ಮಹಾಜನ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ  
ಮೈಸೂರು

ಮಹಾಜನ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ  

February 25, 2020

ಮೈಸೂರು, ಫೆ.24-ಮಹಾಜನ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.

ಬಹುಮಾನ ವಿತರಿಸಿ ಮಾತನಾಡಿದ ಪ್ರತಿಭಾನ್ವಿತ ರಂಗ ಕಲಾವಿದೆ, ಗಾಯಕಿ ಹಾಗೂ ನಟಿ ಕುಮಾರಿ ದಿಶಾ ರಮೇಶ್, ತಮ್ಮ ಕಾಲೇಜಿನ ಹಿಂದಿನ ಸುಂದರ ದಿನ ಗಳನ್ನು ಮೆಲಕು ಹಾಕುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮೊಳಗಿರುವ ಪ್ರತಿಭೆ ಯನ್ನು ಬೆಳೆಸಿಕೊಳ್ಳುವೆಡೆಗೆ ಮನಸ್ಸು ಮಾಡ ಬೇಕು. ವಿದ್ಯಾರ್ಥಿ ದೆಸೆಯಲ್ಲಿನ ಯಾವುದೇ ರೀತಿಯ ಸೋಲನ್ನು ಸೋಲು ಎಂದು ಪರಿ ಗಣಿಸದೆ ಸವಾಲಾಗಿ ಸ್ವೀಕರಿಸಿ ಮುನ್ನಡೆ ಯಬೇಕೆಂದು ಕಿವಿಮಾತು ಹೇಳಿದರಲ್ಲದೆ ರಂಗಗೀತೆಗಳ ಹಾಡಿ ರಂಜಿಸಿದರು.

ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಮುರಳೀ ಧರ್ ಮಾತನಾಡಿ, ಅತ್ಯಂತ ಕಿರಿಯ ವಯ ಸ್ಸಿನಲ್ಲಿ ಎತ್ತರದ ಸಾಧನೆ ಮಾಡಿದ ಕಾಲೇ ಜಿನ ಹಿರಿಯ ವಿದ್ಯಾರ್ಥಿನಿ ದಿಶಾ ರಮೇಶ್ ಅವರಂತೆ ತಾವುಗಳು ತಮ್ಮಲ್ಲಿರುವ ಶಕ್ತಿ ಯನ್ನು ಗುರುತಿಸಿಕೊಂಡು ಮುನ್ನಡೆಯ ಬೇಕೆಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ವೆಂಕಟರಾಮು, ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ವಿಭುದಾ ಪ್ರಾರ್ಥನೆಯೊಂ ದಿಗೆ ಕಾರ್ಯಕ್ರಮ ಆರಂಭವಾಯಿತು.  ಪ್ರತಿಭಾ ವೇದಿಕೆಯ ಸಂಚಾಲಕರು ಹಾಗೂ ಉಪಪ್ರಾಂಶುಪಾಲರಾದ ಬಿ.ಆರ್.ಜಯ ಕುಮಾರಿ ಸ್ವಾಗತಿಸಿದರು.

ಶೈಕ್ಷಣಿಕ ಸಲಹೆಗಾರ ಡಾ.ಎಸ್.ಆರ್. ರಮೇಶ್ ಉಪಸ್ಥಿತರಿದ್ದರು. ಬಿಸಿಎ ವಿಭಾ ಗದ ಸಹಾಯಕ ಪ್ರಾಧ್ಯಾಪಕರಾದ ರಾಧೇಶ್ ವಂದಿಸಿದರು. ಕಾರ್ಯಕ್ರಮವನ್ನು ಬಿಎ ವಿದ್ಯಾರ್ಥಿನಿಯರಾದ ಏಕತಾ ಭಟ್ ಹಾಗೂ ದಿವ್ಯಶ್ರೀ ನಿರೂಪಿಸಿದರು.

Translate »