ಮೈಸೂರು,ಫೆ.26(ಪಿಎಂ)- ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಬಜೆಟ್ ನಲ್ಲಿ 300 ಕೋಟಿ ರೂ. ಮೀಸಲಿಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿರುವುದಾಗಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದಮೂರ್ತಿ ತಿಳಿಸಿದರು. ಮೈಸೂರಿನ ಕೆಆರ್ ವನಂನಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ನಿವೇಶನ ದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿ ಸಂಘದ ವತಿಯಿಂದ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಅತಿಥಿಯಾಗಿದ್ದ ಅವರು, ಈಗಾಗಲೇ ಮಂಡಳಿಯ ಕಚೇರಿಗೆ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ 25 ಕೋಟಿ ರೂ. ನೀಡಿದೆ ಎಂದು ಹೇಳಿದರು. ರಾಜ್ಯದ 21 ವಿಧಾನಸಭಾ…
ಯತ್ನಾಳ್ ಹೇಳಿಕೆ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ
February 27, 2020ಮೈಸೂರು, ಫೆ.26(ಎಂಕೆ)- ಸ್ವಾತಂತ್ರ್ಯ ಹೋರಾಟ ಗಾರ ಹೆಚ್.ಎಸ್.ದೊರೆಸ್ವಾಮಿ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ನಗರದ ಗಾಂಧಿವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಶಾಸಕ ಯತ್ನಾಳ್ ಕೂಡಲೇ ಹೆಚ್.ಎಸ್.ದೊರೆಸ್ವಾಮಿ ಅವರಲ್ಲಿ ಕ್ಷಮೆ ಕೋರ ಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಗಾಂಧಿ ಜೊತೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ 102 ವರ್ಷದ ಹಿರಿಯ ದೊರೆಸ್ವಾಮಿ ಅವರು ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಡುತ್ತಿದ್ದಾರೆ. ಅಂತಹ ಹೋರಾಟ ಗಾರರಿಗೆ…
ವಸಂತಮಹಲ್ ಆವರಣದಲ್ಲಿ ಹೊತ್ತಿ ಉರಿದ ಕಾರು
February 27, 2020ಮೈಸೂರು, ಫೆ.26(ಆರ್‍ಕೆ)- ಮರದ ಕೆಳಗೆ ನೆರಳಲ್ಲಿ ನಿಂತಿದ್ದ ಮಾರುತಿ ಸ್ವಿಫ್ಟ್ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಮೈಸೂರಿನ ನಜರ್ ಬಾದ್‍ನ ವಸಂತಮಹಲ್ ಆವರಣದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಹಾಸನದ ದೇವೇಗೌಡ ನಗರದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಎ.ಎ.ಶಿವಕುಮಾರ್ ಎಂಬುವರಿಗೆ ಸೇರಿದ ಮಾರುತಿ ಸ್ವಿಫ್ಟ್ ಡಿಸೈರ್ (ಕೆಎ 03-ಎಂವಿ 8366) ಕಾರು ಬೆಂಕಿ ಗಾಹುತಿಯಾಗಿದೆ. ಮೈಸೂರಿನ ನಜರ್‍ಬಾದ್ ನಲ್ಲಿರುವ ವಸಂತಮಹಲ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ‘ಭಾಷಾ ಕೌಶಲ್ಯ ಅಭಿವೃದ್ಧಿ’ ಕುರಿತಾದ ಒಂದು ದಿನದ ವಿಭಾಗ ಮಟ್ಟದ…
ಖಾಸಗಿ ಶಾಲೆ ನಾಮಫಲಕಗಳಲ್ಲಿ ಕನ್ನಡ ನಿರ್ಲಕ್ಷ್ಯ; ಡಿಸಿಗೆ ದೂರು
