ಮೈಸೂರಲ್ಲಿ `ಗೋ ಬ್ಯಾಕ್ ಟ್ರಂಪ್’ ಚಳವಳಿ
ಮೈಸೂರು

ಮೈಸೂರಲ್ಲಿ `ಗೋ ಬ್ಯಾಕ್ ಟ್ರಂಪ್’ ಚಳವಳಿ

February 25, 2020

ಮೈಸೂರು,ಫೆ.24(ಎಂಟಿವೈ)- ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿರುವುದನ್ನು ವಿರೋಧಿಸಿ ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‍ಯುಸಿಐ) ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ಮಹಾತ್ಮಗಾಂಧಿ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ ಎಸ್‍ಯುಸಿಐ ಕಾರ್ಯ ಕರ್ತರು ಗೋ ಬ್ಯಾಕ್ ಟ್ರಂಪ್ ಎಂದು ಘೋಷಣೆ ಕೂಗಿ, ಭಿತ್ತಿ ಫಲಕ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

2 ದಿನಗಳ ಪ್ರವಾಸಕ್ಕಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬೆಳಿಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ಟ್ರಂಪ್ ಸುರಕ್ಷತೆಗಾಗಿ ಕೇಂದ್ರ ಸರ್ಕಾರದಿಂದ 100 ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತ ವನ್ನು ಖರ್ಚು ಮಾಡಲಾಗುತ್ತಿದೆ. ಅವರು ಸಾಗುವ ದಾರಿಯಲ್ಲಿರುವ ಕೊಳಗೇರಿಗಳು ಕಾಣದಂತೆ ಗೋಡೆ ಕಟ್ಟಲಾಗಿದ್ದು, ನಾಚಿಕೆಗೇಡಿನ ಕೆಲಸ. ಅಮೆರಿಕಾದೊಂದಿಗೆ ಭಾರತ ಮಿಲಿಟರಿ ಒಪ್ಪಂದ ಮಾಡಲು ಮುಂದಾಗಿರುವುದು ಭಾರತದಲ್ಲಿ ಸಾಮ್ರಾ ಜ್ಯವಾದದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಬಲಿ ದಾನ ಮಾಡಿದ ಹೋರಾಟಗಾರರಿಗೆ ಮಾಡುವ ಅಪಚಾರ ಎಂದು ಕಿಡಿಕಾರಿದರು. ಟ್ರಂಪ್ ಭಾರತಕ್ಕೆ ಭೇಟಿ ಸಮಯದಲ್ಲಿ ಹೈನುಗಾರಿಕೆ, ಕೋಳಿ ಮಾಂಸ ಮತ್ತು ಆಟೋಮೊಬೈಲ್‍ಗೆ ಸಂಬಂಧಿಸಿದ ಒಪ್ಪಂದದ ಹಿನ್ನೆಲೆಯಲ್ಲಿ ಅಮೆರಿಕಾದೊಂದಿಗಿನ ಒಪ್ಪಂದ ರೈತರ ಮತ್ತು ಭಾರತದ ಅರ್ಥ ವ್ಯವಸ್ಥೆಗೆ ವಿರೋಧಿ ಯಾಗಿದ್ದು. ಈ ಒಪ್ಪಂದವನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಸ್‍ಯುಸಿಐ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ.ರವಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »