ಲಖನೌ,ಫೆ.23- ಮೂರು ಅಥವಾ ಮೂರೂವರೆ ವರ್ಷಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿಜಿ ಮಹಾರಾಜ್ ಹೇಳಿದ್ದಾರೆ. ಮೂರು ವರ್ಷಗಳಲ್ಲಿ ಅಕ್ಷರಧಾಮ ದೇವಾ ಲಯ ನಿರ್ಮಾಣವಾಗಿದೆ. ಏಕತಾ ವಿಗ್ರಹ ಕೂಡಾ 3 ವರ್ಷಗಳಲ್ಲಿ ನಿರ್ಮಾಣವಾಗಿದೆ. ಮೂರು ಅಥವಾ ಮೂರೂವರೆ ವರ್ಷಗಳಲ್ಲಿ ರಾಮಮಂದಿರ ದೇವಾಲಯ ಕೂಡಾ ಸ್ಥಾಪನೆ ಯಾಗಲಿದೆ. ದೇವಾಲಯ ಕಟ್ಟಡ ನಿರ್ಮಾಣ ಕ್ಕಾಗಿ ಎಲ್ಲಾ ಭಕ್ತಾದಿಗಳಿಂದ ಆರ್ಥಿಕ ನೆರವನ್ನು ಸ್ವೀಕರಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು….
ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆ
February 24, 2020ಕೃಷ್ಣಗಿರಿ,ಫೆ.23-ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಆಕೆಯ ಜೊತೆ ಇನ್ನೂ ಸಾವಿರ ಮಂದಿ ಪಿಎಂಕೆ ಸೇರಿದಂತೆ ಹಲವು ಪಕ್ಷಗಳಿಂದ ಶನಿವಾರ ಕೃಷ್ಣಗಿರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್‍ರಾವ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಯಾದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ 29 ವರ್ಷದ ವಿದ್ಯಾರಾಣಿ, ಪ್ರಧಾನಿ ಮೋದಿಯವರ ಅಭಿವೃದ್ಧಿ ಯೋಜನೆಗಳಿಂದ ಪ್ರೇರಣೆ ಗೊಂಡು ಬಿಜೆಪಿ ಸೇರಿದ್ದೇನೆ ಎಂದರು. 2 ವರ್ಷಗಳ ಹಿಂದೆ ಮಾಜಿ ಕೇಂದ್ರ ಸಚಿವ ಪೆÇನ್ ರಾಮಕೃಷ್ಣನ್ ಅವರು ನನಗೆ ಬಿಜೆಪಿ…
ದ್ವಿತೀಯ ಪಿಯುಸಿ ಪರೀಕ್ಷೆ ಅಕ್ರಮ ಎಸಗಿದರೆ 5 ವರ್ಷ ಜೈಲು, 5 ಲಕ್ಷ ದಂಡ
February 24, 2020ಬೆಂಗಳೂರು, ಫೆ.23- ದ್ವಿತೀಯ ಪಿಯುಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 4ರಿಂದ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿ ಕೊಂಡಿದೆ. ಪರೀಕ್ಷಾ ಅಕ್ರಮ ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದೆ. ಅಕ್ರಮ ತಡೆಗೆ 11 ಅಂಶಗಳ ನಿಯಮಗಳನ್ನು ಜಾರಿಗೆ ತಂದು ಸುತ್ತೋಲೆ ಹೊರಡಿಸಿದೆ. ಎಸ್‍ಎಸ್‍ಎಲ್‍ಸಿ ಪೂರ್ವ ಸಿದ್ಧತಾ ಪರೀಕ್ಷೆ ಪೇಪರ್ ಲೀಕ್‍ನಿಂದ ಆತಂಕಗೊಂಡಿರೋ ಪಿಯುಸಿ ಬೋರ್ಡ್, ಪಿಯುಸಿ ಪರೀಕ್ಷೆಯಲ್ಲಿ ಇಂತಹ ಎಡವಟ್ಟು ಆಗದಂತೆ ನೋಡಿಕೊಳ್ಳಲು ಹದ್ದಿನ ಕಣ್ಣಿಟ್ಟಿದೆ. ಪರೀಕ್ಷಾ…
