ಇರ್ವಿನ್ ರಸ್ತೆ ಅಗಲೀಕರಣಕ್ಕಿದ್ದ ತೊಡಕು ದೂರ
ಮೈಸೂರು

ಇರ್ವಿನ್ ರಸ್ತೆ ಅಗಲೀಕರಣಕ್ಕಿದ್ದ ತೊಡಕು ದೂರ

February 23, 2020

ಮೈಸೂರು, ಫೆ.22(ಆರ್‍ಕೆ)- ಮೈಸೂರಿನ ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅಗತ್ಯ ವಿರುವ ಜಾಗ ಬಿಟ್ಟುಕೊಡಲು ಪ್ರಸಾದ್ ನರ್ಸಿಂಗ್ ಹೋಂ ಮತ್ತು ಚಿತ್ರಾಸ್ ಆಸ್ಪತ್ರೆ ಮಖ್ಯ ಸ್ಥರು ಒಪ್ಪಿಗೆ ಸೂಚಿಸಿದ್ದಾರೆ.

ನ್ಯಾಯಾಲಯದಲ್ಲಿ ಹೂಡಿದ್ದ ದಾವೆ ವಾಪಸ್ ಪಡೆದಿರುವ ಆಸ್ಪತ್ರೆ ಮುಖ್ಯಸ್ಥರಾದ ಡಾ.ಮಹೇಶ ಕುಮಾರ್ ಹಾಗೂ ಡಾ.ಚಿತ್ರಾ ಅವರು ಇಂದು ಜಾಗ ಬಿಟ್ಟು ಕೊಡಲು ಮಾಡಿಕೊಂಡ ಸಮ್ಮತಿ ಪತ್ರವನ್ನು ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತ ಗೀತಾ ಉಡೇದಾ ಹಾಗೂ ಅಭಿವೃದ್ಧಿ ಅಧಿಕಾರಿ ಹೆಚ್.ನಾಗರಾಜ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಡಾ.ಮಹೇಶಕುಮಾರ್ ಸಾರ್ವ ಜನಿಕರ ಹಿತದೃಷ್ಟಿಯಿಂದ ಮೈಸೂರು ಮಹಾನಗರ ಪಾಲಿಕೆಯು ಇರ್ವಿನ್ ರಸ್ತೆ ಅಗಲೀ ಕರಣ ಮಾಡುತ್ತಿರುವುದರಿಂದ ನಮ್ಮ ಆಸ್ಪತ್ರೆ ಕಟ್ಟಡದ ಸ್ವಲ್ಪ ಜಾಗವನ್ನು ಕೇಳಿದ್ದರು. ನಮ್ಮ ಟ್ರಸ್ಟ್‍ನ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲು ತಡವಾಗಿತ್ತು. ಈಗ ಜಾಗ ಬಿಟ್ಟು ಕೊಡಲು ಒಪ್ಪಿ ಸಮ್ಮತಿ ಪತ್ರವನ್ನು ನೀಡಿದ್ದೇವೆ ಎಂದರು.

ಪರಿಹಾರದ ಹಣವನ್ನು ಜಮೆ ಮಾಡಿ ಕಟ್ಟಡದ ಭಾಗವನ್ನು ಕೆಡವಿ ರಸ್ತೆ ಅಗಲೀ ಕರಣಕ್ಕೆ ಬಳಸಿಕೊಳ್ಳಬಹುದು ಎಂದೂ ಡಾ.ಮಹೇಶಕುಮಾರ್ ತಿಳಿಸಿದರು. ಈ ಎರಡೂ ಆಸ್ಪತ್ರೆ ಸೇರಿದಂತೆ ಮೂರು ಕಟ್ಟಡಗಳ ಭಾಗ ನೆಲಸಮಕ್ಕೆ ಮಾಲೀಕರು ಸಮ್ಮತಿ ಸದೇ ಇದ್ದ ಕಾರಣ ಯೋಜನೆ ವಿಳಂಬವಾಗಿತ್ತು. ಇದೀಗ ಎರಡೂ ಕಟ್ಟಡಗಳ ತೊಡಕು ನಿವಾರಣೆಯಾದಂತಾಗಿದ್ದು, ಬಾಕಿ ಇರುವ ವಕ್ಫ್ ಮಂಡಳಿಗೆ ಸೇರಿದ ಕಟ್ಟಡದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಅದು ಫಲಪ್ರದÀವಾದಲ್ಲಿ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಅತೀ ಶೀಘ್ರ ಆರಂಭಿಸಲಾಗು ವುದು ಎಂದು ಪಾಲಿಕೆ ವಲಯಾಧಿಕಾರಿ ಗೀತಾ ಉಡೇದಾ ತಿಳಿಸಿದರು. ಆಸ್ಪತ್ರೆಯ ರವಿಕಾಂತರಾವ್, ಪಾಲಿಕೆ ಹೆಲ್ತ್ ಇನ್‍ಸ್ಪೆಕ್ಟರ್ ಶಾಂತರಾಜ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Translate »