ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ

February 25, 2020

ಮೈಸೂರು,ಫೆ.24-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 4ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕೆಲಸದ ನಿಮಿತ್ತ ಕಾಮಗಾರಿ ಹಮ್ಮಿಕೊಳ್ಳ ಲಾಗಿದೆ. ಫೆ.25ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ 66/11 ಕೆವಿ ದೂರ (ಮೈಸೂರು) ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ದೂರ, ತಳೂರು, ಮುರುಡಗಳ್ಳಿ, ದೊಡ್ಡ ಕಾಟೂರು, ಚಿಕ್ಕ ಕಾಟೂರು ಹಾಗೂ ಸುತ್ತಮುತ್ತÀ, 66/11ಕೆ.ವಿ. ತಾಯೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಪ್ರದೇಶಗಳಾದ ತಾಯೂರು , ಈಶ್ವರಗೌಡನಹಳ್ಳಿ, ವಡ್ಡರಹುಂಡಿ, ಬೀರಿಹುಂಡಿ, ಕೊಟ್ಟರಾಯನಹುಂಡಿ, ಗೆಜ್ಜಗನ ಹಳ್ಳಿ, ಕಾಹಳ್ಳಿ ಮತ್ತು ಕಲ್ಕುಂದ ವ್ಯಾಪ್ತಿಯ ಗ್ರಾಮಗಳು/ ಗ್ರಾಪಂ ವ್ಯಾಪ್ತಿಯ ಪ್ರದೇಶ ಗಳು. 66/11ಕೆ.ವಿ. ಸಿಂಧುವಳ್ಳಿಪುರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಪ್ರದೇಶ ಗಳಾದ ದೇವೀರಮ್ಮನಹಳ್ಳಿ, ದೇವರಸನಹಳ್ಳಿ, ಕಳಲೆ, ನವಿಲೂರು, ಸಿಂಧುವಳ್ಳಿ, ಕೂಡ್ಲಾಪುರ, ಕಸುವಿನಹಳ್ಳಿ, ಗ್ರಾಪಂ ವ್ಯಾಪ್ತಿ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.

Translate »