ಮೈಸೂರು, ಫೆ. 24- ಕಾಮಗಾರಿ ಕಾರಣದಿಂದ ಫೆ.25 ಮತ್ತು 26ರಂದು ಮೈಸೂರು ನಗರದ ವಾರ್ಡ್ ಸಂಖ್ಯೆ 45ರಿಂದ 51ರವರೆಗಿನ ಶಾರದಾದೇವಿನಗರ, ದಟ್ಟಗಳ್ಳಿ, ಕುವೆಂಪುನಗರ, ಜಯನಗರ, ಲಕ್ಷ್ಮಿಪುರಂ, ಸುಣ್ಣದಕೇರಿ, ಅಗ್ರಹಾರ, ವಾರ್ಡ್ ಸಂಖ್ಯೆ 54ರಿಂದ 65ರವರೆಗಿನ ಗುಂಡೂರಾವ್ ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪುನಗರ ಸಿಐಟಿಬಿ, ರಾಮಕೃಷ್ಣನಗರ, ಕುವೆಂಪುನಗರ ‘ಎಂ’ ಬ್ಲಾಕ್, ಅಶೋಕ ಪುರಂ, ವಿದ್ಯಾರಣ್ಯಪುರಂ, ಭಾಗಶಃ ವಿಶ್ವೇಶ್ವರನಗರ, ಜೆ.ಪಿ.ನಗರ, ಅರವಿಂದನಗರ, ಶ್ರೀರಾಂಪುರ ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.