ವಾಷಿಂಗ್ಟನ್, ಫೆ.24- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿ ಭಾರತಕ್ಕೆ ಬಂದಿದ್ದಾರೆ. ಭಾರತ ಭೇಟಿಯ ಸಂದರ್ಭ ಅವರು ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅದ ರಲ್ಲಿ ತಾಜ್ ಮಹಲ್ ಸಹ ಒಂದು. ವಿಶೇಷ ವೆಂದರೆ ಈ ಹಿಂದೆ ಡೊನಾಲ್ಡ್ ಟ್ರಂಪ್ ಬಳಿ ಅವರದ್ದೇ ಆದ ಖಾಸಗಿ ‘ತಾಜ್ ಮಹಲ್’ ಇತ್ತು! ಟ್ರಂಪ್ ಬಳಿ ‘ತಾಜ್ ಮಹಲ್’ ಹೆಸರಿನ ಐಷಾ ರಾಮಿ ಕ್ಯಾಸಿನೋ (ಜೂಜು ಕೇಂದ್ರ) ಇತ್ತು. ವಿಶ್ವದಲ್ಲೇ ದೊಡ್ಡ ಮತ್ತು ಐಷಾರಾಮಿ ಜೂಜು ಕೇಂದ್ರ ಇದು ಎಂದು ಟ್ರಂಪ್ ಹೇಳಿಕೊಂಡಿದ್ದರು. ಈ ಕ್ಯಾಸಿನೋದಲ್ಲಿ ರಷ್ಯಾದ ಭಾರಿ ಭೂಗತ ದೊರೆಗಳು ಕಾಲಕ್ಷೇಪ ಮಾಡುತ್ತಿದ್ದರಂತೆ. ರಾಜಕಾರಣಿಯಾಗಿ ಯಶಸ್ವಿಯಾಗಿರುವ ಟ್ರಂಪ್ ಅದಕ್ಕೂ ಮುನ್ನ ಉದ್ದಿಮೆದಾರರಾಗಿ ಹೆಸರು ಮಾಡಿದ್ದವರು. ರಿಯಲ್ ಎಸ್ಟೇಟ್ ದಿಗ್ಗಜ ಡೊನಾಲ್ಡ್ ಟ್ರಂಪ್ ಹಲವು ಉದ್ದಿಮೆ ಗಳಲ್ಲಿ ಹಣ ತೊಡಗಿಸಿದ್ದಾರೆ. ಅದರಲ್ಲಿ ಕ್ಯಾಸಿನೋ ಉದ್ದಿಮೆ ಸಹ ಒಂದು. ನ್ಯೂಜೆ ರ್ಸಿಯ ಅಟ್ಲಾಂಟಾ ಸಿಟಿಯಲ್ಲಿ 1990 ರಲ್ಲಿ ಟ್ರಂಪ್ ‘ತಾಜ್ ಮಹಲ್’ ಕ್ಯಾಸಿನೋ ರೆಸಾರ್ಟ್ ಅಧಿಕೃತವಾಗಿ ಉದ್ಘಾಟನೆ ಮಾಡಿದರು. ಇದಕ್ಕೆ ಅವರು ‘ವಿಶ್ವದ 8ನೇ ಅದ್ಭುತ’ ಎಂದು ಟ್ಯಾಗ್ ಲೈನ್ ಸಹ ಸೇರಿಸಿದ್ದರು. ಅರ್ಧ ನಿರ್ಮಾಣಗೊಂಡಿದ್ದ ‘ತಾಜ್ ಮಹಲ್’ ಅನ್ನು ಟ್ರಂಪ್ ಅವರು ಬೇರೆ ಸಂಸ್ಥೆಯೊಂದರಿಂದ ಖರೀದಿಸಿದ್ದರು. ನಂತರ ಅದರ ವಿನ್ಯಾಸ ಬದಲಿಸಿ ಮರು ಉದ್ಘಾಟನೆ ಮಾಡಿದರು. ‘ತಾಜ್ ಮಹಲ್’ ಖರೀದಿ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಕೆಲವು ಸಮಸ್ಯೆಗಳು ಎದುರಾಗಿ ದ್ದವು, ವಿವಾದಗಳೂ ಟ್ರಂಪ್ ಅನ್ನು ಸುತ್ತಿಕೊಂಡಿತ್ತು. ಆದರೆ ಟ್ರಂಪ್ ಅವರ ‘ತಾಜ್ ಮಹಲ್’ ಕ್ಯಾಸಿನೋ ಭಾರೀ ಲಾಭವನ್ನು ಟ್ರಂಪ್‍ಗೆ ತಂದುಕೊಡಲಿಲ್ಲ. ಎರಡೆರಡು ಬಾರಿ ದಿವಾಳಿ ಆಯಿತು. ಕೊನೆಗೆ ಟ್ರಂಪ್ ಅವರ ಟ್ರಂಪ್ ಎಂಟರ್ಟೈನ್‍ಮೆಂಟ್ ರೆಸಾರ್ಟ್ ಸಂಸ್ಥೆ ಅಡಿಗೆ ‘ತಾಜ್ ಮಹಲ್’ ಅನ್ನು ತರಲಾಯಿತು. ಬಹು ವರ್ಷ ಇದೇ ಸಂಸ್ಥೆಯು ‘ತಾಜ್ ಮಹಲ್’ ಕ್ಯಾಸಿನೋ ಅನ್ನು ನಡೆಸಿತು. ಕೊನೆಗೆ 2017ರಲ್ಲಿ ಟ್ರಂಪ್ ಅವರು ಇದನ್ನು ಮಾರಿದರು. ಇದೇ ವರ್ಷವೇ ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಂಡರು. ಟ್ರಂಪ್ ತಮಗೆ ಅಂಟಿದ್ದ ಕೆಲವು ‘ಉದ್ದಿಮೆ ಕಳಂಕ’ ಗಳನ್ನು ಕಳೆದುಕೊಳ್ಳಲೆಂದು ಕ್ಯಾಸಿನೋ ಮಾರಿದರು ಎನ್ನಲಾಗಿತ್ತು. ಇದೀಗ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಜವಾದ ತಾಜ್ ಮಹಲ್ ವೀಕ್ಷಣೆ ಮಾಡಿದ್ದಾರೆ. ಪತ್ನಿ ಮೆಲಾನಿಯಾ, ಮಗಳು ಇವಾಂಕಾ ಟ್ರಂಪ್ ಜೊತೆಗೆ ಆಗಮಿಸಿ ತಾಜ್‍ಮಹಲ್ ವೀಕ್ಷಿಸಿದ್ದು, ತಾಜ್‍ಮಹಲ್ ಮುಂದೆ ಚಿತ್ರವನ್ನೂ ತೆಗೆಸಿಕೊಂಡಿದ್ದಾರೆ.
