ಮೈಸೂರು,ಫೆ.19(ಎಂಟಿವೈ)- ಮೈಸೂರು-ಮಡಿಕೇರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275 ಅನ್ನು ಹೊಸದಾಗಿ ನಿರ್ಮಾಣ ಮಾಡುವ ಪ್ರಸ್ತಾಪ ಕೈಬಿಟ್ಟು, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಬಳಿ ಬುಧÀವಾರ ಪ್ರತಿಭಟನೆ ನಡೆಸಿದರು.
ಮೈಸೂರು-ಬಂಟ್ವಾಳ ಮಾರ್ಗದ ಹೆದ್ದಾರಿ ಸುಸ್ಥಿತಿ ಯಲ್ಲಿದ್ದರೂ ರಾಷ್ಟ್ರೀಯ ಹೆದ್ದಾರಿ 275ರ ಹೆಸರಿನಲ್ಲಿ ಹೊಸರಸ್ತೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಸರ್ವೆ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಪಾರದರ್ಶಕವಾಗಿ ಮಾಡದೆ ರೈತರನ್ನು ಒಕ್ಕಲೆಬ್ಬಿಸಿ, ಸಂಕಷ್ಟಕ್ಕೆ ದೂಡುವ ಸಂಚು ನಡೆದಿದೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ರೈತ ಸಂಘದ ರಾಜ್ಯಾಧÀ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮೈಸೂರು-ಮಡಿಕೇರಿ ಸಂಪರ್ಕಿಸಲು ಸದ್ಯ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಇದೆ. ಈ ಹೆದ್ದಾರಿ ನಿರ್ಮಾಣಕ್ಕೂ ರೈತರ ಫಲವತ್ತಾದ ತೋಟಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಪ್ರಸ್ತುತ ರಸ್ತೆ ಸುಸ್ಥಿತಿಯಲ್ಲೇ ಇದೆ. ಅನಿವಾರ್ಯವಿದ್ದರೆ ಅದನ್ನೇ ಅಭಿವೃದ್ಧಿಪಡಿಸಬಹುದಾಗಿದೆ. ಮೈಸೂರು ಮಡಿ ಕೇರಿಗೆ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ಹೆಸರಿನಲ್ಲಿ ಯೋಜನೆ ತಯಾರಿಸಿ ಭೂಸ್ವಾಧೀನ ಪ್ರಕ್ರಿಯೆ ನಡೆಸು ತ್ತಿರುವುದಕ್ಕೆ ನಮ್ಮ ವಿರೋಧವಿದೆ. ಕೂಡಲೇ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು. 2019ರ ಬೀಜ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಬಾರದು. 2016ರ ಗುತ್ತಿಗೆ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರ ಬಾರದು. ಕೆಆರ್‍ಎಸ್, ಕಬಿನಿ, ನುಗು, ಹಾರಂಗಿ, ಹೇಮಾ ವತಿ ಅಣೆಕಟ್ಟೆಗಳಲ್ಲಿ ನೀರಿದ್ದು, ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆಯಲು ನೀರು ಪೂರೈಸಬೇಕು. ಕೆಆರ್‍ಎಸ್ ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಿ ಅಣೆಕಟ್ಟನ್ನು ಸಂರಕ್ಷಿಸಬೇಕು. ಅಕ್ರಮ-ಸಕ್ರಮ ತಾಲೂಕು ಸಮಿತಿಯನ್ನು ಪುನರ್ ರಚಿಸಿ ದರಖಾಸ್ತು ಮಂಜೂರು ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಬೆಳೆಗಳ ಜಿಪಿಎಸ್ ಸರ್ವೆ ಸರಿಯಾಗಿ ನಡೆಯುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪಿರಿಯಾಪಟ್ಟಣ ತಾಲೂಕು ಮುಮ್ಮಡಿ ಕಾವಲ್ ಸರ್ವೆ ನಂ.1ರ ದುರಸ್ತಿ ಮಾಡಿ, ಅಲ್ಲಿನ ರೈತರ ಸಮಸ್ಯೆ ಗಳನ್ನು ಪರಿಹರಿಸಬೇಕು. ಕೆರೆ ಕಟ್ಟೆ, ಭೂ ಒತ್ತುವರಿ ತೆರವು ಕಾರ್ಯ ಸಮರ್ಪಕವಾಗಿ ನಡೆಸಲು ಟಾಸ್ಕ್ ಪೆÇೀರ್ಸ್ ರಚಿಸಬೇಕು. ಮೈಸೂರು ತಾಲೂಕು ಕೆಂಚಲ ಗೂಡು ಗ್ರಾಮದ ಸರ್ವೆ ನಂ.14ರ ಒತ್ತುವರಿದಾರರು ಹಾಗೂ ಫೋರ್ಜರಿ ದಾಖಲೆ ಸೃಷ್ಟಿಸಿಕೊಂಡಿರು ವವರ ಮೇಲೆ ಕಠಿಣ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸಂಘದ ಎಂ.ಎಸ್.ಅಶ್ವತ್ಥನಾರಾ ಯಣ ರಾಜೇ ಅರಸ್, ಹೆಚ್.ಸಿ.ಲೋಕೇಶ್ ರಾಜೇ ಅರಸ್, ಸರಗೂರು ನಟರಾಜ್, ಶಂಭೂನಳ್ಳಿ ಸುರೇಶ್, ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್, ನೇತ್ರಾವತಿ, ಪಿ.ಮರಂಕಯ್ಯ ಸೇರಿ ದಂತೆ ಹಲವರು ಪ್ರತಿಭÀಟನೆಯಲ್ಲಿದ್ದರು.