ಮಹಾರಾಣಿ ಕಾಲೇಜಿನಲ್ಲಿ ಇಂದಿನಿಂದ 2 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
ಮೈಸೂರು

ಮಹಾರಾಣಿ ಕಾಲೇಜಿನಲ್ಲಿ ಇಂದಿನಿಂದ 2 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

February 25, 2020

`ಹೊಸ ಜಾಗತಿಕ ವ್ಯವಸ್ಥೆಯಲ್ಲಿ ರಾಜ್ಯಶಾಸ್ತ್ರ, ಸಮಾಜ ವಿಜ್ಞಾನಗಳ ಪ್ರಸ್ತುತತೆ’
ಮೈಸೂರು, ಫೆ.24(ಆರ್‍ಕೆಬಿ)- ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಕರ್ನಾಟಕ ರಾಜ್ಯಶಾಸ್ತ್ರ ಸಂಸ್ಥೆ ಜಂಟಿಯಾಗಿ ಕಾಲೇಜು ಆವರಣ ದಲ್ಲಿ ಫೆ.25 ಮತ್ತು 26ರಂದು `ಹೊಸ ಜಾಗತಿಕ ವ್ಯವಸ್ಥೆಯಲ್ಲಿ ರಾಜ್ಯಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ಪ್ರಸ್ತುತತೆ’ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ. ಬಿ.ಟಿ.ವಿಜಯ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆÀ.25ರಂದು ಬೆಳಿಗ್ಗೆ 10ಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಉದ್ಘಾಟಿಸುವರು. ಡಾ.ಕುಮಾರ್‍ನಾಯಕ್, ಪೆÇ್ರ.ಗೋಪಾಲ್ ರೆಡ್ಡಿ ಹಾಗೂ ಇನ್ನಿತರರು ಅತಿಥಿಯಾಗಿ ಭಾಗವಹಿಸುವರು ಎಂದರು.

ಈ ವಿಚಾರ ಸಂಕಿರಣದಲ್ಲಿ ಸುಮಾರು 200 ಪತ್ರಿಕೆಗಳು ಮಂಡನೆಯಾಗಲಿದ್ದು, ಅವು ಕನ್ನಡ ಹಾಗೂ ಇಂಗ್ಲಿಷ್‍ನಲ್ಲಿ ಇರಲಿವೆ. ವಿದೇಶದಿಂದಲೂ ಆಗಮಿಸುವ ಪರಿಣತರು ಪತ್ರಿಕೆ ಮಂಡಿಸಲಿದ್ದಾರೆ ಎಂದು ಹೇಳಿದರು. ಕಾಲೇಜಿನ ಶೇ.90ರಷ್ಟು ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಹಾಗೂ ಗ್ರಾಮಾಂತರ ಪ್ರದೇಶದವರಾಗಿದ್ದು, ಸಾಮಾಜಿಕ ವಿಜ್ಞಾನಗಳ ಮಹತ್ವ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿ ಸಿಕೊಂಡು ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು. ಈಗ ಕಾಲೇಜು ನ್ಯಾಕ್ ಶ್ರೇಣಿಯಲ್ಲಿ ಬಿ ಗುಂಪಿನಲ್ಲಿದ್ದು, ಈ ರೀತಿಯ ವಿಚಾರ ಸಂಕಿರಣಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸುವ ಮೂಲಕ ಎ ಶ್ರೇಣಿ ತಲುಪಿದಲ್ಲಿ, ಯುಜಿಸಿಯಿಂದಲೇ ಕಾಲೇಜು ಉನ್ನತಿಗೆ ಅಗತ್ಯವಾದ ಎಲ್ಲ ಹಣಕಾಸಿನ ನೆರವು ಸಹ ದೊರೆಯಲಿದೆ ಎಂದರು. ಗೋಷ್ಠಿಯಲ್ಲಿ ಪೆÇ್ರ.ಎಸ್.ಉಮಾ, ಡಾ.ಗುರುಬಸವ ರಾಜಸ್ವಾಮಿ ಪಂಡಿತ್, ಡಾ.ಪುಟ್ಟರಾಜು, ಪೆÇ್ರ.ಬಸವರಾಜು, ಡಾ.ಮಂಗಳಮೂರ್ತಿ ಉಪಸ್ಥಿತರಿದ್ದರು.

Translate »