February 27, 2020ಮೈಸೂರು, ಫೆ.26(ಆರ್‍ಕೆಬಿ)- ಮೈಸೂರು ಜಿಲ್ಲೆಯ ಬಹಳಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಭಾಷೆಯನ್ನು ಪೂರ್ಣ ನಿರ್ಲಕ್ಷಿಸಿವೆ. ಶಾಲೆಯ ನಾಮಫಲಕ, ವಾಹನ, ರಶೀದಿಗಳೆಲ್ಲ ಆಂಗ್ಲಮಯವಾಗಿವೆ. ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಮೈಸೂರು ಜಿಲ್ಲಾ ಘಟಕ ಬುಧವಾರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿತು. ಶೇ.60 ಭಾಗ ನಾಮಫಲಕ ಕಡ್ಡಾಯ ವಾಗಿ ಕನ್ನಡದಲ್ಲಿರಬೇಕೆಂಬ ನಿಯಮ ಪಾಲನೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ ಶಾಲೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು. ಜೂನ್‍ನಲ್ಲಿ…
ಕಂಪ್ಯೂಟರ್ ಕೋರ್ಸ್ ಪರೀಕ್ಷೆ ಆರಂಭ
February 27, 2020ಮೈಸೂರು, ಫೆ.26(ಪಿಎಂ)- ಮೈಸೂರಿನ ವಸಂತ್ ಮಹಲ್‍ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಕಂಪ್ಯೂಟರ್ ಶಿಕ್ಷಣ ಪರೀಕ್ಷೆಗಳು ಬುಧವಾರ ಆರಂಭವಾಗಿದ್ದು, ಮಾ.3 ರವರೆಗೆ ನಡೆಯಲಿವೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತಿರುವ ಪರೀಕ್ಷೆಯನ್ನು ಖಾಸಗಿ ಕಂಪ್ಯೂಟರ್ ಶಿಕ್ಷಣ ತರಬೇತಿ ಸಂಸ್ಥೆಗಲ್ಲಿ 6 ತಿಂಗಳ ಕೋರ್ಸ್ ಪೂರೈಸಿದ ಅಭ್ಯರ್ಥಿಗಳು ಬರೆಯುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿದವರು ಈ ಕೋರ್ಸ್ ಅಭ್ಯಾಸ ಮಾಡಲು ಅರ್ಹರು. ಇಂದು ಆಫೀಸ್ ಆಟೋಮೇಷನ್ ಹಾಗೂ ಗ್ರಾಫಿಕ್ ಡಿಸೈನರ್ ಪತ್ರಿಕೆಗಳ ಥಿಯರಿ ಪರೀಕ್ಷೆ ನಡೆಯಿತು. 278 ಮಂದಿ ಪರೀಕ್ಷೆ…
ಭಾರತದ ರಕ್ಷಣಾ ವಲಯದಲ್ಲಿ 3 ಶತಕೋಟಿ ಯುಎಸ್ ಡಾಲರ್ ಹೂಡಿಕೆಗೆ ಅಮೆರಿಕ ಒಪ್ಪಂದ
February 25, 2020ನವದೆಹಲಿ, ಫೆ.24- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ ಉಭಯ ದೇಶಗಳ ನಡುವಿನ ಹೊಸ ಒಪ್ಪಂದಗಳಿಗೆ ವೇದಿಕೆಯಾಗಿದೆ. ಮಂಗಳವಾರ ದೆಹಲಿಯ ಹೈದರಾಬಾದ್ ಹೌಸ್‍ನಲ್ಲಿ ಉಭಯ ರಾಷ್ಟ್ರಗಳು ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ನೀಡಿರುವ ಡೊನಾಲ್ಡ್ ಟ್ರಂಪ್ ಮೂರು ಶತಕೋಟಿ ಯುಎಸ್ ಡಾಲರ್ ಯುದ್ಧ ಹೆಲಿಕಾಪ್ಟರ್ ಮತ್ತು ರಕ್ಷಣಾ ಸಾಮಗ್ರಿಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದಿದ್ದಾರೆ. ಮಾಹಿತಿಯ ಪ್ರಕಾರ, ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾ ಡುವ ಬಗ್ಗೆ ಭಾರತ…
ಡೊನಾಲ್ಡ್ ಟ್ರಂಪ್ ಬಳಿ ಇತ್ತು ಐಷಾರಾಮಿ ಖಾಸಗಿ ತಾಜ್ ಮಹಲ್!
February 25, 2020ವಾಷಿಂಗ್ಟನ್, ಫೆ.24- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿ ಭಾರತಕ್ಕೆ ಬಂದಿದ್ದಾರೆ. ಭಾರತ ಭೇಟಿಯ ಸಂದರ್ಭ ಅವರು ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅದ ರಲ್ಲಿ ತಾಜ್ ಮಹಲ್ ಸಹ ಒಂದು. ವಿಶೇಷ ವೆಂದರೆ ಈ ಹಿಂದೆ ಡೊನಾಲ್ಡ್ ಟ್ರಂಪ್ ಬಳಿ ಅವರದ್ದೇ ಆದ ಖಾಸಗಿ ‘ತಾಜ್ ಮಹಲ್’ ಇತ್ತು! ಟ್ರಂಪ್ ಬಳಿ ‘ತಾಜ್ ಮಹಲ್’ ಹೆಸರಿನ ಐಷಾ ರಾಮಿ ಕ್ಯಾಸಿನೋ (ಜೂಜು ಕೇಂದ್ರ) ಇತ್ತು. ವಿಶ್ವದಲ್ಲೇ ದೊಡ್ಡ ಮತ್ತು ಐಷಾರಾಮಿ ಜೂಜು ಕೇಂದ್ರ ಇದು…
ವಿವೇಕಾನಂದರ ಮರೆಯಲಾದೀತೆ!
