ಚಿತ್ರಕಲೆ ಆದಿಮಾನವನಷ್ಟೇ ಪುರಾತನ, ಮಾನವ ಸಂಸ್ಕøತಿಯ ಇತಿಹಾಸ
ಮೈಸೂರು

ಚಿತ್ರಕಲೆ ಆದಿಮಾನವನಷ್ಟೇ ಪುರಾತನ, ಮಾನವ ಸಂಸ್ಕøತಿಯ ಇತಿಹಾಸ

February 24, 2020

ಮೈಸೂರು, ಫೆ.23(ಪಿಎಂ)- ಚಿತ್ರಕಲೆ ಆದಿ ಮಾನವ ನಷ್ಟೇ ಪುರಾತನ ಕಲೆ. ಇಲ್ಲಿಯವರೆಗೆ ಅದು ಅನೇಕ ರೀತಿಯಲ್ಲಿ ಪರಿವರ್ತನೆ ಕಂಡ ಪರಂಪರೆಯೂ ಆಗಿದೆ ಎಂದು ಕಲಬುರಗಿಯ ಹಿರಿಯ ಚಿತ್ರ ಕಲಾವಿದ ಪ್ರೊ. ಜೆ.ಎಸ್.ಖಂಡೇರಾವ್ ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಮೈಸೂರಿನ ಶ್ರೀರವಿವರ್ಮ ವಿದ್ಯಾಸಂಸ್ಥೆಯ ಶ್ರೀ ರವಿ ವರ್ಮ ಚಿತ್ರಕಲಾ ಶಾಲೆಯು ಭಾನುವಾರ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 2018 ಮತ್ತು 2019ನೇ ಸಾಲಿನ ರಾಜಾ ರವಿವರ್ಮ ಪ್ರಶಸ್ತಿಯನ್ನು ತಲಾ 10 ಸಾವಿರ ರೂ. ನಗದಿನೊಂದಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಖಂಡೇರಾವ್ ಅವರು, ಕಲೆ ಎಂಬುದು ಜನಾಂಗದ ಸಂಸ್ಕøತಿಯ ವಿಕಾಸ. ಮಾನವ ಸಂಸ್ಕøತಿಯ ಇತಿಹಾಸವೂ ಹೌದು. ಪರಿಣಾಮಕಾರಿ ಅಭಿವ್ಯಕ್ತಿ ಮಾಧ್ಯಮವೂ ಆಗಿದೆ. ಚಿತ್ರಕಲೆ ಭಾವನೆ ಅರಳಿಸುವ ಹಾಗೂ ಸಂದೇಶ ನೀಡುವ ಅಂಶಗಳನ್ನು ಮೂಡಿಸುವ ಮಾಧ್ಯಮ. ಚಿತ್ರಕಲಾ ಕ್ಷೇತ್ರ ಪ್ರಾಯೋಗಿಕ ಹಿನ್ನೆಲೆಯನ್ನು ಅಪೇಕ್ಷಿಸುತ್ತದೆ ಎಂದರು.

ಹೃದಯಾಂತರಾಳದಿಂದ ಉಗಮವಾಗುವ ಉನ್ನತ ವಿಚಾರಗಳು ಕಲೆಯಲ್ಲಿ ಮೂಡಿಬರಬೇಕು. ಕಲಾವಿದ ಚಿತ್ರಕಲೆಯಲ್ಲಿ ರಚನಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳ ಬೇಕು. ಪ್ರಾಥಮಿಕ ಹಂತದ ಕಲಿಕೆ ಪರಿಣಾಮಕಾರಿ ಯಾಗಿದ್ದರೆ ಮಾತ್ರವೇ ಉನ್ನತ ಹಂತದಲ್ಲಿ ಪರಿಣತಿ ಮೆರೆಯಲು ಸಾಧ್ಯ. ಯಾವ ಕಲಾವಿದ ಹೆಚ್ಚು ತೊಡಗಿ ಸಿಕೊಂಡು ಕಲೆಯಲ್ಲಿ ಕೆಲಸ ಮಾಡುವನೋ ಅವನಲ್ಲಿ ಅಗಾಧ ಕೌಶಲ ಬೆಳೆಯುತ್ತದೆ ಎಂದು ಹೇಳಿದರು.

2020ನೇ ಸಾಲಿನ ರಾಜಾ ರವಿವರ್ಮ ಪ್ರಶಸ್ತಿ ಸ್ವೀಕರಿ ಸಿದ ಮುಂಬೈನ ಹಿರಿಯ ಚಿತ್ರ ಕಲಾವಿದ ವಾಸುದೇವ್ ಕಾಮತ್ ಮಾತನಾಡಿ, ಚಿತ್ರಕಲಾವಿದರು ಪಠ್ಯಕ್ರಮ ಮೀರಿ ಕಲಾಕೌಶಲ ಮೆರೆಯಬೇಕು. ತಮ್ಮದೇ ಶೈಲಿ ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಹಿರಿಯ ವಿದ್ಯಾರ್ಥಿ ಟಿ.ಎಸ್.ಮುರಳಿ, 2013ರಿಂದ ರವಿವರ್ಮ ಚಿತ್ರಕಲಾ ಶಾಲೆ ಪುನಶ್ಚೇತನಗೊಂಡು ಮುನ್ನಡೆಯುತ್ತಿದೆ. ಹಿರಿಯ ಕಲಾವಿದರ ಸೇವೆ ಸ್ಮರಿಸುವ ಸಲುವಾಗಿ ರವಿವರ್ಮ ಪ್ರಶಸ್ತಿ ನೀಡಲಾಗುತ್ತಿದ್ದು, 2017ರಲ್ಲಿ ಹಿರಿಯ ಕಲಾವಿದ ಚಿ.ಸು.ಕೃಷ್ಣಶೆಟ್ಟಿ, 2018ರಲ್ಲಿ ಹಿರಿಯ ಕಲಾವಿದ ಕೆ.ಟಿ.ಶಿವಪ್ರಸಾದ್ ಅವರಿಗೆ ಪ್ರಶಸ್ತಿ ಸಂದಿದೆ ಎಂದು ತಿಳಿಸಿದರು. ಕೇಂದ್ರ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ, ತುಮಕೂರಿನ ರವೀಂದ್ರ ಕಲಾ ನಿಕೇತನದ ಉಪನ್ಯಾಸಕ ಪ್ರಭು ಹರಸೂರ್, ವಕೀಲ ಎಸ್.ಅರುಣ್‍ಕುಮಾರ್, ರವಿವರ್ಮ ಚಿತ್ರಕಲಾ ಶಾಲೆಯ ಪ್ರಾಂಶುಪಾಲ ಶಿವಕುಮಾರ ಕೆಸರಮಡು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Translate »