ಮೈಸೂರು,ಫೆ.24(ಎಂಟಿವೈ)- ಬಲಿಜ ಸಮುದಾಯಕ್ಕೆ ಸೇರಿದ ಬೆಂಗಳೂರು ಆನೇ ಕಲ್ ತಿಮ್ಮಯ್ಯ ಟ್ರಸ್ಟ್ ದತ್ತಿ ಆಸ್ತಿಯನ್ನು ಕಬಳಿಸಲು ಮುಂದಾಗಿರುವ ಮಂಡ್ಯದ ಮಾಜಿ ಸಂಸದರೊಬ್ಬರಿಂದ ಜನಾಂಗದ ಆಸ್ತಿಯನ್ನು ರಕ್ಷಿಸುವಂತೆ ಒತ್ತಾಯಿಸಿ ಸೋಮ ವಾರ ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಸಂಘದ ಪದಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮೈಲ್ಯಾಕ್ ಮಾಜಿ ಅಧ್ಯಕ್ಷ, ಸಂಘದ ಗೌರ ವಾಧ್ಯಕ್ಷ ಹೆಚ್.ಎ.ವೆಂಕಟೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗ ಮನವಿ ಸಲ್ಲಿಸಿ, ಬಲಿಜ ಸಮು ದಾಯಕ್ಕೆ ಸೇರಿದ ಆಸ್ತಿಯನ್ನು ಸಂರಕ್ಷಿ ಸಲು ಕ್ರಮ ಕೈಗೊಳ್ಳುವಂತೆ ಕೋರಿದರು.
ಮನವಿ ಸಲ್ಲಿಸಿದ ಬಳಿಕ ಶ್ರೀ ಯೋಗಿ ನಾರೇ ಯಣ ಬಣಜಿಗ(ಬಲಿಜ) ಸಂಘದ ಗೌರವಾ ಧ್ಯಕ್ಷ ಹೆಚ್.ಎ.ವೆಂಕಟೇಶ್ ಪತ್ರಕರ್ತರೊಂ ದಿಗೆ ಮಾತನಾಡಿ, ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಆನೇಕಲ್ ತಿಮ್ಮಯ್ಯ ಚಾರಿಟೀಸ್ ಟ್ರಸ್ಟ್ ಒಂದು ಸಾರ್ವತ್ರಿಕ ಧರ್ಮ ದತ್ತಿಯಾಗಿದೆ. ಟ್ರಸ್ಟ್ ನಡೆಸುವ ವಿದ್ಯಾರ್ಥಿ ನಿಲಯದಲ್ಲಿ 240ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಆಶ್ರಯ ಪಡೆದು, ವಿವಿಧ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇ ಗೌಡ ಈ ಹಿಂದೆ ಟ್ರಸ್ಟ್ ಪದಾಧಿಕಾರಿಗಳೊಂ ದಿಗೆ ಸೇರಿ ಟ್ರಸ್ಟ್‍ಗೆ ಸೇರಿದ ಕಟ್ಟಡವನ್ನು 2017ರ ಮೇ 26ರಂದು ಅನಧಿಕೃತವಾಗಿ ಬಾಡಿಗೆ/ ಗುತ್ತಿಗೆ ಕರಾರು ಪತ್ರ ಮಾಡಿಸಿ ಕೊಂಡಿದ್ದಾರೆ. ಇದರೊಂದಿಗೆ ಟ್ರಸ್ಟ್‍ಗೆ ಸೇರಿದ ಉಳಿದ ಜಾಗವನ್ನು ಅತಿಕ್ರಮಿಸಿಕೊಂಡು ನಿಯಮ ಗಾಳಿಗೆ ತೂರಿದ್ದಾರೆ. ಇದುವರೆಗೂ ಬಾಡಿಗೆ ಪಾವತಿಸದೆ ಟ್ರಸ್ಟ್‍ಗೆ 7.5 ಕೋಟಿ ರೂ. ಬಾಡಿಗೆ ಉಳಿಸಿಕೊಂಡು ವಂಚಿಸಲೆ ತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಘದ ಪದಾಧಿಕಾರಿಯೊಬ್ಬರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಇಡೀ ಬಲಿಜ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿ ದ್ದಾರೆ. ಸಮುದಾಯದ ವಿದ್ಯಾರ್ಥಿಗಳ ಭವಿ ಷ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನಾಂಗಕ್ಕೆ ಸೇರಿದ ಆಸ್ತಿ ಯನ್ನು ಮಾಜಿ ಸಂಸದರ ಹಿಡಿತದಿಂದ ಬಿಡಿಸಿಕೊಡುವಂತೆ ಮನವಿ ಸಲ್ಲಿಸಿದ್ದೇವೆ. ಈ ಸಂಬಂಧ ರಾಜ್ಯದಾದ್ಯಂತ ಹೋರಾಟ ನಡೆಸಲು ಉದ್ದೇಶಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀ ಯೋಗಿನಾರೇಯಣ ಬಣಜಿಗ(ಬಲಿಜ) ಸಂಘದ ಕಾರ್ಯದರ್ಶಿ ಹೆಚ್.ಆರ್.ಗೋಪಾಲಕೃಷ್ಣ, ಖಜಾಂಚಿ ಡಿ. ನಾಗರಾಜು, ನಿರ್ದೇಶಕರಾದ ಬಿ.ಕೆ.ಸುರೇಶ್, ಡಿ.ಬಿ.ಚಂದ್ರಶೇಖರಯ್ಯ, ಕೆ.ಚಂದ್ರಶೇಖರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.