ಏ.26ರ `ಸಪ್ತಪದಿ’ ಪ್ರಚಾರ ವಾಹನಕ್ಕೆ ಎಡಿಸಿ ಚಾಲನೆ
ಮೈಸೂರು

ಏ.26ರ `ಸಪ್ತಪದಿ’ ಪ್ರಚಾರ ವಾಹನಕ್ಕೆ ಎಡಿಸಿ ಚಾಲನೆ

February 24, 2020

ಮೈಸೂರು,ಫೆ.23(ಎಂಟಿವೈ)- ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳ ಹಾಗೂ ಸಾಮೂಹಿಕ ವಿವಾಹಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಮುಜರಾಯಿ ಇಲಾಖೆ ಏ.26ರಂದು ಚಾಮುಂಡಿಬೆಟ್ಟದಲ್ಲಿ `ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಆಯೋಜಿಸಿದ್ದು, ಅದರ ಪ್ರಚಾರ ರಥಕ್ಕೆ ಗುರುವಾರ ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರಸ್ವಾಮಿ ದೇವಾ ಲಯದ ಬಳಿ ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪೂರ್ಣಿಮಾ ಅವರು, ರೈತರು, ಬಡ ಹಾಗೂ ಮಧ್ಯಮ ಕುಟುಂಬದ ಜನರು ಸಾಲ ಮಾಡಿ ತಮ್ಮ ಮಕ್ಕಳ ಮದುವೆಯನ್ನು ವಿಜೃಂಭಣೆಯಿಂದ ಮಾಡುವ ಮೂಲಕ ಸಾಲದ ಸುಳಿಗೆ ಸಿಲುಕು ತ್ತಿದ್ದಾರೆ. ಇದರಿಂದ ಹಲವು ಸಮಸ್ಯೆಗ ಳನ್ನು ಎದುರಿಸುವಂತಾಗಿದೆ. ಈ ಹಿನ್ನೆಲೆ ಯಲ್ಲಿ ಸರಳ ಹಾಗೂ ಸಾಮೂಹಿಕ ವಿವಾ ಹಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ಮೂಲಕ `ಎ ಗ್ರೇಡ್’ ದೇವಾಲಯಗಳಲ್ಲಿ `ಸಪ್ತಪದಿ’ ಸರಳ ವಿವಾಹ ಮಹೋತ್ಸವ ಆಯೋಜಿಸಿದೆ. ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆ ಯುವ ಸಾಮೂಹಿಕ ವಿವಾಹಕ್ಕೆ ಈವರೆಗೆ 22 ಜೋಡಿಗಳು ಹೆಸರು ನೋಂದಾ ಯಿಸಿಕೊಂಡಿವೆ ಎಂದರು.

ಜಾತಿ, ಧರ್ಮಕ್ಕೆ ಸೀಮಿತವಾಗದೇ ಈ ವಿವಾಹ ಮಹೋತ್ಸವ ನಡೆಸಲಾಗುತ್ತಿದೆ. ಸರಳ ಸಾಮೂಹಿಕ ವಿವಾಹವೇ ಆದರೂ ಶಾಸ್ತ್ರೋಕ್ತವಾಗಿ, ಸಂಪ್ರದಾಯದಂತೆ ನಡೆಸ ಲಾಗುತ್ತಿದೆ. ಈ ವಿವಾಹ ಮಹೋತ್ಸವದಲ್ಲಿ ಸಪ್ತಪದಿ ತುಳಿಯಲು ಇಚ್ಛಿಸುವವರು ಮಾ. 27ರವರೆಗೆ ಹೆಸರು ನೋಂದಾಯಿಸಿಕೊಳ್ಳ ಬಹುದಾಗಿದೆ. ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5 ಸಾವಿರ ರೂ. ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಮತ್ತಿತರ ವಸ್ತುಗಳಿಗಾಗಿ 10 ಸಾವಿರ ರೂ. ನಗದು ಮತ್ತು 8 ಗ್ರಾಂ ಚಿನ್ನದ ತಾಳಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೇ, ಕಂದಾಯ ಇಲಾಖೆಯಿಂದ `ಆದರ್ಶ ವಿವಾಹ’ ಯೋಜನೆಯಡಿ ವಧು ವಿನ ಹೆಸರಿನಲ್ಲಿ 10 ಸಾವಿರ ರೂ.ಗಳ ನಿಶ್ಚಿತ ಠೇವಣಿ ಇಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯಿಂದ `ಸರಳ ವಿವಾಹ’ ಯೋಜನೆಯಡಿ ಪರಿಶಿಷ್ಟ ಜಾತಿ ಜೋಡಿಗೆ 50 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಈ `ಸಪ್ತಪದಿ’ಯಲ್ಲಿ ವಿವಾಹವಾಗಬೇಕೆಂ ದರೆ ಸರ್ಕಾರದ ನಿಯಮದಂತೆ ವರನಿಗೆ 21 ವರ್ಷ, ವಧುವಿಗೆ 18 ವರ್ಷ ತುಂಬಿರ ಬೇಕು. ಅಂತಹ ಜೋಡಿಗಳು ಮಾ.27 ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದರು. ಈ ವೇಳೆ ಚಾಮುಂಡೇಶ್ವರಿ ದೇವ ಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಯಾಗಿರುವ ಮುಜರಾಯಿ ತಹಶೀಲ್ದಾರ್ ಯತಿರಾಜ್, ಸಹಾಯಕ ಆಡಳಿತಾಧಿ ಕಾರಿ ಗೋವಿಂದರಾಜು, ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಆಗಮಿಕ ಶಶಿ ಶೇಖರ್ ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

Translate »