ಮೈಸೂರು,ಫೆ.22(ವೈಡಿಎಸ್)-ವಿಜಯ ನಗರ 1ನೇ ಹಂತದಲ್ಲಿರುವ ಕೊಡವ ಸಮಾಜ ದಲ್ಲಿ `ಕೊಡಗ್‍ರ ಸಿಪಾಯಿ’ ಚಿತ್ರದ ನಾಯಕಿ ತೇಜಸ್ವಿನಿ ಶರ್ಮ ಅಭಿನಯದ ಕೊಡವ ಭಾಷೆಯ `ಬಾವ ಬಟ್ಟೆಲ್’ ಕಿರುಚಿತ್ರ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪಿ ಅಂಡ್ ಜಿ ಕ್ರಿಯೇ ಷನ್ಸ್‍ನವರ ಮಂಡುವಂಡ ಪ್ರಜ್ವಲ್ ಗಣಪತಿ ನಿರ್ದೇಶನದಲ್ಲಿ ಕೊಡವ ಭಾಷೆಯಲ್ಲಿ ಮೂಡಿ ಬಂದಿರುವ ಕಿರುಚಿತ್ರ `ಬಾವ ಬಟ್ಟೆಲ್’ ಶನಿವಾರ 5 ಪ್ರದರ್ಶನಗೊಂಡು ಜನರಿಂದ ಮೆಚ್ಚುಗೆ ಗಳಿಸಿತು.
ಚಿತ್ರತಂಡ: ನಿರ್ದೇಶಕರಾಗಿ ಮಂಡುವಂಡ ಪ್ರಜ್ವಲ್ ಗಣಪತಿ ನಟನೆಯನ್ನೂ ಮಾಡಿದ್ದಾರೆ. ಉದ್ಯಮಿ ಮಣ ವಟ್ಟರ ಸಂಗೀತ್ ಈರಪ್ಪ ನಿರ್ಮಾ ಪಕರಾಗಿದ್ದರೆ, ಬಾಳೆಯಡ ಪ್ರತೀಶ್ ಪೂವಯ್ಯ, ಆಚೆಯಡ ಗಗನ್ ಗಣಪತಿ, ಮಾದಪಂಡ ಅಯ್ಯಣ್ಣ ಧರಣಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚೆರುವಾಳಂಡ ಸುಜಲ ನಾಣಯ್ಯ, ಪಟ್ಟಡ ಧನುರಂಜನ್, ಮಲ್ಲಮಾಡ ಶ್ಯಾಮಲ ಸುನೀಲ್, ಬಿದ್ದಂಡ ಉತ್ತಮ್ ಪೊನ್ನಪ್ಪ, ಬೇಬಿ ಯಾಶಿಕ, ನೆಲ್ಲಚಂಡ ಹೇಮಾ, ರೇಖಾ ಅಭಿನಯಿಸಿದ್ದಾರೆ.
ಪ್ರದರ್ಶನ: ನಾಳೆ(ಫೆ.23) ಬೆಳಿಗ್ಗೆ 11ಕ್ಕೆ, ಮಧ್ಯಾಹ್ನ 12.30ಕ್ಕೆ, 2 ಗಂಟೆಗೆ, 3.30ಕ್ಕೆ, ಸಂಜೆ 5ಕ್ಕೆ, 6.30ಕ್ಕೆ ಮತ್ತು ರಾತ್ರಿ 8 ಗಂಟೆಗೆ 34 ನಿಮಿಷಗಳ ಕಿರುಚಿತ್ರದ ಪ್ರದರ್ಶನವಿದೆ.