ಚಿತ್ರಕಲೆ ಆದಿಮಾನವನಷ್ಟೇ ಪುರಾತನ, ಮಾನವ ಸಂಸ್ಕøತಿಯ ಇತಿಹಾಸ
February 24, 2020ಮೈಸೂರು, ಫೆ.23(ಪಿಎಂ)- ಚಿತ್ರಕಲೆ ಆದಿ ಮಾನವ ನಷ್ಟೇ ಪುರಾತನ ಕಲೆ. ಇಲ್ಲಿಯವರೆಗೆ ಅದು ಅನೇಕ ರೀತಿಯಲ್ಲಿ ಪರಿವರ್ತನೆ ಕಂಡ ಪರಂಪರೆಯೂ ಆಗಿದೆ ಎಂದು ಕಲಬುರಗಿಯ ಹಿರಿಯ ಚಿತ್ರ ಕಲಾವಿದ ಪ್ರೊ. ಜೆ.ಎಸ್.ಖಂಡೇರಾವ್ ಹೇಳಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಮೈಸೂರಿನ ಶ್ರೀರವಿವರ್ಮ ವಿದ್ಯಾಸಂಸ್ಥೆಯ ಶ್ರೀ ರವಿ ವರ್ಮ ಚಿತ್ರಕಲಾ ಶಾಲೆಯು ಭಾನುವಾರ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 2018 ಮತ್ತು 2019ನೇ ಸಾಲಿನ ರಾಜಾ ರವಿವರ್ಮ ಪ್ರಶಸ್ತಿಯನ್ನು ತಲಾ 10 ಸಾವಿರ ರೂ. ನಗದಿನೊಂದಿಗೆ ಪ್ರದಾನ…
`ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ತ.ಸು.ಶಾ ಆದರ್ಶವಾಗಲಿ’
February 24, 2020ಮೈಸೂರು, ಫೆ.23(ಎಸ್‍ಪಿಎನ್)-`ವೃತ್ತಿ’ ಮತ್ತು `ಓದು’ ಎರಡನ್ನೂ ಒಟ್ಟಿಗೇ ಆಯ್ಕೆ ಮಾಡಿಕೊಂಡು ವಿವಿ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಿರಿಯ ಸಾಹಿತಿ ತ.ಸು.ಶಾಮರಾಯರ ಆದರ್ಶ, ವ್ಯಕ್ತಿತ್ವ ಹಾಗೂ ಅವರ ಜೀವಿತಾವಧಿಯಲ್ಲಿ ಬದುಕು ಕಟ್ಟಿಕೊಂಡ ಮಾರ್ಗಗಳು ಆದರ್ಶವಾಗಲಿ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ವಿಜಯಕುಮಾರಿ ಎಸ್.ಕರಿಕಲ್ ಆಶಿಸಿದರು. ಮೈಸೂರು ವಿವಿ ಸಂಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಕಸಾಪ ಹಾಗೂ ವಿವಿ ಸಂಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ `ತ.ಸು.ಶಾಮರಾಯ ದತ್ತಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು…
ಕೆಆರ್ ಕ್ಷೇತ್ರ ಬಿಜೆಪಿ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿದ ಶಾಸಕ ರಾಮದಾಸ್
