ಇಂದು ಭಾರತಕ್ಕೆ ಟ್ರಂಪ್ ಆಗಮನ
ಮೈಸೂರು

ಇಂದು ಭಾರತಕ್ಕೆ ಟ್ರಂಪ್ ಆಗಮನ

February 24, 2020

ಅಹಮದಾಬಾದ್ (ಗುಜರಾತ್), ಫೆ.23- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಕ್ಷಣಗಣನೆ ಶುರುವಾಗಿದೆ. ಫೆಬ್ರವರಿ 24ರಂದು (ಸೋಮವಾರ) ಭಾರತಕ್ಕೆ ಆಗಮಿಸಲಿರುವ ಟ್ರಂಪ್, ಅಹಮದಾಬಾದ್ ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಹೀಗಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಅಹ ಮದಾಬಾದ್ ಏರ್‍ಪೆÇೀರ್ಟ್‍ನಲ್ಲಂತೂ ಸೋಮ ವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಾಮಾನ್ಯ ಪ್ರಯಾಣಿಕರ ಆಗಮನ ಹಾಗೂ ನಿರ್ಗ ಮನ ದುಸ್ತರವಾಗಲಿದೆ. ಹೀಗಾಗಿ, ಪ್ರಯಾಣಿಕರು ಆದಷ್ಟು ಬೇಗ ನಿಲ್ದಾಣದಲ್ಲಿ ಇರಬೇಕೆಂದು ವಿಸ್ತಾರ, ಇಂಡಿಗೋ, ಸ್ಪೈಸ್ ಜೆಟ್
ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಸಂದೇಶ ರವಾನಿಸಿವೆ.

ಗುಜರಾತ್ ಭೇಟಿ ವೇಳೆ ಟ್ರಂಪ್ ಹಾಗೂ ಅವರ ಪತ್ನಿ ಅಹಮದಾಬಾದ್‍ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ, ಗಾಂಧೀಜಿಯವರ ಆಶ್ರಮಕ್ಕೆ ಈಗಿನಿಂದಲೇ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಟ್ರಂಪ್ ಆಗಮದ ವೇಳೆ ಸಬರಮತಿ ಗುರುಕುಲದ ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶನ ನೀಡಲು ನಿರ್ಧರಿಸಿ ದ್ದಾರೆ. ಹೀಗಾಗಿ, ಟ್ರಂಪ್ ಆಗಮನದ ಮುನ್ನಾದಿನ ಮಲ್ಲಕಂಬ ತರಬೇತಿ ಭರದಿಂದ ಸಾಗಿತ್ತು. ಇನ್ನು, `ನಮಸ್ತೆ ಟ್ರಂಪ್’ ಕಾರ್ಯಕ್ರಮ ನಡೆಯಲಿರುವ ಮೊಟೇರಾ ಕ್ರೀಡಾಂ ಗಣವಂತೂ ಪೆÇಲೀಸ್ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ. ಕ್ರೀಡಾಂಗಣದ ಬಳಿಯಲ್ಲೇ 25 ಹಾಸಿಗೆಗಳ ತುರ್ತು ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಲಾಗಿದೆ.

ಡೊನಾಲ್ಡ್ ಟ್ರಂಪ್ ಆಗಮಿಸುವ ಮುನ್ನಾ ದಿನವೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್‍ಗೆ ಆಗಮಿಸಿ ಇಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಯಲಿರುವ ಮೊಟೇರಾ ಸ್ಟೇಡಿಯಂನಲ್ಲಿ ಅಮಿತ್ ಶಾ ಅಂತಿಮ ಹಂತದ ಸಿದ್ದತಾ ಕಾರ್ಯಗಳ ಪರಿಶೀಲನೆ ನಡೆಸಿದರು. ಅಹಮದಾಬಾದ್‍ನಲ್ಲಿ ಟ್ರಂಪ್ ಹಾಗೂ ಅವರ ಪತ್ನಿಗೆ ಕೇವಲ ಸಸ್ಯಾಹಾರ ಮಾತ್ರ ಸಿಗಲಿದೆ..! ಮುಖ್ಯ ಶೆಫ್ ಸುರೇಶ್ ಖನ್ನಾ, ಈಗಾಗಲೇ ಆಹಾರ ತಯಾರಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಗುಜರಾತಿ ಶೈಲಿಯ ರುಚಿಕಟ್ಟಾದ ಸಸ್ಯಾಹಾರ ವನ್ನು ಟ್ರಂಪ್ ದಂಪತಿಗೆ ಉಣಬಡಿಸಲಾಗುವುದು ಎಂದು ಸುರೇಶ್ ಖನ್ನಾ ತಿಳಿಸಿದ್ದಾರೆ.

