ದ್ವಿತೀಯ ಪಿಯುಸಿ ಪರೀಕ್ಷೆ ಅಕ್ರಮ ಎಸಗಿದರೆ 5 ವರ್ಷ ಜೈಲು, 5 ಲಕ್ಷ ದಂಡ
ಮೈಸೂರು

ದ್ವಿತೀಯ ಪಿಯುಸಿ ಪರೀಕ್ಷೆ ಅಕ್ರಮ ಎಸಗಿದರೆ 5 ವರ್ಷ ಜೈಲು, 5 ಲಕ್ಷ ದಂಡ

February 24, 2020

ಬೆಂಗಳೂರು, ಫೆ.23- ದ್ವಿತೀಯ ಪಿಯುಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 4ರಿಂದ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿ ಕೊಂಡಿದೆ. ಪರೀಕ್ಷಾ ಅಕ್ರಮ ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದೆ. ಅಕ್ರಮ ತಡೆಗೆ 11 ಅಂಶಗಳ ನಿಯಮಗಳನ್ನು ಜಾರಿಗೆ ತಂದು ಸುತ್ತೋಲೆ ಹೊರಡಿಸಿದೆ.

ಎಸ್‍ಎಸ್‍ಎಲ್‍ಸಿ ಪೂರ್ವ ಸಿದ್ಧತಾ ಪರೀಕ್ಷೆ ಪೇಪರ್ ಲೀಕ್‍ನಿಂದ ಆತಂಕಗೊಂಡಿರೋ ಪಿಯುಸಿ ಬೋರ್ಡ್, ಪಿಯುಸಿ ಪರೀಕ್ಷೆಯಲ್ಲಿ ಇಂತಹ ಎಡವಟ್ಟು ಆಗದಂತೆ ನೋಡಿಕೊಳ್ಳಲು ಹದ್ದಿನ ಕಣ್ಣಿಟ್ಟಿದೆ. ಪರೀಕ್ಷಾ ಅಕ್ರಮದಲ್ಲಿ ತೊಡ ಗಿದವರಿಗೆ ನಿಯಮದ ಪ್ರಕಾರ 5 ವರ್ಷ ಸೆರೆವಾಸ ಮತ್ತು 5 ಲಕ್ಷ ದಂಡ ವಿಧಿಸುವ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶ ಹೊರಡಿಸಿದೆ.

ಇಷ್ಟೇ ಅಲ್ಲದೇ ಹೊರತುಪಡಿಸಿ ಪಿಯಸಿ ಬೋರ್ಡ್ ಹಲವು ಭದ್ರತಾ ನಿಯಮಗಳನ್ನು ಜಾರಿಗೆ ತಂದಿವೆ. ಈ ಸಂಬಂಧ ಪಿಯುಸಿ ಬೋರ್ಡ್ ನಿರ್ದೇಶಕರು ಸುತ್ತೋಲೆ ಹೊರಡಿ ಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿ ಮೊಬೈಲ್ ಫೋನ್ ತರುವುದನ್ನು ನಿಷೇಧ ಮಾಡಲಾಗಿದೆ. ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅನುಮತಿಗೆ ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳಿಗೂ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ.

Translate »