`ಪೊಲೀಸ್ ಕರ್ತವ್ಯಕೂಟ’ ವೃತ್ತಿ ನೈಪುಣ್ಯ ಗಳಿಸಲು ಸಹಕಾರಿ: ಡಾ.ಚಂದ್ರಗುಪ್ತ
ಮೈಸೂರು

`ಪೊಲೀಸ್ ಕರ್ತವ್ಯಕೂಟ’ ವೃತ್ತಿ ನೈಪುಣ್ಯ ಗಳಿಸಲು ಸಹಕಾರಿ: ಡಾ.ಚಂದ್ರಗುಪ್ತ

February 20, 2020

ಮೈಸೂರು, ಫೆ.19 (ಎಂಟಿವೈ)-ವೃತ್ತಿ ನೈಪುಣ್ಯ ದೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿಕೊಳ್ಳಲು ಸಹಕಾರಿಯಾಗುವ ಕೌಶಲ ವನ್ನು ಪಡೆದುಕೊಳ್ಳುವ ಸಲುವಾಗಿ ಪೊಲೀಸ್ ಸಿಬ್ಬಂದಿಗಳು `ಪೊಲೀಸ್ ಕರ್ತವ್ಯ ಕೂಟ’ದಲ್ಲಿ ತಪ್ಪದೇ ಪಾಲ್ಗೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಉತ್ತೇಜಿಸಿದ್ದಾರೆ.

ಮೈಸೂರು ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ 2 ದಿನ ಗಳ `ದಕ್ಷಿಣ ವಲಯ ಪೊಲೀಸ್ ಕರ್ತವ್ಯ ಕೂಟ-2019’ ಉದ್ಘಾಟಿಸಿ ಮಾತನಾಡಿದ ಅವರು, ಬಹುಮಾನ ಪಡೆಯ ಲಷ್ಟೇ ಕರ್ತವ್ಯಕೂಟದಲ್ಲಿ ಪಾಲ್ಗೊಳ್ಳುವ ಮನಸ್ಥಿತಿಯಿಂದ ಹೊರಬನ್ನಿ. ನಿಮ್ಮಲ್ಲಿರುವ ಪ್ರತಿಭೆ, ವೃತ್ತಿನೈಪುಣ್ಯ, ತನಿಖೆ ವೈಖರಿ, ಅಪರಾಧ ಪತ್ತೆಹಚ್ಚುವಿಕೆ ಸೇರಿದಂತೆ ಕರ್ತವ್ಯದ ವೇಳೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಹೆಚ್ಚಿಸಿ ಕೊಳ್ಳಲು ಇಂಥ ಕರ್ತವ್ಯಕೂಟ ಸಹಕಾರಿ. 2 ದಿನ ಈ ಕೂಟದಲ್ಲಿ ಹೆಚ್ಚು ಕಲಿಕೆಗೆ ಗಮನ ಕೇಂದ್ರೀಕರಿಸಬೇಕು ಎಂದು ಕಿವಿಮಾತು ಹೇಳಿದರು.

ಪೊಲೀಸ್ ಸಿಬ್ಬಂದಿಗಳ ಕರ್ತವ್ಯದ ಸಾಮಥ್ರ್ಯ ಹೆಚ್ಚಿ ಸಲು ಹಲವು ವರ್ಷಗಳಿಂದ ಕರ್ತವ್ಯಕೂಟ ನಡೆಸಲಾಗು ತ್ತಿದೆ. ಸಿಬ್ಬಂದಿಯಲ್ಲಿರುವ ಕೌಶಲ ಹಾಗೂ ಪ್ರತಿಭೆಯನ್ನು ಹೊರತರುವ ಕಾರ್ಯಕ್ರಮ ಇದಾಗಿದೆ. ಈ ಕೂಟ ಸ್ಪರ್ಧೆಯೇ ಆಗಿದ್ದರೂ ಕಲಿಕೆ ದೃಷ್ಟಿಯಿಂದ ನೋಡಬೇಕು. ಸಿಬ್ಬಂದಿಗಳಲ್ಲಿ ಸ್ಪೂರ್ತಿ ತುಂಬುವ ಉದ್ದೇಶದಿಂದ ಇದನ್ನು ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು. ಬಹುಮಾನ ಪಡೆಯಲಷ್ಟೇ ಸೀಮಿತ ಗೊಳ್ಳದೆ, ನಿತ್ಯ ನಮ್ಮ ಕೆಲಸವನ್ನು ಎಷ್ಟು ಕಾಳಜಿ ವಹಿಸಿ, ಎಷ್ಟು ಆಳವಾಗಿ ಅಧ್ಯಯನ ಮಾಡಿ ಸುಧಾರಣೆ ಕಂಡು ಕೊಳ್ಳುತ್ತೀವಿ ಎನ್ನುವುದರ ಸಂಕೇತವೇ ಈ ಕರ್ತವ್ಯ ಕೂಟ ಎಂದು ವಿಶ್ಲೇಷಿಸಿದರು.

ಇಲ್ಲಿ ಭಾಗಿಯಾಗಿದವರು ನಂತರ ನಿಮ್ಮಲ್ಲಿರುವ ಪ್ರತಿಭೆ, ನಿಮ್ಮ ಅಧಿಕಾರಿಗಳಲ್ಲಿರುವ ನೈಪುಣ್ಯವನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು. ದಕ್ಷಿಣವಲಯ ಐಜಿಪಿ ವಿಪುಲ್‍ಕುಮಾರ್, ಎಸ್‍ಪಿ ಸಿ.ಬಿ.ರಿಷ್ಯಂತï, ಡಿಸಿಪಿ ಎ.ಎನ್.ಪ್ರಕಾಶ್ ಗೌಡ ಸೇರಿ ದಂತೆ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿ ದ್ದರು. ಕರ್ತವ್ಯಕೂಟದಲ್ಲಿ ಮೈಸೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

Translate »