ಟ್ರಂಪ್ ಔತಣಕ್ಕೆ ಸಿಎಂ ಯಡಿಯೂರಪ್ಪಗೆ ಆಹ್ವಾನ
ಮೈಸೂರು

ಟ್ರಂಪ್ ಔತಣಕ್ಕೆ ಸಿಎಂ ಯಡಿಯೂರಪ್ಪಗೆ ಆಹ್ವಾನ

February 25, 2020

ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವ ದೆಹಲಿಯಲ್ಲಿ ಅದ್ಧೂರಿ ಔತಣ ಕೂಟ ಆಯೋಜಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನ ದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮ್ಮುಖದಲ್ಲಿ ಏರ್ಪಡಿಸಿರುವ ಭರ್ಜರಿ ಔತಣಕೂಟಕ್ಕೆ ಹಲವು ಗಣ್ಯಾತಿಗಣ್ಯರಿಗೆ ಮೋದಿ ಆಹ್ವಾನ ನೀಡಿದ್ದಾರೆ. ಟ್ರಂಪ್ ಔತಣಕ್ಕೆ ಸಿಎಂ ಯಡಿ ಯೂರಪ್ಪ ಅವರಿಗೂ ಆಮಂತ್ರಣ ಬಂದಿದೆ. ಅಲ್ಲದೆ, ದಕ್ಷಿಣ ಭಾರತದ ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಸಹ ಔತಣಕೂಟಕ್ಕೆ ಆಹ್ವಾನ ನೀಡಲಾಗಿದೆ.

Translate »