ಅಹಮದಾಬಾದ್,ಫೆ.24-ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಹಿಳೆಯೊ ಬ್ಬರು ಇಂದು ಇಡೀ ದಿನ ಗಮನ ಸೆಳೆ ದರು. ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಜೊತೆ ಅಹಮದಾ ಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿ ಕೊಂಡ ಈ ಮಹಿಳೆ ಯಾರು? ಎಂಬುದು ಹಲವ ರಲ್ಲಿ ಕುತೂಹಲ ಮೂಡಿಸಿತ್ತು. ಆ ಮಹಿಳೆ ಗುರ್ದೀಪ್ ಚಾವ್ಲಾ. ಭಾರತ ಮೂಲದ ಗುರ್ದೀಪ್ ಚಾವ್ಲಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಮೆರಿಕ ಅಧ್ಯಕ್ಷರ ಭಾರತ ಭೇಟಿಯಲ್ಲಿ ಅವರು ದುಭಾಷಿಯಾಗಿ ಕಾರ್ಯ ನಿರ್ವ ಹಣೆ ಮಾಡುತ್ತಿದ್ದಾರೆ. 1990ರಲ್ಲಿ ಭಾರತದ ಸಂಸತ್ ನಲ್ಲಿ ಕೆಲಸ ಆರಂಭಿಸಿ, ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗ ಅಥವಾ ಭಾರತದ ಪ್ರಧಾನಿ ಅಮೆರಿಕಕ್ಕೆ ಭೇಟಿ ಕೊಟ್ಟಾಗ ದುಭಾಷಿ ಯಾಗಿ ಚಾವ್ಲಾ ಕಾರ್ಯ ನಿರ್ವಹಿಸುತ್ತಾರೆ. 2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರ ತಕ್ಕೆ ಬಂದಾಗಲೂ ಚಾವ್ಲಾ ದುಭಾಷಿಯಾಗಿದ್ದರು. ಅಮೆರಿಕ, ಕೆನಡಾ ದೇಶಗಳ ನಡುವೆ ಉನ್ನತ ಮಟ್ಟದ ರಾಜತಾಂತ್ರಿಕ ಸಭೆಗಳು ನಡೆದಾಗ ಗುರ್ದೀಪ್ ಚಾವ್ಲಾ ದುಭಾಷಿಯಾಗಿ ಕೆಲಸ ಮಾಡುತ್ತಾರೆ. ಈಗ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಆಗಮಿಸಿದ್ದರಿಂದ ಚಾವ್ಲಾ ದುಭಾಷಿಯಾಗಿ ಕಾರ್ಯನಿರ್ವಹಣೆ ಮಾಡು ತ್ತಾರೆ. ಮಂಗಳವಾರ ದಿಲ್ಲಿ ಹೈದರಾಬಾದ್ ಹೌಸ್‍ನಲ್ಲಿ ಮೋದಿ ಮತ್ತು ಟ್ರಂಪ್ ನಡುವೆ ರಾಜತಾಂತ್ರಿಕ ವಿಚಾರಗಳು ಚರ್ಚೆಯಾಗಲಿದ್ದು, ಅಲ್ಲಿಯೂ ಚಾವ್ಲಾ ಇರುತ್ತಾರೆ.