February 25, 2020ಅಹಮದಾಬಾದ್,ಫೆ.24-ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಲ್ಲಿನ ಮೊಟೆರಾ ಕ್ರೀಡಾಂ ಗಣದಲ್ಲಿ ಏರ್ಪಡಿಸಲಾಗಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಭಾರತದ ಹಬ್ಬಗಳು, ಭಾರತೀಯ ಚಿತ್ರರಂಗ, ಸ್ವಾಮಿ ವಿವೇಕಾ ನಂದರು ಮತ್ತು ಕ್ರಿಕೆಟ್ ತಾರೆಯರ ಬಗ್ಗೆ ಮೆಚ್ಚು ಗೆಯ ಮಾತುಗಳನ್ನಾಡಿದರು. ‘ಐ ಲವ್ ಇಂಡಿಯಾ’ ಎಂದ ಅವರು, ಅದಕ್ಕಾಗಿ ಕಾರಣಗಳನ್ನು ವಿವರಿಸುತ್ತಾ ಹೋದರು. ಭಾರತದಲ್ಲಿ ಕೆಡುಕನ್ನು ಸಂಹರಿಸಿ, ಒಳ್ಳೆಯದನ್ನು ಸ್ಥಾಪಿಸಿದ ಕುರುಹಾಗಿ ವರ್ಣ ರಂಜಿತವಾಗಿ ದೀಪಾವಳಿಯನ್ನು ಆಚರಿಸಲಾಗು ತ್ತದೆ. ಇನ್ನು ಕೆಲವು ದಿನಗಳಲ್ಲಿ ಭಾರತೀಯರು ಜಾತಿ, ಧರ್ಮ ಭೇದ ಮರೆತು…
ಡೊನಾಲ್ಡ್ ಟ್ರಂಪ್ ದಂಪತಿ ಜೊತೆ ಗಮನ ಸೆಳೆದ ಆ ಮಹಿಳೆ!
February 25, 2020ಅಹಮದಾಬಾದ್,ಫೆ.24-ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಹಿಳೆಯೊ ಬ್ಬರು ಇಂದು ಇಡೀ ದಿನ ಗಮನ ಸೆಳೆ ದರು. ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಜೊತೆ ಅಹಮದಾ ಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿ ಕೊಂಡ ಈ ಮಹಿಳೆ ಯಾರು? ಎಂಬುದು ಹಲವ ರಲ್ಲಿ ಕುತೂಹಲ ಮೂಡಿಸಿತ್ತು. ಆ ಮಹಿಳೆ ಗುರ್ದೀಪ್ ಚಾವ್ಲಾ. ಭಾರತ ಮೂಲದ ಗುರ್ದೀಪ್ ಚಾವ್ಲಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಮೆರಿಕ ಅಧ್ಯಕ್ಷರ ಭಾರತ ಭೇಟಿಯಲ್ಲಿ ಅವರು ದುಭಾಷಿಯಾಗಿ ಕಾರ್ಯ ನಿರ್ವ ಹಣೆ ಮಾಡುತ್ತಿದ್ದಾರೆ. 1990ರಲ್ಲಿ ಭಾರತದ ಸಂಸತ್ ನಲ್ಲಿ…
ಟ್ರಂಪ್ ಔತಣಕ್ಕೆ ಸಿಎಂ ಯಡಿಯೂರಪ್ಪಗೆ ಆಹ್ವಾನ
February 25, 2020ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವ ದೆಹಲಿಯಲ್ಲಿ ಅದ್ಧೂರಿ ಔತಣ ಕೂಟ ಆಯೋಜಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನ ದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮ್ಮುಖದಲ್ಲಿ ಏರ್ಪಡಿಸಿರುವ ಭರ್ಜರಿ ಔತಣಕೂಟಕ್ಕೆ ಹಲವು ಗಣ್ಯಾತಿಗಣ್ಯರಿಗೆ ಮೋದಿ ಆಹ್ವಾನ ನೀಡಿದ್ದಾರೆ. ಟ್ರಂಪ್ ಔತಣಕ್ಕೆ ಸಿಎಂ ಯಡಿ ಯೂರಪ್ಪ ಅವರಿಗೂ ಆಮಂತ್ರಣ ಬಂದಿದೆ. ಅಲ್ಲದೆ, ದಕ್ಷಿಣ ಭಾರತದ ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಸಹ ಔತಣಕೂಟಕ್ಕೆ ಆಹ್ವಾನ ನೀಡಲಾಗಿದೆ.










