ಮೈಸೂರು, ಫೆ.22(ಆರ್‍ಕೆ)- ಮೈಸೂರಿನ ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅಗತ್ಯ ವಿರುವ ಜಾಗ ಬಿಟ್ಟುಕೊಡಲು ಪ್ರಸಾದ್ ನರ್ಸಿಂಗ್ ಹೋಂ ಮತ್ತು ಚಿತ್ರಾಸ್ ಆಸ್ಪತ್ರೆ ಮಖ್ಯ ಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ನ್ಯಾಯಾಲಯದಲ್ಲಿ ಹೂಡಿದ್ದ ದಾವೆ ವಾಪಸ್ ಪಡೆದಿರುವ ಆಸ್ಪತ್ರೆ ಮುಖ್ಯಸ್ಥರಾದ ಡಾ.ಮಹೇಶ ಕುಮಾರ್ ಹಾಗೂ ಡಾ.ಚಿತ್ರಾ ಅವರು ಇಂದು ಜಾಗ ಬಿಟ್ಟು ಕೊಡಲು ಮಾಡಿಕೊಂಡ ಸಮ್ಮತಿ ಪತ್ರವನ್ನು ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತ ಗೀತಾ ಉಡೇದಾ ಹಾಗೂ ಅಭಿವೃದ್ಧಿ ಅಧಿಕಾರಿ ಹೆಚ್.ನಾಗರಾಜ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ‘ಮೈಸೂರು…
ಫೆ.25ರಂದು ಸಂತ ಸೇವಾಲಾಲ್ ಜಯಂತಿ
February 23, 2020ಮೈಸೂರು, ಫೆ.22(ಆರ್‍ಕೆಬಿ)- ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಂಜಾರ (ಲಂಬಾಣಿ) ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಫೆ.25ರ ಸಂಜೆ 4ಕ್ಕೆ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಬಂಜಾರ (ಲಂಬಾಣಿ) ಜನಾಂಗದ ಕುಲಗುರು ಸೇವಾಲಾಲ್ ಅವರ 281ನೇ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಮೇಯರ್ ತಸ್ನೀಂ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಸಂಸದರಾದ ವಿ.ಶ್ರೀನಿವಾಸಪ್ರಸಾದ್,…
ಇಂದು `ಬಾವ ಬಟ್ಟೆಲ್’ ಕೊಡವ ಕಿರುಚಿತ್ರ 2ನೇ ದಿನ ಪ್ರದರ್ಶನ
February 23, 2020ಮೈಸೂರು,ಫೆ.22(ವೈಡಿಎಸ್)-ವಿಜಯ ನಗರ 1ನೇ ಹಂತದಲ್ಲಿರುವ ಕೊಡವ ಸಮಾಜ ದಲ್ಲಿ `ಕೊಡಗ್‍ರ ಸಿಪಾಯಿ’ ಚಿತ್ರದ ನಾಯಕಿ ತೇಜಸ್ವಿನಿ ಶರ್ಮ ಅಭಿನಯದ ಕೊಡವ ಭಾಷೆಯ `ಬಾವ ಬಟ್ಟೆಲ್’ ಕಿರುಚಿತ್ರ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪಿ ಅಂಡ್ ಜಿ ಕ್ರಿಯೇ ಷನ್ಸ್‍ನವರ ಮಂಡುವಂಡ ಪ್ರಜ್ವಲ್ ಗಣಪತಿ ನಿರ್ದೇಶನದಲ್ಲಿ ಕೊಡವ ಭಾಷೆಯಲ್ಲಿ ಮೂಡಿ ಬಂದಿರುವ ಕಿರುಚಿತ್ರ `ಬಾವ ಬಟ್ಟೆಲ್’ ಶನಿವಾರ 5 ಪ್ರದರ್ಶನಗೊಂಡು ಜನರಿಂದ ಮೆಚ್ಚುಗೆ ಗಳಿಸಿತು. ಚಿತ್ರತಂಡ: ನಿರ್ದೇಶಕರಾಗಿ ಮಂಡುವಂಡ ಪ್ರಜ್ವಲ್ ಗಣಪತಿ ನಟನೆಯನ್ನೂ ಮಾಡಿದ್ದಾರೆ. ಉದ್ಯಮಿ ಮಣ ವಟ್ಟರ…
