ಮೈಸೂರಲ್ಲಿ ಚಂಡೆ-ಮದ್ದಳೆಯ ಸದ್ದು; ದ.ಕ.ವೈದ್ಯರ ಸಾಂಸ್ಕøತಿಕ ಸಂಘದ ಪ್ರಯತ್ನಕ್ಕೆ ಗಣ್ಯರ ಶ್ಲಾಘನೆ
ಮೈಸೂರು,ಫೆ.23(ಎಂಕೆ)- ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ದಕ್ಷಿಣ ಕನ್ನಡ ವೈದ್ಯರ ಸಾಂಸ್ಕø ತಿಕ ಸಂಘ ಆಯೋಜಿಸಿದ್ದ ‘ಬಬ್ರುವಾಹನ ಕಾಳಗ’ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು. ಆಕರ್ಷಕ ಅಲಂಕಾರ ದೊಂದಿಗೆ ಕರಾವಳಿ ಯಕ್ಷಗಾನ ಕೇಂದ್ರದ ಕಲಾವಿದರು ಅಮೋಘ ಅಭಿನಯದ ಮೂಲಕ ರಂಜಿಸಿದರು. ಬಬ್ರುವಾಹನ ಪಾತ್ರದಲ್ಲಿ ಸತೀಶ್ ಆಳ್ವ, ದೂತನಾಗಿ ಗಣೇಶ ಪೂಜಾರಿ, ಮಂತ್ರಿ ಮತ್ತು ಹಂಸಧ್ವಜನಾಗಿ ಶ್ರೀನಿವಾಸ ರಾವ್, ಕಟಕಿಯಾಗಿ ಭಾರ್ಗವಿ, ಚಿತ್ರಾಂಗದೆ ಪಾತ್ರದಲ್ಲಿ ಅಲಕಾ ಕಟ್ಟೆಮನೆ, ಅರ್ಜುನನಾಗಿ ಸುದೀಪ್ ಕುಲಾಲ್, ಪ್ರದ್ಯುಮ್ನನಾಗಿ ಅಕ್ಷಯ ಹೆಗಡೆ, ಕೃಷ್ಣನ ಪಾತ್ರದಲ್ಲಿ ರಶ್ಮಿ ಗಮನ ಸೆಳೆದರೆ, ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಹೆಬ್ಬಾರ್, ಚಂಡೆ ಅಮೃತ ದೇವ ಕಟ್ಟಿನ ಕೆರೆ, ಮದ್ದಳೆಯಲ್ಲಿ ಅನಂತ ನಾಭ ಪಾಠಕ್ ಸಹಕಾರ ನೀಡಿದರು.
ಮುಖ್ಯ ಅತಿಥಿ ಉದ್ಯಮಿ ಎಂ.ಜಗನ್ನಾಥ್ ಶೆಣೈ ಮಾತನಾಡಿ, ಭಾರತೀಯ ಸಾಂಸ್ಕøತಿಕ ಕಲೆಗಳಲ್ಲಿ ಯಕ್ಷಗಾನ ಹಿರಿಯ ಕಲೆ. ಕರಾ ವಳಿಯ ಕಲೆಯನ್ನು ಮೈಸೂರಿಗೂ ಪರಿಚ ಯಿಸುತ್ತಿರುವುದು ಶ್ಲಾಘನೀಯ. ಮೈಸೂರಿನ ಕೆಲ ಶಾಲೆಗಳಲ್ಲಿಯೂ ಯಕ್ಷಗಾನವನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ವೈದ್ಯರು ಸಮಾಜಸೇವೆಯೊಂದಿಗೆ ಸಾಂಸ್ಕøತಿಕ ಕಲೆ ಯಲ್ಲಿಯೂ ತೊಡಗಿಸಿಕೊಂಡಿರುವುದು ಪ್ರಶಂಸಾರ್ಹ. ದಕ್ಷಿಣ ಕನ್ನಡ ವೈದ್ಯರ ಸಾಂಸ್ಕøತಿಕ ಸಂಘ ಮುಂದೆಯೂ ಹೆಚ್ಚೆಚ್ಚು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದರು.
ಕಿಕ್ಕಿರಿದ ಜನ: ‘ಬಬ್ರುವಾಹನ ಕಾಳಗ’ ಯಕ್ಷಗಾನ ಪ್ರದರ್ಶನದಲ್ಲಿ ಸಭಾಂಗಣ ಕಲಾಭಿಮಾನಿಗಳಿಂದ ಕಿಕ್ಕಿರಿದಿತ್ತು. ಹಲವರು ಕುಳಿತುಕೊಳ್ಳಲು ಸ್ಥಳವಿಲ್ಲದೆ ನಿಂತುಕೊಂಡೇ ಯಕ್ಷಗಾನ ಪ್ರದರ್ಶನವನ್ನು ಕಣ್ತುಂಬಿಕೊಂಡರು.
ದಕ್ಷಿಣ ಕನ್ನಡ ವೈದ್ಯರ ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಾ.ಸಿ.ಉಮೇಶ್ ಕಾಮತ್, ಉಪಾ ಧ್ಯಕ್ಷ ಡಾ.ಚಂದ್ರಶೇಖರ್ ಭಟ್, ಡಾ.ಎಂ. ಕೆ.ಶಿವಪ್ರಕಾಶ್, ಡಾ.ಗಂಗಾಧರ ಶೆಟ್ಟಿ, ಡಾ. ಸಂಜಯ್ ಪೈ, ಡಾ.ಪ್ರಕಾಶ್ ಕೆ.ಪ್ರಭು, ಡಾ. ಯು.ಗಣೇಶ್‍ರಾವ್ ಇತರರಿದ್ದರು.