ಮೈಸೂರು,ಫೆ.23(ಎಂಟಿವೈ)- ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳ ಹಾಗೂ ಸಾಮೂಹಿಕ ವಿವಾಹಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಮುಜರಾಯಿ ಇಲಾಖೆ ಏ.26ರಂದು ಚಾಮುಂಡಿಬೆಟ್ಟದಲ್ಲಿ `ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಆಯೋಜಿಸಿದ್ದು, ಅದರ ಪ್ರಚಾರ ರಥಕ್ಕೆ ಗುರುವಾರ ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರಸ್ವಾಮಿ ದೇವಾ ಲಯದ ಬಳಿ ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪೂರ್ಣಿಮಾ ಅವರು, ರೈತರು, ಬಡ ಹಾಗೂ ಮಧ್ಯಮ ಕುಟುಂಬದ ಜನರು ಸಾಲ ಮಾಡಿ ತಮ್ಮ ಮಕ್ಕಳ ಮದುವೆಯನ್ನು ವಿಜೃಂಭಣೆಯಿಂದ…
ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೃಷ್ಣ ಮೆನನ್ ಪಾತ್ರ ಬಹುಮುಖ್ಯ: ಸಂಸದ ಜೈರಾಮ್ ರಮೇಶ್ ವ್ಯಾಖ್ಯಾನ
February 23, 2020ಮೈಸೂರು,ಫೆ.22(ಪಿಎಂ)- ದೇಶದ ಮಾಜಿ ರಕ್ಷಣಾ ಸಚಿವ ಕೃಷ್ಣ ಮೆನನ್, ಜವಹರಲಾಲ್ ನೆಹರು ಅವರ ಆತ್ಮೀಯರು ಎಂಬ ಕಾರಣಕ್ಕಷ್ಟೇ ಅಲ್ಲದೇ, ಅವರ ರಾಜ ಕೀಯ ಹಾಗೂ ಸಾಹಿತ್ಯದ ಕೊಡುಗೆಯಿಂದಾಗಿಯೂ ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ವ್ಯಾಖ್ಯಾನಿಸಿದರು. ಮೈಸೂರಿನ ಸರಸ್ವತಿಪುರಂನ ರೋಟರಿ ಪಶ್ಚಿಮ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಲಿಟರರಿ ಅಸೋಸಿ ಯೇಷನ್‍ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜೈರಾಮ್ ರಮೇಶ್ ಅವರ `ಎ ಚೆಕರ್ಡ್ ಬ್ರಿಲಿಯನ್ಸ್: ದಿ ಮೆನಿ ಲೈವ್ಸ್ ಆಫ್ ವಿ.ಕೆ.ಕೃಷ್ಣ ಮೆನನ್’ ಜೀವನ ಚರಿತ್ರೆಯ…
ಕುಮಟಳ್ಳಿಗೆ ಅನ್ಯಾಯವಾದರೆ ಸಚಿವ ಸ್ಥಾನ ತೊರೆಯುತ್ತೇನೆ ರಮೇಶ್ ಜಾರಕಿಹೊಳಿ ಹೊಸ ಬಾಂಬ್
February 23, 2020ಬೆಂಗಳೂರು, ಫೆ.22(ಕೆಎಂಶಿ)-ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಅನ್ಯಾಯವಾದರೆ ತಾನು ಕೂಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡುತ್ತ, ಬರುವ ದಿನಗಳಲ್ಲಿ ಕುಮಟಳ್ಳಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ ಎಂಬ ವಿಶ್ವಾಸವಿದೆ. ಮಹೇಶ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡಬೇಕೆಂದು ನಾನು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇನೆ. ಅವರ ವಿಷಯದಲ್ಲಿ ನಾನು ಅನ್ಯಾಯ ಮಾಡಿಲ್ಲ. ಅವರಿಗೆ ಅನ್ಯಾಯವಾದರೆ, ನನಗೂ ಅಧಿಕಾರ ಬೇಡ ಎಂದರು.
ಕುತೂಹಲ ಮೂಡಿಸಿದ ವಿಜಯೇಂದ್ರ, ಸಿದ್ದರಾಮಯ್ಯ ಭೇಟಿ!
February 23, 2020ಬೆಂಗಳೂರು,ಫೆ.22-ಮಂತ್ರಿಸ್ಥಾನ ಸಿಗದ ಅತೃಪ್ತ ಬಿಜೆಪಿ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಎಂಬುದರ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂ ರಪ್ಪ ಪುತ್ರ ವಿಜಯೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದು ಬಿಜೆಪಿ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ….
ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷರಾಗಿ ಬಿ.ಎಂ.ರಘು ಅಧಿಕಾರ ಸ್ವೀಕಾರ
February 23, 2020ಮೈಸೂರು, ಫೆ.22(ಎಂಕೆ)- ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ನಗರ ಮಂಡಲ)ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನಡೆ ಯಿತು. ಮುಂದಿನ 3 ವರ್ಷಗಳ ಅವಧಿಗೆ ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಂ. ರಘು ಅವರಿಗೆ ನಿರ್ಗಮಿತ ಅಧ್ಯಕ್ಷ ರೇವಣ್ಣ ಅಧಿಕಾರ ಹತ್ತಾಂತರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಮಾತ ನಾಡಿ, ಬಿಜೆಪಿಯಂತಹ ವಿಶೇಷ ಪಕ್ಷದಲ್ಲಿ ನಾವಿಂದು ಕೆಲಸ ಮಾಡುತ್ತಿದ್ದೇವೆ. ಸಾಮಾನ್ಯ ಕಾರ್ಯಕರ್ತ ಉನ್ನತ ಸ್ಥಾನಕ್ಕೆ ಬೆಳೆಯಲು ಬಿಜೆಪಿಯಲ್ಲಿ ಮಾತ್ರ…
ಬಸ್ಕಿ ಹೊಡೆದ್ರೆ ಉಚಿತ ಪ್ಲಾಟ್‍ಫಾರಂ ಟಿಕೆಟ್! ಭಾರತೀಯ ರೈಲ್ವೆ ಇಲಾಖೆಯಿಂದ ವಿನೂತನ ಯೋಜನೆ
February 23, 2020ಬೆಂಗಳೂರು, ಫೆ. 22- ಸದೃಢ ಭಾರತವನ್ನು ರೂಪಿಸುವ ಜೊತೆಗೆ ಭಾರತದ ನಾಗರಿಕರ ಆರೋಗ್ಯದ ಕಾಳಜಿಯಿಂದ ಪ್ರಧಾನಿ ನರೇಂದ್ರ ಮೋದಿ ಫಿಟ್ ಇಂಡಿಯಾ ಯೋಜನೆ ಜಾರಿಗೆ ತಂದರು. ಅದರ ಅಂಗವಾಗಿ ಈಗ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೊಸ ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ರೈಲು ಪ್ರಯಾಣಿಕರಿಗೆ ಬಂಪರ್ ಆಫರ್ ನೀಡಿದ್ದಾರೆ. ನಿಮ್ಮ ಆಪ್ತರನ್ನು ರೈಲಿಗೆ ಹತ್ತಿಸಲು ನಿಲ್ದಾಣಕ್ಕೆ ಹೋದ ವೇಳೆ ನೀವು ಪ್ಲಾಟ್‍ಫಾರಂ ಟಿಕೆಟ್ ಕೊಳ್ಳುವುದು ಅನಿವಾರ್ಯ. ಒಂದು ವೇಳೆ ಪ್ಲಾಟ್ ಫಾರಂ ಟಿಕೆಟ್ ಇಲ್ಲದೇ…
ಇಂದು, ಫೆ.25ರಂದು ವಿಶ್ವಮಾನವ ಎಕ್ಸ್‍ಪ್ರೆಸ್ ರದ್ದು
February 23, 2020ಮೈಸೂರು,ಫೆ.22(ಎಂಕೆ)- ಹರಿಹರ-ದೇವರ ಗುಡ್ಡ ನಡುವೆ 2ನೇ ಹಂತದ ಜೋಡಿ ರೈಲು ಮಾರ್ಗದಲ್ಲಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ಮೈಸೂರು-ಬೆಳಗಾವಿ ಮಾರ್ಗದ `ವಿಶ್ವಮಾನವ ಎಕ್ಸ್‍ಪ್ರೆಸ್’ ರೈಲು ಗಾಡಿಯ ಸಂಚಾರವನ್ನು ಫೆ.23ರಿಂದ 25ರವರೆಗೆ ರದ್ದು ಗೊಳಿಸಲಾಗಿದೆ. ಟ್ರೈನ್ ನಂ.17326 ಮೈಸೂರು-ಬೆಳಗಾವಿ, ಟ್ರೈನ್ ನಂ.17325 ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‍ಪ್ರೆಸ್ ಸಂಚಾರ ರದ್ದಾಗಿದೆ. ಅಲ್ಲದೆ, ಟ್ರೈನ್ ನಂ.56273/56274 ಅರಸೀ ಕೆರೆ-ಹುಬ್ಬಳ್ಳಿ-ಅರಸಿಕೆರೆ, ಟ್ರೈನ್ ನಂ.56515/56516 ಕೆಎಸ್‍ಆರ್ ಬೆಂಗಳೂರು-ಹುಬ್ಬಳ್ಳಿ-ಕೆಎಸ್‍ಆರ್ ಬೆಂಗಳೂರು ಹಾಗೂ ಟ್ರೈನ್ ನಂ.56914/56913 ಹುಬ್ಬಳ್ಳಿ-ಕೆಎಸ್‍ಆರ್ ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ರೈಲು ಗಾಡಿಗಳನ್ನು ರದ್ದುಪಡಿಸ ಲಾಗಿದೆ ಎಂದು…