Trump 2 day visit to India from today-1

ಅಮೆರಿಕಾ ಅಧ್ಯಕ್ಷರನ್ನು ಸ್ವಾಗತಿಸಲು ಭಾರತ ಎದುರು ನೋಡುತ್ತಿದೆ  ಪ್ರಧಾನಿ ಮೋದಿ ಟ್ವೀಟ್
ನವದೆಹಲಿ, ಫೆ.23-ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಭಾರತ ಎದುರು ನೋಡುತ್ತಿರು ವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾಳೆ ಯಿಂದ ಎರಡು ದಿನಗಳ ಕಾಲ ಅಮೆರಿಕಾ ಅಧ್ಯಕ್ಷರು ಭಾರತ ಭೇಟಿ ಕೈಗೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಭಾರತ ಎದುರು ನೋಡುತ್ತಿದೆ. ನಾಳೆ ಅಹಮದಾಬಾದಿನ ಐತಿಹಾಸಿಕ ಕಾರ್ಯಕ್ರಮದ ಮೂಲಕ ಅವರು ನಮ್ಮೊಂದಿಗೆ ಇರುವುದು ಗೌರವವನ್ನುಂಟು ಮಾಡ ಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ, ಇಡೀ ಗುಜರಾತ್ ಒಂದೇ ಧ್ವನಿಯಲ್ಲಿ `ನಮಸ್ತೆ ಟ್ರಂಪ್’ ಬಗ್ಗೆ ಮಾತನಾಡುತ್ತಿದೆ ಎಂದಿದ್ದಾರೆ. ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಇಂದು ಅಹಮದಾ ಬಾದಿಗೆ ಭೇಟಿ ನೀಡಿದ ಗೃಹ ಸಚಿವ ಅಮಿತ್ ಶಾ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.

ಮೊಟೆರಾ ಕ್ರೀಡಾಂಗಣದಲ್ಲಿ ಬೃಹತ್ ಜನಸ್ತೋಮ ವನ್ನುದ್ದೇಶಿಸಿ ಟ್ರಂಪ್ ಮಾತನಾಡಲಿದ್ದಾರೆ. ನಂತರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಅಹಮದಾ ಬಾದ್, ಆಗ್ರಾ ಮತ್ತು ನವದೆಹಲಿಯಲ್ಲಿ ಎಲ್ಲೆಲ್ಲೂ ಟ್ರಂಪ್ ಸ್ವಾಗತಿಸುವ ಹೋರ್ಡಿಂಗ್‍ಗಳು ರಾರಾಜಿಸುತ್ತಿವೆ.