February 24, 2020ಮೈಸೂರು, ಫೆ.23(ಆರ್‍ಕೆಬಿ)- ಬಿಜೆ ಪಿಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೂರ್ ಫಾತಿಮಾ ಮತ್ತು ಎಂ.ಆರ್. ಬಾಲಕೃಷ್ಣ ನೇಮಕಗೊಂಡಿದ್ದಾರೆ. ಕ್ಷೇತ್ರದ ನೂತನ ಉಪಾಧ್ಯಕ್ಷರಾಗಿ ಜೆ. ನಾಗೇಂದ್ರಕುಮಾರ್, ವಿನಯ್ ಪಾಂಚ ಜನ್ಯ, ಸಂತೋಷ್ (ಶಂಭು), ಎಂ.ವಿ. ರೇಖಾ, ಜೆ.ರವಿ, ಓಂಶ್ರೀನಿವಾಸ್, ಕಾರ್ಯ ದರ್ಶಿಗಳಾಗಿ ಪ್ರಸಾದ್‍ಬಾಬು, ರವಿಶಂಕರ್, ಸೀಮಾ ಪ್ರಸಾದ್, ಪಿ.ಟಿ.ಕೃಷ್ಣ, ಗಿರೀಶ್ ಗೌಡ, ನಾಗರತ್ನ, ಕೋಶಾಧ್ಯಕ್ಷರಾಗಿ ರೇವತಿ ವಾಸುದೇವ್ ನೇಮಕಗೊಂಡಿದ್ದು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ ವಡಿವೇಲು ಅಧ್ಯಕ್ಷತೆ ಯಲ್ಲಿ ಶನಿವಾರ ನಡೆದ ಸಭೆಯಲ್ಲಿ ನೂತನ…
ಸರ್ಕಾರಿ ಶುಶ್ರೂಷಾಲಯದ 99 ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ
February 24, 2020ಮೈಸೂರು,ಫೆ.23(ಎಂಕೆ)- ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಅಮೃತ ಮಹೋತ್ಸವ ಸಭಾಂಗಣದಲ್ಲಿ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ ಆಯೋಜಿಸಿದ್ದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಶುಶ್ರೂಷ ಸೇವೆಗೆ ಪಾದಾರ್ಪಣೆ ಮಾಡಿದ 99 ವಿದ್ಯಾರ್ಥಿಗಳು `ಪ್ರತಿಜ್ಞಾವಿಧಿ’ ಸ್ವೀಕರಿಸಿದರು. ಸಮಾರಂಭ ಉದ್ಘಾಟಿಸಿದ ಮೈಸೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಸಿ.ಪಿ.ನಂಜರಾಜ್ ಅವರು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕಿಯರಿಗೆ ಹೆಚ್ಚಿನ ಅವಕಾಶಗಳಿವೆ. ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದ ನಿಮ್ಮೆಲ್ಲರಿಗೂ ಸೇವೆ ಮಾಡುವ ಅವಕಾಶ ದೊರಕಲಿದೆ. ಒತ್ತಡದ ನಡುವೆಯೂ ರೋಗಿಗಳಲ್ಲಿ ವಿಶ್ವಾಸ ಮೂಡಿಸುವ ರೀತಿ ಕೆಲಸ ಮಾಡಬೇಕು. ದೇಶದ…
ಜಠರ ಕರುಳು ಚಿಕಿತ್ಸೆಗೆ ಎಂಡೋಸ್ಕೋಪಿ ಸರಳ ವಿಧಾನ: ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಜಠರ-ಕರುಳಿನ ಶಸ್ತ್ರಚಿಕಿತ್ಸೆ ಕಾರ್ಯಾಗಾರದಲ್ಲಿ ತಜ್ಞರ ಅಭಿಮತ
February 24, 2020ಮೈಸೂರು, ಫೆ.23(ಆರ್‍ಕೆಬಿ)- ದೇಹದ ಅತಿ ಪ್ರಮುಖ ಭಾಗವಾದ ಜಠರ, ಕರುಳು ಸಮಸ್ಯೆಗಳ ಚಿಕಿತ್ಸಾ ಪದ್ಧತಿಯಲ್ಲಿ ಎಂಡೋ ಸ್ಕೋಪಿ ಕ್ರಾಂತಿಕಾರಕ ವಿಧಾನವಾಗಿದ್ದು, ಆ ಕ್ಷೇತ್ರದಲ್ಲಿ ಇತ್ತೀಚೆಗೆ ಆದ ಸುಧಾರಣೆ ಗಳ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಅಪೋಲೊ ಬಿಜಿಎಸ್ ಆಸ್ಪತ್ರೆ ಆಯೋಜಿಸಿದ್ದ 2 ದಿನಗಳ ಕಾರ್ಯಾಗಾರ ಯಶಸ್ವಿಯಾಗಿದೆ ಎಂದು ಏಷ್ಯನ್ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ ಮುಖ್ಯಸ್ಥ ಡಾ.