ಬಹುರೂಪಿಗೆ ಬಹುಪರಾಕ್
February 20, 2020ಮೈಸೂರು,ಫೆ.19(ಎಂಕೆ)- ಬಹು ವರ್ಣೀಯ ‘ಬಹುರೂಪಿ’ ಅದ್ಭುತ… ಸೊಗಸಾದ ವ್ಯವಸ್ಥೆ, ಸಮರ್ಪಕ ನಿರ್ವ ಹಣೆ… ಕಳೆದ ವರ್ಷಕ್ಕಿಂತ ಈ ಬಾರಿಯ ಬಹುರೂಪಿ ಬಲು ಆಕರ್ಷಕ… ಮುಂದಿನ ವರ್ಷವೂ ಬರುತ್ತೇವೆ… ಮೈಸೂರಿನ ರಂಗಾಯಣದಲ್ಲಿ ಆಯೋ ಜಿಸಿದ್ದ 6 ದಿನಗಳ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಭೇಟಿ ನೀಡಿದ ರಂಗಾ ಸಕ್ತರು, ಕಲಾವಿದರು ಮತ್ತು ಮಳಿಗೆ ದಾರರ ಹರ್ಷಭರಿತ ಮಾತುಗಳಿವು. ಗಾಂಧಿ ಪಥ ಶೀರ್ಷಿಕೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರಸಿದ್ಧ ನಾಟಕಗಳ ಪ್ರದರ್ಶನ, ಚಲನ ಚಿತ್ರೋ ತ್ಸವ, ಜನಪದೋತ್ಸವ ಮತ್ತಿತರೆ ಸಾಂಸ್ಕøತಿಕ ಕಾರ್ಯಕ್ರಮಗಳು…
ಕಿಂದರಿಜೋಗಿಯಲ್ಲಿ ಮಲ್ಲಕಂಬ, ಹಗ್ಗದ ಮೇಲೆ ಆಸನಗಳ ಪ್ರದರ್ಶನಕ್ಕೆ ಜನಮೆಚ್ಚುಗೆ
February 20, 2020ಮೈಸೂರು,ಫೆ.19(ವೈಡಿಎಸ್)- ಕಿಂದರ ಜೋಗಿಯು ಮಹಿಳೆಯರು ಶಕ್ತಿ ಪ್ರದರ್ಶಿ ಸುವ ವೇದಿಕೆಯಾಗಿತ್ತು. ಮಹಿಳಾ ಕಲಾವಿ ದರ ಡೊಳ್ಳು ಕುಣಿತ, ಹೆಣ್ಣು ಮಕ್ಕಳ ಸಾಹಸಮಯ ಹಗ್ಗದ ಮಲ್ಲಕಂಬ, ಯುವ ಕರ ಮಲ್ಲಕಂಬ ಪ್ರದರ್ಶನಗಳು ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದವು. `ಗಾಂಧಿ ಪಥ’ ಶೀರ್ಷಿಕೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಕೊನೆಯ ದಿನವಾದ ಬುಧವಾರ, ಧಾರವಾಡದ ಕುಂದ ಗೋಳದ ಎಸ್.ಜೆ.ಹೂಗಾರ ನೇತೃತ್ವದ 18 ಯುವಕರು, ಐವರು ಯುವತಿಯರ ತಂಡ ಮಲ್ಲಕಂಬ ಮತ್ತು ಹಗ್ಗದಲ್ಲಿ 60ಕ್ಕೂ ಹೆಚ್ಚು ಆಸನಗಳನ್ನು ಪ್ರದರ್ಶಿಸಿದರು. ಮೊದಲಿಗೆ 7, 8 ಮತ್ತು…
ರಂಗಭೂಮಿಯೇ ನನ್ನ ಅಜೆಂಡಾ: ಅಡ್ಡಂಡ ಕಾರ್ಯಪ್ಪ
