ಕೃಷ್ಣಗಿರಿ,ಫೆ.23-ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಆಕೆಯ ಜೊತೆ ಇನ್ನೂ ಸಾವಿರ ಮಂದಿ ಪಿಎಂಕೆ ಸೇರಿದಂತೆ ಹಲವು ಪಕ್ಷಗಳಿಂದ ಶನಿವಾರ ಕೃಷ್ಣಗಿರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್‍ರಾವ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಯಾದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ 29 ವರ್ಷದ ವಿದ್ಯಾರಾಣಿ, ಪ್ರಧಾನಿ ಮೋದಿಯವರ ಅಭಿವೃದ್ಧಿ ಯೋಜನೆಗಳಿಂದ ಪ್ರೇರಣೆ ಗೊಂಡು ಬಿಜೆಪಿ ಸೇರಿದ್ದೇನೆ ಎಂದರು. 2 ವರ್ಷಗಳ ಹಿಂದೆ ಮಾಜಿ ಕೇಂದ್ರ ಸಚಿವ ಪೆÇನ್ ರಾಮಕೃಷ್ಣನ್ ಅವರು ನನಗೆ ಬಿಜೆಪಿ ಸೇರುವಂತೆ ಒತ್ತಾಯಿಸಿದರು. ಅಲ್ಲಿಂದ ಸೇರಬೇಕೊ, ಬೇಡವೊ ಎಂದು ಗೊಂದಲದಲ್ಲಿದ್ದೆ. ಈಗ ಕಾಲ ಕೂಡಿಬಂತು ಎಂದರು. ಜಾತಿ, ಧರ್ಮವನ್ನು ಮೀರಿ ಶಿಕ್ಷಣ ಮೂಲಕ ಜನರ ಉದ್ಧಾರಕ್ಕೆ ಶ್ರಮಿಸುವುದಾಗಿ ವಿದ್ಯಾರಾಣಿ ಹೇಳಿದರು.