಂದುಕೊಳ್ಳಬಹುದು. ಬಾಪು ಹಾಗೂ ಬಾಬಾ ಇಬ್ಬರೂ ಬೇಕು ಎಂಬ ಸಂದೇಶವನ್ನು ಕನ್ನಡ ಸಾಹಿತ್ಯ ಸಾರಿದೆ. ಹೀಗೆ ಈವರೆಗೂ ಸಾಹಿತ್ಯ, ನಾಟಕ, ಮಾಧ್ಯಮ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಒಂದಿಲ್ಲೊಂದು ರೀತಿಯಲ್ಲಿ ಗಾಂಧಿಯ ಪ್ರಭಾವವಿದೆ ಎಂದು ತಿಳಿಸಿದರು.

ಗಾಂಧಿಯನ್ನು ಸರಿಯಾಗಿ ಓದಿಕೊಳ್ಳದ ಕಾರಣ ಗೊಂದಲಗಳಿವೆ. ಅಂದಿನ ಮೂಲಭೂತವಾದಿಗಳು ಗಾಂಧಿ ಯನ್ನು ಮುಗಿಸಲು ಹುನ್ನಾರ ನಡೆಸಿದರು. ಇಂದಿನ ಮೂಲ ಭೂತವಾದಿಗಳು ಅದನ್ನು ಮುಂದುವರೆಸಿದ್ದಾರೆ. ಗಾಂಧಿ ಹಾಗೂ ಡಾ.ಅಂಬೇಡ್ಕರ್ ಅವರನ್ನು ವಿರುದ್ಧ ಧೃವಗಳಾಗಿ ರಾಜಕೀಯ ಪಕ್ಷಗಳು ಸೃಷ್ಟಿಸಿವೆ. ಇದನ್ನು ನಾವು ಒಪ್ಪುವ ಅಗತ್ಯವಿಲ್ಲ ಎಂದ ಅವರು, ಕಾರಂತರು, ಪ್ರಸನ್ನ, ಜನ್ನಿ ಸೇರಿದಂತೆ ಅನೇಕರು ರಂಗಾಯಣವನ್ನು ಬೆಳೆಸಿದ್ದಾರೆ. ಹಾಲಿ ಅಡ್ಡಂಡ ಕಾರ್ಯಪ್ಪ ಅವರು ನಿರ್ದೇಶಕರಾಗಿದ್ದಾರೆ. `ಗಾಂಧಿ ಪಥ’ ಆಶಯದೊಂದಿಗೆ `ಬಹುರೂಪಿ’ ಸಂಘಟಿ ಸಿರುವುದು ಅಭಿನಂದನಾರ್ಹ ಎಂದು ಹೇಳಿದರು.

`ಆಧುನಿಕ ಭಾರತದ ಕಣ್ಣಲ್ಲಿ ಗಾಂಧಿ’ ಕುರಿತು ವಿಷಯ ಮಂಡಿಸಬೇಕಿದ್ದ ಪ್ರೊ.ಪೃಥ್ವಿದತ್ತ ಚಂದ್ರಶೋಭಿ ಕಾರಣಾಂ ತರಗಳಿಂದ ಆಗಮಿಸಿರಲಿಲ್ಲ. ಅವರು ಇ-ಮೇಲ್ ಮೂಲಕ ಕಳುಹಿಸಿದ್ದ ವಿಚಾರವನ್ನು ಅವರ ತಾಯಿ ನಿವೃತ್ತ ಅಧ್ಯಾ ಪಕಿ ಸರಸ್ವತಿ ಗೋಷ್ಠಿಯಲ್ಲಿ ಮಂಡಿಸಿದರು. ಲೇಖಕಿ ಲೀಲಾ ಅಪ್ಪಾಜಿ, ವಿಷಯ ಮಂಡನೆಗೆ ಸ್ಪಂದನೆ ವ್ಯಕ್ತಪಡಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ, ಚಿಂತಕ ಪ್ರೊ. ಹೆಚ್.ಎಸ್.ಶಿವಪ್ರಕಾಶ್, ಗಾಂಧಿ ದೇಹ ತ್ಯಜಿಸಿದ ಮೇಲೆ ಸುಂದರ ಕಂಪು ಬಿಟ್ಟು ಹೋಗಿದ್ದಾರೆ. ಒಪ್ಪದವರೂ ಕೂಡ ಗಾಂಧಿಯನ್ನು ಕೊಂಡಾಡಿದ್ದಾರೆ. ಗಾಂಧಿ ಅವರದ್ದು ಹೆಂಗ ರುಳ ರಾಷ್ಟ್ರೀಯವಾದವಾಗಿತ್ತು. ಗಾಂಧಿಯ ಬಗ್ಗೆ ಇನ್ನೂ ಹೆಚ್ಚು ಪುಸ್ತಕಗಳ ಅನುವಾದವಾಗಬೇಕು ಎಂದರಲ್ಲದೆ, ಕನ್ನಡ ನಾಟಕ ಸಂಸ್ಕøತಿಗೆ ಕೊಡಗಿನ ಕೊಡುಗೆ ಅಪಾರ ವಾದುದು. ಆ ಪರಂಪರೆಯಿಂದ ಕಾರ್ಯಪ್ಪ ಬಂದಿದ್ದಾರೆ. ಗಾಂಧಿ ಪಥದಂತಹ ಸ್ತುತ್ಯಾರ್ಹ ಪ್ರಯತ್ನ ಮುಂದು ವರೆಸಲಿ ಎಂದು ಆಶಿಸಿದರು.

Translate »