ಶ್ರೀರಾಮ ಮಂದಿರ ನಿರ್ಮಾಣ ಆರಂಭ ದಿನಾಂಕ ಎರಡು ವಾರದಲ್ಲಿ ಘೋಷಣೆ
ಮೈಸೂರು

ಶ್ರೀರಾಮ ಮಂದಿರ ನಿರ್ಮಾಣ ಆರಂಭ ದಿನಾಂಕ ಎರಡು ವಾರದಲ್ಲಿ ಘೋಷಣೆ

February 20, 2020

ನವದೆಹಲಿ,ಫೆ.19- ದೆಹಲಿಯ ಗ್ರೇಟರ್ ಕೈಲಾಶ್‍ನಲ್ಲಿ ಶ್ರೀರಾಮ ಮಂದಿರ ಟ್ರಸ್ಟ್‍ನ ಮೊದಲ ಸಭೆ ಬುಧವಾರ 2 ಗಂಟೆ ಕಾಲ ನಡೆದಿದ್ದು, ಮಂದಿರ ನಿರ್ಮಾಣ ಆರಂ ಭದ ದಿನಾಂಕವನ್ನು ಮಂದಿನ 15 ದಿನ ಗಳಲ್ಲಿ ಘೋಷಿಸುವುದಕ್ಕೆ ಸಭೆ ಸಮ್ಮತಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರದಿಂದ ಟ್ರಸ್ಟ್‍ನ ಮುಖ್ಯಸ್ಥ ರಾಗಿ ನೇಮಕಗೊಂಡ ಹಿರಿಯ ವಕೀಲ ಕೆ.ಪರಾಷÀರನ್ ಅವರ ನೇತೃತ್ವದಲ್ಲಿ, ಅವ ರದೇ ನಿವಾಸದಲ್ಲಿ ಸಭೆ ನಡೆದಿದೆ. ಟ್ರಸ್ಟ್ ಅಧ್ಯಕ್ಷರಾಗಿ ಮಹಂತ್ ನೃತ್ಯ ಗೋಪಾಲ್ ದಾಸ್, ಮಹಾ ಕಾರ್ಯದರ್ಶಿಯಾಗಿ ಛಂಪತ್ ರೈ, ಖಜಾಂಚಿಯಾಗಿ ಗೋವಿಂದ್ ಗಿರಿ ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಮಂದಿರ ನಿರ್ಮಾಣ ಸಮಿತಿ ಯನ್ನೂ ರಚಿಸಲಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ, ಈ ಹಿಂದೆ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಅವರು ಸಮಿತಿಯ ನೇತೃತ್ವ ವಹಿ ಸಲಿದ್ದಾರೆ. 15 ದಿನಗಳ ಬಳಿಕ ಟ್ರಸ್ಟ್ ಮತ್ತೊಮ್ಮೆ ಅಯೋಧ್ಯೆಯಲ್ಲಿ ಸಭೆ ಸೇರಲಿದ್ದು, ಮಂದಿರ ನಿರ್ಮಾಣ ಆರಂ ಭದ ದಿನಾಂಕವನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಮಾತನಾಡಿದ ನ್ರಿತ್ಯ ಗೋಪಾಲ್‍ದಾಸ್, ಜನರ ಭಾವನೆಯನ್ನು ಗೌರವಿಸಲಾಗುವುದು. ಆದಷ್ಟು ಬೇಗ ಮಂದಿರ ನಿರ್ಮಾಣ ಕಾರ್ಯ ಆರಂಭಿಸ ಲಾಗುವುದು. ರಾಮ ಮಂದಿರದ ಮುಖ್ಯ ಮಾದರಿ ಹಾಗೇ ಉಳಿಯಲಿದೆ. ಅಗಲ ಮತ್ತು ಎತ್ತರವನ್ನು ಹೆಚ್ಚಿಸಲು ಪ್ರಯತ್ನಗಳು ನಡೆದಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮಾತನಾಡಿದ ಛಂಪತ್ ರೈ, ದೇಣಿಗೆ ನೀಡುವವರಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಯೋಧ್ಯೆ ಶಾಖೆಯಲ್ಲಿ ಟ್ರಸ್ಟ್‍ನ ಖಾತೆ ತೆರೆಯಲಾಗು ವುದು ಎಂದರು. ಸಭೆಯಲ್ಲಿ ಕೇಂದ್ರ ಸರ್ಕಾರ ಪ್ರತಿನಿಧಿಗಳು, ಗೃಹ ಸಚಿವಾಲ ಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಸರ್ಕಾರದ ಪ್ರತಿನಿಧಿಗಳು ಮತ್ತು ಅಯೋಧ್ಯ ಜಿಲ್ಲಾಧಿಕಾರಿ ಅನುಜ್ ಕುಮಾರ್ ಝಾ ಇದ್ದರು. ಇಂದಿನ ಪ್ರಥಮ ಸಭೆಯಲ್ಲಿ ರಾಮ ಮಂದಿರ ನಿರ್ಮಾಣ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ ಎಂದೇ ಊಹಿಸಲಾಗಿತ್ತು.

Translate »