ಫೆ.25ರಂದು ಸಂತ ಸೇವಾಲಾಲ್ ಜಯಂತಿ
ಮೈಸೂರು

ಫೆ.25ರಂದು ಸಂತ ಸೇವಾಲಾಲ್ ಜಯಂತಿ

February 23, 2020

ಮೈಸೂರು, ಫೆ.22(ಆರ್‍ಕೆಬಿ)- ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಂಜಾರ (ಲಂಬಾಣಿ) ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಫೆ.25ರ ಸಂಜೆ 4ಕ್ಕೆ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಬಂಜಾರ (ಲಂಬಾಣಿ) ಜನಾಂಗದ ಕುಲಗುರು ಸೇವಾಲಾಲ್ ಅವರ 281ನೇ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಮೇಯರ್ ತಸ್ನೀಂ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಸಂಸದರಾದ ವಿ.ಶ್ರೀನಿವಾಸಪ್ರಸಾದ್, ಸುಮಲತಾ ಅಂಬರೀಶ್, ಪ್ರತಾಪಸಿಂಹ ಮತ್ತಿತರರು ಅತಿಥಿಗಳಾಗಿರುವರು ಎಂದರು.

ಬಂಜಾರ ಜನಾಂಗವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನೆಲೆಗೊಂಡಿದೆ. ಬಹುಪಾಲು ಲಂಬಾಣಿ ಜನಾಂಗದವರು ವಾಸಿಸುತ್ತಿರುವ ಪ್ರದೇಶಗಳು ಇಂದಿಗೂ ಕಂದಾಯ ಗ್ರಾಮಗಳಾಗದೆ ನಾಗರಿಕ ಸೌಲಭ್ಯ ವಂಚಿತವಾಗಿವೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿವೆ. ಸರ್ಕಾರ ಹೆಚ್ಚಿನ ಸೌಲಭ್ಯ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಮುಖಂಡ ಬಸವರಾಜ ನಾಯಕ್ ಮನವಿ ಮಾಡಿದರು. ಸಂಘದ ಪದಾಧಿಕಾರಿಗಳಾದ ರಮೇಶ್ ನಾಯಕ್, ಪುರ ನಾಯಕ್, ಸಂದೀಪ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »