ಮೈಸೂರು,ಫೆ.24(ಎಂಟಿವೈ)- ಬಲಿಜ ಸಮುದಾಯಕ್ಕೆ ಸೇರಿದ ಬೆಂಗಳೂರು ಆನೇ ಕಲ್ ತಿಮ್ಮಯ್ಯ ಟ್ರಸ್ಟ್ ದತ್ತಿ ಆಸ್ತಿಯನ್ನು ಕಬಳಿಸಲು ಮುಂದಾಗಿರುವ ಮಂಡ್ಯದ ಮಾಜಿ ಸಂಸದರೊಬ್ಬರಿಂದ ಜನಾಂಗದ ಆಸ್ತಿಯನ್ನು ರಕ್ಷಿಸುವಂತೆ ಒತ್ತಾಯಿಸಿ ಸೋಮ ವಾರ ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಸಂಘದ ಪದಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮೈಲ್ಯಾಕ್ ಮಾಜಿ ಅಧ್ಯಕ್ಷ, ಸಂಘದ ಗೌರ ವಾಧ್ಯಕ್ಷ ಹೆಚ್.ಎ.ವೆಂಕಟೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗ ಮನವಿ ಸಲ್ಲಿಸಿ, ಬಲಿಜ ಸಮು ದಾಯಕ್ಕೆ…
ಮೆಡಿಕಲ್ ಸೀಟ್ ಬ್ಲಾಕಿಂಗ್‍ನಿಂದ ಸಾವಿರಾರು ಕೋಟಿ ಅವ್ಯವಹಾರ
February 25, 2020 ನಿವೃತ್ತ ಡಿಜಿಪಿ ಶಂಕರ್ ಬಿದರಿ ಆರೋಪ ಸಚಿವ ಡಾ.ಸುಧಾಕರ್ ಪರಿಶೀಲನೆ ಭರವಸೆ ಬೆಂಗಳೂರು, ಫೆ.24(ಕೆಎಂಶಿ)- ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದರೂ, ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮೌನ ವಹಿಸಿದಂತಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಅವರೇ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಲ್ಲಿ ಸೀಟ್ ಬ್ಲಾಕಿಂಗ್‍ನಿಂದ ಸಾವಿರಾರು ಕೋಟಿ ರೂ. ಅವ್ಯವಹಾರದ ಆರೋಪ ಮಾಡಿದ್ದರು. ಈ ಸಂಬಂಧ ಮತ್ತೊಮ್ಮೆ ಪ್ರತಿಕ್ರಿಯಿಸಿರುವ ಸಚಿವರು,…
ಮಹಾರಾಣಿ ಕಾಲೇಜಿನಲ್ಲಿ ಇಂದಿನಿಂದ 2 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
February 25, 2020`ಹೊಸ ಜಾಗತಿಕ ವ್ಯವಸ್ಥೆಯಲ್ಲಿ ರಾಜ್ಯಶಾಸ್ತ್ರ, ಸಮಾಜ ವಿಜ್ಞಾನಗಳ ಪ್ರಸ್ತುತತೆ’ ಮೈಸೂರು, ಫೆ.24(ಆರ್‍ಕೆಬಿ)- ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಕರ್ನಾಟಕ ರಾಜ್ಯಶಾಸ್ತ್ರ ಸಂಸ್ಥೆ ಜಂಟಿಯಾಗಿ ಕಾಲೇಜು ಆವರಣ ದಲ್ಲಿ ಫೆ.25 ಮತ್ತು 26ರಂದು `ಹೊಸ ಜಾಗತಿಕ ವ್ಯವಸ್ಥೆಯಲ್ಲಿ ರಾಜ್ಯಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ಪ್ರಸ್ತುತತೆ’ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ. ಬಿ.ಟಿ.ವಿಜಯ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆÀ.25ರಂದು ಬೆಳಿಗ್ಗೆ 10ಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ…
ಮೈಸೂರಲ್ಲಿ `ಗೋ ಬ್ಯಾಕ್ ಟ್ರಂಪ್’ ಚಳವಳಿ
February 25, 2020ಮೈಸೂರು,ಫೆ.24(ಎಂಟಿವೈ)- ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿರುವುದನ್ನು ವಿರೋಧಿಸಿ ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‍ಯುಸಿಐ) ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ಮಹಾತ್ಮಗಾಂಧಿ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ ಎಸ್‍ಯುಸಿಐ ಕಾರ್ಯ ಕರ್ತರು ಗೋ ಬ್ಯಾಕ್ ಟ್ರಂಪ್ ಎಂದು ಘೋಷಣೆ ಕೂಗಿ, ಭಿತ್ತಿ ಫಲಕ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. 2 ದಿನಗಳ ಪ್ರವಾಸಕ್ಕಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬೆಳಿಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ಟ್ರಂಪ್ ಸುರಕ್ಷತೆಗಾಗಿ…
ಇಂದು, ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ
February 25, 2020ಮೈಸೂರು, ಫೆ. 24- ಕಾಮಗಾರಿ ಕಾರಣದಿಂದ ಫೆ.25 ಮತ್ತು 26ರಂದು ಮೈಸೂರು ನಗರದ ವಾರ್ಡ್ ಸಂಖ್ಯೆ 45ರಿಂದ 51ರವರೆಗಿನ ಶಾರದಾದೇವಿನಗರ, ದಟ್ಟಗಳ್ಳಿ, ಕುವೆಂಪುನಗರ, ಜಯನಗರ, ಲಕ್ಷ್ಮಿಪುರಂ, ಸುಣ್ಣದಕೇರಿ, ಅಗ್ರಹಾರ, ವಾರ್ಡ್ ಸಂಖ್ಯೆ 54ರಿಂದ 65ರವರೆಗಿನ ಗುಂಡೂರಾವ್ ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪುನಗರ ಸಿಐಟಿಬಿ, ರಾಮಕೃಷ್ಣನಗರ, ಕುವೆಂಪುನಗರ ‘ಎಂ’ ಬ್ಲಾಕ್, ಅಶೋಕ ಪುರಂ, ವಿದ್ಯಾರಣ್ಯಪುರಂ, ಭಾಗಶಃ ವಿಶ್ವೇಶ್ವರನಗರ, ಜೆ.ಪಿ.ನಗರ, ಅರವಿಂದನಗರ, ಶ್ರೀರಾಂಪುರ ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು…
ಕುಕ್ಕರಹಳ್ಳಿ ಕೆರೆ ರಸ್ತೆ ಬದಿ ಅರಣ್ಯ ವೀಕ್ಷಕನ ಮೃತದೇಹ ಪತ್ತೆ
February 25, 2020ಮೈಸೂರು, ಫೆ.24(ಆರ್‍ಕೆ)- ಮೈಸೂರಿನ ಕುಕ್ಕರಹಳ್ಳಿ ಕೆರೆ ರಸ್ತೆ ಬದಿಯ ನೀರಿನ ಹೊಂಡದಲ್ಲಿ ಅರಣ್ಯ ವೀಕ್ಷಕನ ಮೃತ ದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ. ಸರಗೂರು ಪಟ್ಟಣ ನಿವಾಸಿ ಮಹೇಶ (39) ಸಾವನ್ನಪ್ಪಿದವರು. ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕ (ವಾಚರ್) ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಅವರ ಮೃತದೇಹ ಮೈಸೂರಿನ ಸರಸ್ವತಿ ಪುರಂನಲ್ಲಿರುವ ಕುಕ್ಕರಹಳ್ಳಿ ಕೆರೆ ರಸ್ತೆ ಬದಿ ಸಣ್ಣ ನೀರಿನ ಹೊಂಡದಲ್ಲಿ ಇಂದು ಮಧ್ಯಾಹ್ನ 2 ಗಂಟೆ ವೇಳೆ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಜಯಲಕ್ಷ್ಮಿಪುರಂ ಠಾಣೆ…
ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ
February 25, 2020ಮೈಸೂರು,ಫೆ.24-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 4ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕೆಲಸದ ನಿಮಿತ್ತ ಕಾಮಗಾರಿ ಹಮ್ಮಿಕೊಳ್ಳ ಲಾಗಿದೆ. ಫೆ.25ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ 66/11 ಕೆವಿ ದೂರ (ಮೈಸೂರು) ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ದೂರ, ತಳೂರು, ಮುರುಡಗಳ್ಳಿ, ದೊಡ್ಡ ಕಾಟೂರು, ಚಿಕ್ಕ ಕಾಟೂರು ಹಾಗೂ ಸುತ್ತಮುತ್ತÀ, 66/11ಕೆ.ವಿ. ತಾಯೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಪ್ರದೇಶಗಳಾದ ತಾಯೂರು , ಈಶ್ವರಗೌಡನಹಳ್ಳಿ, ವಡ್ಡರಹುಂಡಿ, ಬೀರಿಹುಂಡಿ, ಕೊಟ್ಟರಾಯನಹುಂಡಿ, ಗೆಜ್ಜಗನ ಹಳ್ಳಿ, ಕಾಹಳ್ಳಿ ಮತ್ತು ಕಲ್ಕುಂದ…
ಮಹಾಜನ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ
February 25, 2020ಮೈಸೂರು, ಫೆ.24-ಮಹಾಜನ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಿತರಿಸಿ ಮಾತನಾಡಿದ ಪ್ರತಿಭಾನ್ವಿತ ರಂಗ ಕಲಾವಿದೆ, ಗಾಯಕಿ ಹಾಗೂ ನಟಿ ಕುಮಾರಿ ದಿಶಾ ರಮೇಶ್, ತಮ್ಮ ಕಾಲೇಜಿನ ಹಿಂದಿನ ಸುಂದರ ದಿನ ಗಳನ್ನು ಮೆಲಕು ಹಾಕುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮೊಳಗಿರುವ ಪ್ರತಿಭೆ ಯನ್ನು ಬೆಳೆಸಿಕೊಳ್ಳುವೆಡೆಗೆ ಮನಸ್ಸು ಮಾಡ ಬೇಕು. ವಿದ್ಯಾರ್ಥಿ ದೆಸೆಯಲ್ಲಿನ ಯಾವುದೇ ರೀತಿಯ ಸೋಲನ್ನು ಸೋಲು ಎಂದು ಪರಿ ಗಣಿಸದೆ ಸವಾಲಾಗಿ ಸ್ವೀಕರಿಸಿ ಮುನ್ನಡೆ…
ಇಂದು ಭಾರತಕ್ಕೆ ಟ್ರಂಪ್ ಆಗಮನ
February 24, 2020ಅಹಮದಾಬಾದ್ (ಗುಜರಾತ್), ಫೆ.23- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಕ್ಷಣಗಣನೆ ಶುರುವಾಗಿದೆ. ಫೆಬ್ರವರಿ 24ರಂದು (ಸೋಮವಾರ) ಭಾರತಕ್ಕೆ ಆಗಮಿಸಲಿರುವ ಟ್ರಂಪ್, ಅಹಮದಾಬಾದ್ ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಅಹ ಮದಾಬಾದ್ ಏರ್‍ಪೆÇೀರ್ಟ್‍ನಲ್ಲಂತೂ ಸೋಮ ವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಾಮಾನ್ಯ ಪ್ರಯಾಣಿಕರ ಆಗಮನ ಹಾಗೂ ನಿರ್ಗ ಮನ ದುಸ್ತರವಾಗಲಿದೆ. ಹೀಗಾಗಿ, ಪ್ರಯಾಣಿಕರು ಆದಷ್ಟು ಬೇಗ ನಿಲ್ದಾಣದಲ್ಲಿ ಇರಬೇಕೆಂದು ವಿಸ್ತಾರ, ಇಂಡಿಗೋ, ಸ್ಪೈಸ್ ಜೆಟ್ ಸೇರಿದಂತೆ…
ಮುನ್ಸಿಪಲ್ ಬಾಂಡ್ ಮೂಲಕ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಮೈಸೂರು ಆಯ್ಕೆ
February 24, 2020ಮೈಸೂರು, ಫೆ.23- ದೊಡ್ಡ ದೊಡ್ಡ ಯೋಜನೆ ಅನು ಷ್ಠಾನಕ್ಕೆ ಅಗತ್ಯವಾದ ಬೃಹತ್ ಬಂಡವಾಳವನ್ನು ಮುನ್ಸಿಪಲ್ ಬಾಂಡ್ ಮೂಲಕ ಮುಕ್ತ ಮಾರು ಕಟ್ಟೆ ವ್ಯವಸ್ಥೆಯಲ್ಲಿ ಪಡೆಯಲು ರಾಜ್ಯ ದಿಂದ ಮೈಸೂರು ಮತ್ತು ಮಂಗ ಳೂರು ನಗರ ಆಯ್ಕೆಯಾಗಿದ್ದು, ಮೈಸೂರಿನಲ್ಲಿ ಅಗತ್ಯವಾಗಿ ಜಾರಿ ಗೊಳಿಸಲು ಬೇಕಾದ ಯೋಜನೆ ರೂಪುರೇಷೆ ಸಿದ್ಧಪಡಿಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುನ್ಸಿಪಲ್ ಬಾಂಡ್ ವ್ಯವಸ್ಥೆ ಮೂಲಕ ಯೋಜನೆಗಳಿಗೆ ಬಂಡ ವಾಳ ಪಡೆಯಲು ಈ ಬಾರಿ ದೇಶದಲ್ಲಿ 6 ನಗರಗಳು ಆಯ್ಕೆ ಯಾಗಿದ್ದು, ಅದರಲ್ಲಿ ಕರ್ನಾಟಕದಿಂದ ಮೈಸೂರು…