Trump 2 day visit to India from today-1-3

ಟ್ರಂಪ್ ಸ್ವಾಗತಕ್ಕೆ ಬೆಂಗಳೂರಲ್ಲಿ  15 ಅಡಿ ಉದ್ದದ ಗಾಳಿಪಟ ಸಿದ್ಧ
ಬೆಂಗಳೂರು, ಫೆ.23- ಡೊನಾಲ್ಡ್ ಟ್ರಂಪ್ ಭಾರತದ ಭೇಟಿಗೆ ಇಡೀ ದೇಶವೇ ಎದುರು ನೋಡುತ್ತಿರುವ ಈ ಸಮಯ ದಲ್ಲಿ ಅವರನ್ನು ಸ್ವಾಗತಿಸಲು ಸಿಲಿ ಕಾನ್ ಸಿಟಿ ಗಾಳಿಪಟ ಕಲಾವಿದ ರೊಬ್ಬರು ಟ್ರಂಪ್ ಸ್ವಾಗತಕ್ಕಾಗಿ 15 ಅಡಿ ಉದ್ದದ ವಿಶೇಷ ಗಾಳಿಪಟ ವನ್ನು ಹಾರಿಸಿದ್ದಾರೆ. ಕರ್ನಾಟಕದ ಅಂತರರಾಷ್ಟ್ರೀಯ ಗಾಳಿಪಟ ಕಲಾ ವಿದ ವಿ.ಕೆ.ರಾವ್ ಈ ವಿಶೇಷ ಗಾಳಿ ಪಟ ತಯಾರಿಸಿದ್ದು, ಇದರಲ್ಲಿ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಯವರ ಭಾವಚಿತ್ರಗಳಿದ್ದು `ನಮಸ್ತೆ ಟ್ರಂಪ್’ ಮತ್ತು `ಭಾರತಕ್ಕೆ ಸ್ವಾಗತ’ ಎಂಬ ಸಂದೇಶವಿದೆ. “ನಾನು ಯುಎಸ್ ಅಧ್ಯಕ್ಷರನ್ನು ಸ್ವಾಗತಿಸಲು ಈ ವಿಶೇಷ ಗಾಳಿಪಟವನ್ನು ರಚಿಸಿದ್ದೇನೆ. ಗಾಳಿಪಟವು 15 ಅಡಿ ಉದ್ದವಾಗಿದೆ” ಎಂದು ರಾವ್ ಹೇಳಿದ್ದಾರೆ. ಈ ಹಿಂದೆ ಪಂಜಾಬ್‍ನ ಅಮೃತಸರ ಮೂಲದ ಗಾಳಿಪಟ ತಯಾರಕರು ಟ್ರಂಪ್ ಅವರನ್ನು ಸ್ವಾಗತಿಸಲು ವಿಶೇಷ ಗಾಳಿಪಟಗಳನ್ನು ವಿನ್ಯಾಸಗೊಳಿಸಿದ್ದರು.

ಯಾವೆಲ್ಲಾ ಸ್ಥಳಗಳಿಗೆ ಭೇಟಿ…?
ನವದೆಹಲಿ,ಫೆ.23-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಸ್ವಾಗತಿಸಲು ಭಾರತ ಸಿದ್ಧವಾಗಿದೆ. ಈಗಾಗಲೇ ಅಹಮದಾಬಾದ್, ಆಗ್ರಾ, ನವದೆಹಲಿ ಯಲ್ಲಿ ಅಂತಿಮ ಹಂತದ ಸಿದ್ಧತೆ ಜೋರಾಗಿದೆ. ನಾಳೆಯಿಂದ 2 ದಿನ ಟ್ರಂಪ್ ಇಂಡಿಯಾದಲ್ಲಿರ ಲಿದ್ದಾರೆ. ಟ್ರಂಪ್ ಜೊತೆ ಅವರ ಪತ್ನಿ ಮೆಲಾ ನಿಯಾ ಟ್ರಂಪ್, ಪುತ್ರಿ ಇವಾಂಕಾ ಕೂಡ ಭಾರ ತಕ್ಕೆ ಆಗಮಿಸುತ್ತಿದ್ದಾರೆ. ಈ ಪ್ರವಾಸದಲ್ಲಿ ಭಾರತದ ಸಂಪ್ರದಾಯ, ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಲಿ ರುವ ಟ್ರಂಪ್ ದಂಪತಿ ಅನೇಕ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಲಿದ್ದಾರೆ. ಕೇವಲ 36 ಗಂಟೆ ಗಳ ಟ್ರಂಪ್ ಇಂಡಿಯಾ ಟೂರ್ ಹಲವು ಕಾರಣ ಗಳಿಗೆ ಪ್ರಮುಖವಾಗಿದೆ. ಹಾಗಿದ್ರೆ, ಟ್ರಂಪ್ ಪ್ರವಾ ಸದ ವೇಳಾಪಟ್ಟಿ ಹೇಗಿದೆ…? ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂಬುದನ್ನು ಮುಂದೆ ನೋಡಿ.

ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮನ: ಡೊನಾಲ್ಡ್ ಟ್ರಂಪ್ ನಾಳೆ ಮಧ್ಯಾಹ್ನ 12 ಗಂಟೆ ವೇಳೆಗೆ ಅಹಮದಾಬಾದ್‍ನ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಮ್ಮ ಏರ್ ಫೆÇೀರ್ಸ್ ಒನ್ ವಿಮಾನ ದಲ್ಲಿ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯೇ ಖುದ್ದಾಗಿ ವಿಮಾನ ನಿಲ್ದಾಣದಲ್ಲಿ ಟ್ರಂಪ್‍ರನ್ನು ಸ್ವಾಗತಿಸಲಿದ್ದಾರೆ.

22 ಕಿ.ಮೀ. ರೋಡ್ ಶೋ: ವಿಮಾನ ನಿಲ್ದಾಣ ದಿಂದ ಮೊಟೆರಾ ಕ್ರೀಡಾಂಗಣದವರೆಗೂ 22 ಕಿ.ಮೀ. ರೋಡ್ ಶೋನಲ್ಲಿ ಮೋದಿ, ಟ್ರಂಪ್ ಭಾಗಿಯಾಗಲಿದ್ದಾರೆ. ದಾರಿಯುದ್ದಕ್ಕೂ ಟ್ರಂಪ್ ಸ್ವಾಗತಕ್ಕೆ ಸುಮಾರು 50 ಸಾವಿರದಿಂದ 1 ಲಕ್ಷ ಜನ ನೆರೆದಿರುವ ಸಾಧ್ಯತೆ ಇದೆ.

ನಮಸ್ತೆ ಟ್ರಂಪ್: ರೋಡ್ ಶೋ ನಂತರ ಮೊಟೆರಾ ಕ್ರೀಡಾಂಗಣವನ್ನು ಟ್ರಂಪ್ ಉದ್ಘಾಟಿಸಲಿದ್ದಾರೆ. ನಂತರ, ಅಲ್ಲಿಯೇ ಆಯೋಜಿಸಿರುವ `ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ 1 ಲಕ್ಷ ಜನ ಸೇರುವ ನಿರೀಕ್ಷೆಯಿದೆ.

ಸಬರಮತಿ ಆಶ್ರಮ: ನಮಸ್ತೆ ಟ್ರಂಪ್ ಕಾರ್ಯಕ್ರಮದ ನಂತರ ಸಬರಮತಿ ಆಶ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಭೇಟಿ ನೀಡಲಿದ್ದಾರೆ. ಇಲ್ಲಿ ಟ್ರಂಪ್‍ಗೆ ಚರಕ ಮತ್ತು ಗಾಂಧೀಜಿಯವರ ಆತ್ಮಚರಿತ್ರೆ, ನನ್ನ ಜೀವನ, ನನ್ನ ಸಂದೇಶ ಪುಸ್ತಕಗಳು ಹಾಗೂ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಎನ್ನಲಾಗಿದೆ. ಆಶ್ರಮದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಟ್ರಂಪ್ ಕಾಲ ಕಳೆಯಲಿದ್ದಾರೆ.