February 20, 2020ಮೈಸೂರು,ಫೆ.19(ವೈಡಿಎಸ್)-ರಂಗಾಯಣದಲ್ಲಿ ಬಿಜೆಪಿ ಅಥವಾ ಇನ್ಯಾವುದೋ ಸಂಘದ ಬಾವುಟ ಹಾರಿಸಲು ಸರ್ಕಾರ ನನ್ನನ್ನು ಕಳಿಸಿಲ್ಲ. ರಂಗಭೂಮಿ ಕಟ್ಟಲು ಬಂದಿದ್ದೇನೆ. ರಂಗಭೂಮಿಯೇ ನನ್ನ ಅಜೆಂಡಾ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು. 40 ವರ್ಷ ರಂಗಭೂಮಿ ಕ್ಷೇತ್ರದಲ್ಲಿನ ನನ್ನ ಅನುಭವ ಅರಿತು ಸರ್ಕಾರ ಈ ಹುದ್ದೆಗೆ ಆಯ್ಕೆ ಮಾಡಿದೆ ಎಂದರು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಕಡೆಯ ದಿನವಾದ ಬುಧವಾರ ಸಂಜೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೈಸೂರಿನ ಜನರ ಹೃದಯ ಗೆಲ್ಲುವ ವಿಶ್ವಾಸದಿಂದ ಬಂದಿದ್ದೇನೆ. ಬಂದಿರುವುದೇ ರಂಗಭೂಮಿ ಕಟ್ಟಲು. ಜನರಿಗೆ…
`ಪೊಲೀಸ್ ಕರ್ತವ್ಯಕೂಟ’ ವೃತ್ತಿ ನೈಪುಣ್ಯ ಗಳಿಸಲು ಸಹಕಾರಿ: ಡಾ.ಚಂದ್ರಗುಪ್ತ
February 20, 2020ಮೈಸೂರು, ಫೆ.19 (ಎಂಟಿವೈ)-ವೃತ್ತಿ ನೈಪುಣ್ಯ ದೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿಕೊಳ್ಳಲು ಸಹಕಾರಿಯಾಗುವ ಕೌಶಲ ವನ್ನು ಪಡೆದುಕೊಳ್ಳುವ ಸಲುವಾಗಿ ಪೊಲೀಸ್ ಸಿಬ್ಬಂದಿಗಳು `ಪೊಲೀಸ್ ಕರ್ತವ್ಯ ಕೂಟ’ದಲ್ಲಿ ತಪ್ಪದೇ ಪಾಲ್ಗೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಉತ್ತೇಜಿಸಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ 2 ದಿನ ಗಳ `ದಕ್ಷಿಣ ವಲಯ ಪೊಲೀಸ್ ಕರ್ತವ್ಯ ಕೂಟ-2019’ ಉದ್ಘಾಟಿಸಿ ಮಾತನಾಡಿದ ಅವರು, ಬಹುಮಾನ ಪಡೆಯ ಲಷ್ಟೇ ಕರ್ತವ್ಯಕೂಟದಲ್ಲಿ ಪಾಲ್ಗೊಳ್ಳುವ ಮನಸ್ಥಿತಿಯಿಂದ ಹೊರಬನ್ನಿ. ನಿಮ್ಮಲ್ಲಿರುವ ಪ್ರತಿಭೆ, ವೃತ್ತಿನೈಪುಣ್ಯ, ತನಿಖೆ ವೈಖರಿ, ಅಪರಾಧ…
ಮೈಸೂರು-ಮಡಿಕೇರಿ ಹೊಸ ಹೆದ್ದಾರಿ ಯೋಜನೆ ಕೈಬಿಟ್ಟು ಮೊದಲು ರೈತರ ಬೇಡಿಕೆ ಈಡೇರಿಸಿ: ರೈತ ಸಂಘ ಆಗ್ರಹ
February 20, 2020ಮೈಸೂರು,ಫೆ.19(ಎಂಟಿವೈ)- ಮೈಸೂರು-ಮಡಿಕೇರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275 ಅನ್ನು ಹೊಸದಾಗಿ ನಿರ್ಮಾಣ ಮಾಡುವ ಪ್ರಸ್ತಾಪ ಕೈಬಿಟ್ಟು, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಬಳಿ ಬುಧÀವಾರ ಪ್ರತಿಭಟನೆ ನಡೆಸಿದರು. ಮೈಸೂರು-ಬಂಟ್ವಾಳ ಮಾರ್ಗದ ಹೆದ್ದಾರಿ ಸುಸ್ಥಿತಿ ಯಲ್ಲಿದ್ದರೂ ರಾಷ್ಟ್ರೀಯ ಹೆದ್ದಾರಿ 275ರ ಹೆಸರಿನಲ್ಲಿ ಹೊಸರಸ್ತೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಸರ್ವೆ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಪಾರದರ್ಶಕವಾಗಿ ಮಾಡದೆ…
ಶ್ರೀರಾಮ ಮಂದಿರ ನಿರ್ಮಾಣ ಆರಂಭ ದಿನಾಂಕ ಎರಡು ವಾರದಲ್ಲಿ ಘೋಷಣೆ
February 20, 2020ನವದೆಹಲಿ,ಫೆ.19- ದೆಹಲಿಯ ಗ್ರೇಟರ್ ಕೈಲಾಶ್‍ನಲ್ಲಿ ಶ್ರೀರಾಮ ಮಂದಿರ ಟ್ರಸ್ಟ್‍ನ ಮೊದಲ ಸಭೆ ಬುಧವಾರ 2 ಗಂಟೆ ಕಾಲ ನಡೆದಿದ್ದು, ಮಂದಿರ ನಿರ್ಮಾಣ ಆರಂ ಭದ ದಿನಾಂಕವನ್ನು ಮಂದಿನ 15 ದಿನ ಗಳಲ್ಲಿ ಘೋಷಿಸುವುದಕ್ಕೆ ಸಭೆ ಸಮ್ಮತಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರದಿಂದ ಟ್ರಸ್ಟ್‍ನ ಮುಖ್ಯಸ್ಥ ರಾಗಿ ನೇಮಕಗೊಂಡ ಹಿರಿಯ ವಕೀಲ ಕೆ.ಪರಾಷÀರನ್ ಅವರ ನೇತೃತ್ವದಲ್ಲಿ, ಅವ ರದೇ ನಿವಾಸದಲ್ಲಿ ಸಭೆ ನಡೆದಿದೆ. ಟ್ರಸ್ಟ್ ಅಧ್ಯಕ್ಷರಾಗಿ ಮಹಂತ್ ನೃತ್ಯ ಗೋಪಾಲ್ ದಾಸ್, ಮಹಾ ಕಾರ್ಯದರ್ಶಿಯಾಗಿ ಛಂಪತ್…
ಪೇಂಟಿಂಗ್ ಮಾಡಿಸಲು ನಿಲ್ಲಿಸಿದ್ದ ಮಿನಿಬಸ್‍ಗೆ ಬೆಂಕಿ
February 20, 2020ಮೈಸೂರು,ಫೆ.19(ಎಸ್‍ಪಿಎನ್)-ಪೇಂಟಿಂಗ್‍ಗೆ ನಿಲ್ಲಿಸಿದ್ದ ಮಿನಿಬಸ್‍ಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿಯಾಗಿರುವ ಘಟನೆ ಮೈಸೂರಿನ ನಾಚೇನಹಳ್ಳಿ ಪಾಳ್ಯದಲ್ಲಿ ಮಂಗಳವಾರ ತಡರಾತ್ರಿ ಸಂಭ ವಿಸಿದೆ. ಮೈಸೂರು ನಾಚೇನಹಳ್ಳಿ ಪಾಳ್ಯದ ಜೆ.ಪಿ.ನಗರ-ಗೊರೂರು ರಸ್ತೆ ಮಾರ್ಗದಲ್ಲಿ ಹುಸೇನ್ ಎಂಬುವರು ಮಿನಿಬಸ್‍ಗೆ ಪೇಂಟಿಂಗ್ ಮಾಡಲು ಬೇರೊಬ್ಬ ರಿಂದ ಸಬ್‍ಲೀಸ್ ಪಡೆದು ಪೇಂಟಿಂಗ್ ಮಾಡಲು ರಸ್ತೆ ಬದಿ ನಿಲ್ಲಿಸಿದ್ದರು. ಅರೆಬರೆ ಪೇಂಟಿಂಗ್ ಮಾಡಿದ್ದ ಬಸ್‍ಗೆ ಅಕಸ್ಮಾತ್ ಬೆಂಕಿ ತಗುಲಿದ ಬಗ್ಗೆ ಸರಸ್ವತಿಪುರಂ ಅಗ್ನಿಶಾಮಕ ದಳದ ಕಂಟ್ರೋಲ್ ರೂಂಗೆ ಸಾರ್ವಜನಿಕರೊಬ್ಬರು ತಡರಾತ್ರಿ 1.15ಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು….










