ಮೈಸೂರು, ಫೆ.26(ಪಿಎಂ)- ಮೈಸೂರಿನ ವಸಂತ್ ಮಹಲ್‍ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಕಂಪ್ಯೂಟರ್ ಶಿಕ್ಷಣ ಪರೀಕ್ಷೆಗಳು ಬುಧವಾರ ಆರಂಭವಾಗಿದ್ದು, ಮಾ.3 ರವರೆಗೆ ನಡೆಯಲಿವೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತಿರುವ ಪರೀಕ್ಷೆಯನ್ನು ಖಾಸಗಿ ಕಂಪ್ಯೂಟರ್ ಶಿಕ್ಷಣ ತರಬೇತಿ ಸಂಸ್ಥೆಗಲ್ಲಿ 6 ತಿಂಗಳ ಕೋರ್ಸ್ ಪೂರೈಸಿದ ಅಭ್ಯರ್ಥಿಗಳು ಬರೆಯುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿದವರು ಈ ಕೋರ್ಸ್ ಅಭ್ಯಾಸ ಮಾಡಲು ಅರ್ಹರು. ಇಂದು ಆಫೀಸ್ ಆಟೋಮೇಷನ್ ಹಾಗೂ ಗ್ರಾಫಿಕ್ ಡಿಸೈನರ್ ಪತ್ರಿಕೆಗಳ ಥಿಯರಿ ಪರೀಕ್ಷೆ ನಡೆಯಿತು. 278 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, ಅವರಲ್ಲಿ 9 ಮಂದಿ ಗೈರು ಹಾಜರಿದ್ದರು.