ವಿವೇಕಾನಂದರ ಮರೆಯಲಾದೀತೆ!
ಮೈಸೂರು

ವಿವೇಕಾನಂದರ ಮರೆಯಲಾದೀತೆ!

February 25, 2020

ಅಹಮದಾಬಾದ್,ಫೆ.24-ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಲ್ಲಿನ ಮೊಟೆರಾ ಕ್ರೀಡಾಂ ಗಣದಲ್ಲಿ ಏರ್ಪಡಿಸಲಾಗಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಭಾರತದ ಹಬ್ಬಗಳು, ಭಾರತೀಯ ಚಿತ್ರರಂಗ, ಸ್ವಾಮಿ ವಿವೇಕಾ ನಂದರು ಮತ್ತು ಕ್ರಿಕೆಟ್ ತಾರೆಯರ ಬಗ್ಗೆ ಮೆಚ್ಚು ಗೆಯ ಮಾತುಗಳನ್ನಾಡಿದರು. ‘ಐ ಲವ್ ಇಂಡಿಯಾ’ ಎಂದ ಅವರು, ಅದಕ್ಕಾಗಿ ಕಾರಣಗಳನ್ನು ವಿವರಿಸುತ್ತಾ ಹೋದರು. ಭಾರತದಲ್ಲಿ ಕೆಡುಕನ್ನು ಸಂಹರಿಸಿ, ಒಳ್ಳೆಯದನ್ನು ಸ್ಥಾಪಿಸಿದ ಕುರುಹಾಗಿ ವರ್ಣ ರಂಜಿತವಾಗಿ ದೀಪಾವಳಿಯನ್ನು ಆಚರಿಸಲಾಗು ತ್ತದೆ. ಇನ್ನು ಕೆಲವು ದಿನಗಳಲ್ಲಿ ಭಾರತೀಯರು ಜಾತಿ, ಧರ್ಮ ಭೇದ ಮರೆತು ಗಲ್ಲಿ ಗಲ್ಲಿಗಳಲ್ಲಿ ಬಣ್ಣದ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿ ಸುತ್ತಾರೆ. ಭಾರತದಲ್ಲಿ ವರ್ಷಕ್ಕೆ ಸುಮಾರು 2 ಸಾವಿರ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಭಾರತದ ಶೋಲೆ ಮತ್ತು ದಿಲ್‍ವಾಲೆ ದುಲ್ಹನಿಯಾ ಲೇ ಜಾಯೆಂಗೆ (ಡಿಡಿಎಲ್‍ಜೆ) ಚಿತ್ರಗಳ ಯಶಸ್ಸು ಭಾರತೀಯ ಚಿತ್ರರಂಗ ಏನು ಎಂಬುದನ್ನು ತೋರಿ ಸುತ್ತದೆ ಎಂದ ಅವರು, ಭಾರತದ ಸ್ವಾಮಿ ವಿವೇಕಾ ನಂದರನ್ನು ಎಂದಾದರೂ ಮರೆಯುವುದುಂಟೆ ಎಂದು ಸ್ಮರಿಸಿದರು. ಕ್ರಿಕೆಟ್‍ನಲ್ಲಿ ಭಾರತ ವಿಶ್ವದಲ್ಲೇ ತನ್ನ ಛಾಪನ್ನು ಮೂಡಿಸಿದೆ. ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಂತಹ ಅತ್ಯುತ್ತಮ ಆಟಗಾರರನ್ನು ಹೊಂದಿದೆ ಎಂದರು. ಟ್ರಂಪ್ ಅವರು ಸಚಿನ್ ಹೆಸರನ್ನು ‘ಸುಚಿನ್’ ಎಂದು ಉಚ್ಛ ರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ 1 ಪೋಸ್ಟ್‍ಗೆ ಕೆಲವೇ ನಿಮಿಷಗಳಲ್ಲಿ 24 ಸಾವಿರ ಲೈಕ್ ಮತ್ತು ಕಾಮೆಂಟ್‍ಗಳು ಬಂದಿವೆ.

Translate »