ತಾಜ್‍ಮಹಲ್ ಭೇಟಿ: ಸಬರಮತಿ ಆಶ್ರಮದಿಂದ ನಂತರ ಟ್ರಂಪ್ ಮತ್ತು ಮಿಲಾನಿಯಾ ಟ್ರಂಪ್ ಆಗ್ರಾಗೆ ಭೇಟಿ ನೀಡಲಿದ್ದಾರೆ. ತಾಜ್‍ಮಹಲ್‍ನಲ್ಲಿ ಸೂರ್ಯಾಸ್ತಕ್ಕೂ ಮುನ್ನ ಗಂಟೆಗೂ ಹೆಚ್ಚು ಕಾಲ ಸಮಯ ಕಳೆಯಲಿದ್ದು, ನಂತರ ಅಲ್ಲಿಂದ ನೇರವಾಗಿ ದೆಹಲಿಗೆ ತೆರಳಲಿದ್ದಾರೆ.

ರಾಷ್ಟ್ರಪತಿ ಭವನ ಭೇಟಿ: ಫೆಬ್ರವರಿ 25ರಂದು ಬೆಳಗ್ಗೆ ರಾಷ್ಟ್ರಪತಿ ಭವನದ ಆವರಣದಲ್ಲಿ ಏರ್ಪಡಿಸಿರುವ ಅದ್ಧೂರಿ ಸ್ವಾಗತ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಿಲಾನಿಯಾ ಟ್ರಂಪ್ ಭಾಗಿಯಾಗಲಿದ್ದಾರೆ.

ಮಹಾತ್ಮನಿಗೆ ನಮನ: ನಂತರ, ರಾಜ್‍ಘಾಟ್‍ಗೆ ಭೇಟಿ ನೀಡಲಿರುವ ಟ್ರಂಪ್ ಹಾಗೂ ಮೋದಿ, ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. 2015ರಲ್ಲಿ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ರಾಜ್‍ಘಾಟ್‍ಗೆ ಭೇಟಿ ನೀಡಿ ನಮನ ಸಲ್ಲಿಸಿದ್ದರು.

ವಿವಿಧ ಸಭೆಗಳಲ್ಲಿ ಭಾಗಿ: ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಮೋದಿ ಮತ್ತು ಟ್ರಂಪ್ ನಡುವೆ ಹಲವು ಯೋಜನೆಗಳ ಬಗ್ಗೆ ಹೈದ್ರಾಬಾದ್ ಹೌಸ್‍ನಲ್ಲಿ ಮಾತುಕತೆ ನಡೆಯಲಿದ್ದು, ಹಲವು ನಿಯೋಗಗಳು ಭಾಗಿಯಾಗಲಿವೆ. ಇಲ್ಲಿಯೇ ಟ್ರಂಪ್‍ಗೆ ಮಧ್ಯಾಹ್ನದ ಭೋಜನವನ್ನು ಮೋದಿ ಆಯೋಜಿಸಿದ್ದಾರೆ.

ಅಮೆರಿಕ ರಾಯಭಾರಿ ಕಚೇರಿಗೆ ಭೇಟಿ: ದೆಹಲಿಯಲ್ಲಿನ ಅಮೆರಿಕ ರಾಯಭಾರಿ ಕಚೇರಿಗೆ ಭೇಟಿ ನೀಡಲಿರುವ ಡೊನಾಲ್ಡ್ ಟ್ರಂಪ್, ಅಮೆರಿಕ ಸಿಇಒಗಳ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ಔತಣಕೂಟ: ಸಂಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‍ರನ್ನು ಟ್ರಂಪ್ ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಲಿದ್ದಾರೆ. ರಾಷ್ಟ್ರಪತಿಗಳು ಟ್ರಂಪ್‍ಗೆ ಅದ್ಧೂರಿ ಔತಣಕೂಟವನ್ನು ಏರ್ಪಡಿಸಿದ್ದಾರೆ. ನಂತರ ರಾತ್ರಿ 10 ಗಂಟೆಗೆ ದೆಹಲಿಯಿಂದ ಅಮೆರಿಕಗೆ ಟ್ರಂಪ್ ತಮ್ಮ ಏರ್ ಪೆÇೀರ್ಸ್ ಒನ್ ವಿಮಾನದಲ್ಲಿ ತೆರಳಲಿದ್ದಾರೆ.

Translate »