ಕೆಆರ್ ಕ್ಷೇತ್ರ ಬಿಜೆಪಿ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿದ ಶಾಸಕ ರಾಮದಾಸ್
ಮೈಸೂರು

ಕೆಆರ್ ಕ್ಷೇತ್ರ ಬಿಜೆಪಿ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿದ ಶಾಸಕ ರಾಮದಾಸ್

February 24, 2020

ಮೈಸೂರು, ಫೆ.23(ಆರ್‍ಕೆಬಿ)- ಬಿಜೆ ಪಿಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೂರ್ ಫಾತಿಮಾ ಮತ್ತು ಎಂ.ಆರ್. ಬಾಲಕೃಷ್ಣ ನೇಮಕಗೊಂಡಿದ್ದಾರೆ.

ಕ್ಷೇತ್ರದ ನೂತನ ಉಪಾಧ್ಯಕ್ಷರಾಗಿ ಜೆ. ನಾಗೇಂದ್ರಕುಮಾರ್, ವಿನಯ್ ಪಾಂಚ ಜನ್ಯ, ಸಂತೋಷ್ (ಶಂಭು), ಎಂ.ವಿ. ರೇಖಾ, ಜೆ.ರವಿ, ಓಂಶ್ರೀನಿವಾಸ್, ಕಾರ್ಯ ದರ್ಶಿಗಳಾಗಿ ಪ್ರಸಾದ್‍ಬಾಬು, ರವಿಶಂಕರ್, ಸೀಮಾ ಪ್ರಸಾದ್, ಪಿ.ಟಿ.ಕೃಷ್ಣ, ಗಿರೀಶ್ ಗೌಡ, ನಾಗರತ್ನ, ಕೋಶಾಧ್ಯಕ್ಷರಾಗಿ ರೇವತಿ ವಾಸುದೇವ್ ನೇಮಕಗೊಂಡಿದ್ದು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ ವಡಿವೇಲು ಅಧ್ಯಕ್ಷತೆ ಯಲ್ಲಿ ಶನಿವಾರ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳಿಗೆ ಶಾಸಕ ಎಸ್.ಎ.ರಾಮ ದಾಸ್ ನೇಮಕಾತಿ ಪತ್ರ ವಿತರಿಸಿದರು.

ನಂತರ ಮಾತನಾಡಿದ ಶಾಸಕರು, ಪಕ್ಷದ ಬೆಳವಣಿಗೆ ದೃಷ್ಟಿಯಿಂದ ನಾವೆಲ್ಲರೂ ಒಂದೆ. ಹುದ್ದೆಗಳು ಮಾತ್ರ ಬೇರೆ ಇವೆ. ಕೆಆರ್ ಕ್ಷೇತ್ರ ದಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸು ವುದು ನಮ್ಮ ಗುರಿ ಎಂದರು. ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜು ನಾಥ್, ವಿದ್ಯಾ ಅರಸ್ ಮತ್ತಿತರಿದ್ದರು.

Translate »