ಡಿ.ನಾಗೇಶ್ವರರೆಡ್ಡಿ ತಿಳಿಸಿದರು. ನಗರದ ಖಾಸಗಿ ಹೊಟೇಲೊಂದರಲ್ಲಿ ಆಯೋಜಿಸಿದ್ದ ಕಾರ್ಯಾಗಾರದ 2ನೇ ದಿನವಾದ ಭಾನುವಾರ ಸುದ್ದಿಗಾರರೊ ಡನೆ ಮಾತನಾಡಿದ ಅವರು, ನಮ್ಮಲ್ಲಿನ ತಜ್ಞರಿಗೆ ಜಠರ ಕರುಳಿನ…
‘ಬಬ್ರುವಾಹನ ಕಾಳಗ’ ಯಕ್ಷಗಾನ-ಕಿಕ್ಕಿರಿದ ಸಭಾಂಗಣ
February 24, 2020ಮೈಸೂರಲ್ಲಿ ಚಂಡೆ-ಮದ್ದಳೆಯ ಸದ್ದು; ದ.ಕ.ವೈದ್ಯರ ಸಾಂಸ್ಕøತಿಕ ಸಂಘದ ಪ್ರಯತ್ನಕ್ಕೆ ಗಣ್ಯರ ಶ್ಲಾಘನೆ ಮೈಸೂರು,ಫೆ.23(ಎಂಕೆ)- ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ದಕ್ಷಿಣ ಕನ್ನಡ ವೈದ್ಯರ ಸಾಂಸ್ಕø ತಿಕ ಸಂಘ ಆಯೋಜಿಸಿದ್ದ ‘ಬಬ್ರುವಾಹನ ಕಾಳಗ’ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು. ಆಕರ್ಷಕ ಅಲಂಕಾರ ದೊಂದಿಗೆ ಕರಾವಳಿ ಯಕ್ಷಗಾನ ಕೇಂದ್ರದ ಕಲಾವಿದರು ಅಮೋಘ ಅಭಿನಯದ ಮೂಲಕ ರಂಜಿಸಿದರು. ಬಬ್ರುವಾಹನ ಪಾತ್ರದಲ್ಲಿ ಸತೀಶ್ ಆಳ್ವ, ದೂತನಾಗಿ ಗಣೇಶ ಪೂಜಾರಿ, ಮಂತ್ರಿ ಮತ್ತು ಹಂಸಧ್ವಜನಾಗಿ ಶ್ರೀನಿವಾಸ ರಾವ್, ಕಟಕಿಯಾಗಿ ಭಾರ್ಗವಿ, ಚಿತ್ರಾಂಗದೆ…
ಸಿದ್ದಲಿಂಗಪುರ: ಪೆಟ್ರೋಲ್ ಮಿಶ್ರಿತ ಬೋರ್‍ವೆಲ್ ನೀರು!
February 24, 2020ಹಳದಿ ಬಣ್ಣಕ್ಕೆ ತಿರುಗಿದ ಸಂಪ್ ನೀರು; ಮನೆ ಬಾಡಿಗೆದಾರರ ದೂರು ಸಮೀಪದ ಪೆಟ್ರೋಲ್ ಬಂಕ್‍ನಿಂದ ಸೋರಿಕೆಯಾಗುತ್ತಿರುವ ಶಂಕೆ? ಮೈಸೂರು,ಫೆ.23(ಎಂಟಿವೈ)- ಮೈಸೂರು ತಾಲೂಕಿನ ಸಿದ್ಧಲಿಂಗಪುರದ ಮನೆ ಯೊಂದರ ಬೋರ್‍ವೆಲ್‍ನಲ್ಲಿ ಪೆಟ್ರೋಲ್ ಮಿಶ್ರಿತ ನೀರು ಸರಬರಾಜಾಗುತ್ತಿದ್ದು, ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ. ಮೈಸೂರು-ಬೆಂಗಳೂರು ಮುಖ್ಯರಸ್ತೆ ಯಲ್ಲಿನ ಪೆಟ್ರೋಲ್ ಬಂಕ್ ಈ ಮನೆಗೆ ಸಮೀಪದಲ್ಲೇ ಇದ್ದು, ಬೋರ್‍ವೆಲ್ ನೀರಿಗೆ ಬಂಕ್‍ನಿಂದ ಸೋರಿಕೆಯಾದ ಪೆಟ್ರೋಲ್, ಡೀಸೆಲ್ ಅಂತರ್ಜಲ ಸೇರಿರ ಬಹುದು ಎಂದು ಶಂಕಿಸಲಾಗಿದೆ. ಬೆಂಗಳೂರು ಮೂಲದ ಪ್ರಕಾಶ್ ಎಂಬು ವರು ಸಿದ್ದಲಿಂಗಪುರದಲ್ಲಿ ನಿವೇಶನ ಖರೀ ದಿಸಿ,…