ಚಿನ್ನದ ಕೊಳಗ ಧರಿಸಿದ್ದ ತ್ರಿನೇಶ್ವರಸ್ವಾಮಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ
February 23, 2020ಮೈಸೂರು,ಫೆ.22(ಎಂಟಿವೈ)-ಅರಮನೆ ಆವರಣದ ಶ್ರೀ ತ್ರಿನೇಶ್ವರ ದೇವಾಲಯ ದಲ್ಲಿ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಿನ್ನದ ಕೊಳಗ(ಮುಖವಾಡ) ಧರಿಸಿ ಕಂಗೊಳಿ ಸುತ್ತಿದ್ದ ಲಿಂಗರೂಪಿ ಶ್ರೀ ತ್ರಿನೇಶ್ವರಸ್ವಾಮಿ ಯನ್ನು ಕಣ್ತುಂಬಿಕೊಂಡು ನಮಿಸಲು 70 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಶುಕ್ರ ವಾರ ನಸುಕಿನಿಂದ ಶನಿವಾರ ಬೆಳಗಿನವ ರೆಗೂ ತಂಡೋಪತಂಡವಾಗಿ ಆಗಮಿಸಿದರು. ಐತಿಹಾಸಿಕ ಶ್ರೀ ತ್ರಿನೇಶ್ವರ ಸ್ವಾಮಿ ದೇವಾ ಲಯದಲ್ಲಿ ಪ್ರತಿವರ್ಷ ಶಿವರಾತ್ರಿ ದಿನ ನಡೆ ಯುವ ವಿಶೇಷ ಪೂಜಾ ಕೈಂಕರ್ಯಗಳು ಭಕ್ತರನ್ನು ಶಿವಧ್ಯಾನದಲ್ಲಿ ಲೀನವಾಗಿಸು ತ್ತವೆ. ಹಾಗಾಗಿಯೇ ಶಿವರಾತ್ರಿಯಂದು ನಸುಕಿನ 4.30ರಿಂದಲೇ ಆರಂಭಗೊಳ್ಳುವ…
ಮೈಸೂರಿನ ವಿವಿಧ ದೇಗುಲಗಳಲ್ಲಿ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಆಚರಣೆ
February 23, 2020ಮೈಸೂರು,ಫೆ.22(ಎಂಟಿವೈ)-ಮೈಸೂರಿನಲ್ಲಿ ಶುಕ್ರ ವಾರ ಶಿವರಾತ್ರಿ ಹಬ್ಬವನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಮೈಸೂರಿನ ವಿವಿಧೆಡೆ ಶಿವನ ದೇಗುಲಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಶಿವನ ದೇಗುಲಗಳಲ್ಲಿ ನಸುಕಿನಿಂದಲೇ ವಿಶೇಷಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವ ರೆಗೂ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಸಮರ್ಪಿಸಿದ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದÀರು. ಭಕ್ತರಿಂದ ಶಿವಲಿಂಗಕ್ಕೆ ಅಭಿಷೇಕ: ನಂಜನಗೂಡು ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ಆಶ್ರಮದ ನಾದ ಮಂಟಪದಲ್ಲಿ ಮಹಾಗಣಪತಿ ಹೋಮ ಮತ್ತು…
ದಕ್ಷಿಣ ಭಾರತದ ಮೇಲೆ ಗಾಂಧಿ ಪ್ರಭಾವ ಮೈಸೂರು ಗಾಂಧಿ ಅಧ್ಯಯನ ಕೇಂದ್ರದಿಂದ ಫೆ.25ಕ್ಕೆ ರಾಷ್ಟ್ರೀಯ ವಿಚಾರ ಸಂಕಿರಣ
February 23, 2020ಮೈಸೂರು, ಫೆ.22(ಆರ್‍ಕೆಬಿ)- ಮಹಾತ್ಮ ಗಾಂಧಿ ಅವರ 150ನೇ ವರ್ಷದ ಜಯಂತಿ ಪ್ರಯುಕ್ತ ಫೆ.25ರಂದು ಬೆಳಿಗ್ಗೆ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ `ದಕ್ಷಿಣ ಭಾರತದ ಮೇಲೆ ಗಾಂಧೀಜಿ ಪ್ರಭಾವ’ ಕುರಿತು ರಾಷ್ಟ್ರೀಯ ವಿಚಾರ ಸಂಕಿ ರಣ ಆಯೋಜಿಸಲಾಗಿದೆ ಎಂದು ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಮತ್ತು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಕಾಲೇಜ್ ಆಫ್ ಎಜುಕೇಷನ್…










