ಕಿಂದರಿಜೋಗಿಯಲ್ಲಿ ಮಲ್ಲಕಂಬ, ಹಗ್ಗದ ಮೇಲೆ ಆಸನಗಳ ಪ್ರದರ್ಶನಕ್ಕೆ ಜನಮೆಚ್ಚುಗೆ
ಮೈಸೂರು

ಕಿಂದರಿಜೋಗಿಯಲ್ಲಿ ಮಲ್ಲಕಂಬ, ಹಗ್ಗದ ಮೇಲೆ ಆಸನಗಳ ಪ್ರದರ್ಶನಕ್ಕೆ ಜನಮೆಚ್ಚುಗೆ

February 20, 2020

ಮೈಸೂರು,ಫೆ.19(ವೈಡಿಎಸ್)- ಕಿಂದರ ಜೋಗಿಯು ಮಹಿಳೆಯರು ಶಕ್ತಿ ಪ್ರದರ್ಶಿ ಸುವ ವೇದಿಕೆಯಾಗಿತ್ತು. ಮಹಿಳಾ ಕಲಾವಿ ದರ ಡೊಳ್ಳು ಕುಣಿತ, ಹೆಣ್ಣು ಮಕ್ಕಳ ಸಾಹಸಮಯ ಹಗ್ಗದ ಮಲ್ಲಕಂಬ, ಯುವ ಕರ ಮಲ್ಲಕಂಬ ಪ್ರದರ್ಶನಗಳು ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದವು.

`ಗಾಂಧಿ ಪಥ’ ಶೀರ್ಷಿಕೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಕೊನೆಯ ದಿನವಾದ ಬುಧವಾರ, ಧಾರವಾಡದ ಕುಂದ ಗೋಳದ ಎಸ್.ಜೆ.ಹೂಗಾರ ನೇತೃತ್ವದ 18 ಯುವಕರು, ಐವರು ಯುವತಿಯರ ತಂಡ ಮಲ್ಲಕಂಬ ಮತ್ತು ಹಗ್ಗದಲ್ಲಿ 60ಕ್ಕೂ ಹೆಚ್ಚು ಆಸನಗಳನ್ನು ಪ್ರದರ್ಶಿಸಿದರು. ಮೊದಲಿಗೆ 7, 8 ಮತ್ತು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರು, 15 ಅಡಿ ಉದ್ದದ ಹಗ್ಗವನ್ನು ಕಾಲಿನ ಹೆಬ್ಬೆ ರಳಿನ ಸಹಾಯದಿಂದ ಮೇಲೆ ಹತ್ತಿ, 10 ಅಡಿ ಎತ್ತರದಲ್ಲಿ ಪದ್ಮಾಸನ, ಏಕಪಾದ ಚಕ್ರಾಸನ, ಏಕಪಾದ ಶೀರ್ಷಾಸನ, ಸಂಪೂರ್ಣ ನಟರಾಜ ಆಸನ, ಪಿರಮಿಡ್ ಗೋಪುರ ನಿರ್ಮಾಣ ಮೊದಲಾದ ಮೈನವೀರೇಳಿ ಸುವ 25 ಆಸನಗಳನ್ನು ಪ್ರದರ್ಶಿಸಿ ಪ್ರೇಕ್ಷಕ ರಿಂದ ಚಪ್ಪಾಳೆ ಗಿಟ್ಟಿಸಿದರು.

ಇದಕ್ಕೂ ಮುನ್ನ 18 ಮಂದಿ ಯುವ ಕರ ತಂಡ, ನಿರಾಧಾರ ಮಲ್ಲಕಂಬ ಪ್ರದರ್ಶನ ದಲ್ಲಿ ಟೇಬಲ್ ಮೇಲೆ ಚಿಕ್ಕದೊಂದು ಕಂಬ ವಿಟ್ಟು ಅದರ ಮೇಲೆ ವಿವಿಧ ಆಸನ ಗಳನ್ನು ಪ್ರದರ್ಶಿಸಿದರೆ, ಮಲ್ಲಕಂಬದಲ್ಲಿ ಹನುಮ ಧ್ವಜ, ವೀರಭದ್ರಾಸನ, ತ್ರಿವಿಕ್ರಮ ಆಸನ, ಹಸ್ತ ಪಾದಾಸನ, ಸಂಪೂರ್ಣ ನಟರಾಜ ಆಸನ ಸೇರಿದಂತೆ 34 ಕಠಿಣ ಆಸನಗಳನ್ನು ಪ್ರದರ್ಶಿಸಿದರು. ಇದರಿಂದ ರೋಮಾಂಚನ ಗೊಂಡ ಪ್ರೇಕ್ಷಕರು ವೇದಿಕೆಗೆ ಧಾವಿಸಿ, ಹೂಗಾರ್ ಮತ್ತು ಮಕ್ಕಳನ್ನು ಅಭಿನಂದಿಸಿ ದರು. ಈ ವೇಳೆ ಪ್ರತಿಕ್ರಿಯಿಸಿದ ಹೂಗಾರ್, ಬೇರೆ ಜಿಲ್ಲೆಗೆ ಹೋಲಿಸಿದರೆ ಮೈಸೂರಿನಲ್ಲಿ ನಮ್ಮ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ನೀಡುತ್ತಾರೆ. ತುಂಬಾ ಖುಷಿಯಾಗಿದೆ ಎಂದರು.

Translate »