ಇಂದು, ಫೆ.25ರಂದು ವಿಶ್ವಮಾನವ ಎಕ್ಸ್‍ಪ್ರೆಸ್ ರದ್ದು
ಮೈಸೂರು

ಇಂದು, ಫೆ.25ರಂದು ವಿಶ್ವಮಾನವ ಎಕ್ಸ್‍ಪ್ರೆಸ್ ರದ್ದು

February 23, 2020

ಮೈಸೂರು,ಫೆ.22(ಎಂಕೆ)- ಹರಿಹರ-ದೇವರ ಗುಡ್ಡ ನಡುವೆ 2ನೇ ಹಂತದ ಜೋಡಿ ರೈಲು ಮಾರ್ಗದಲ್ಲಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ಮೈಸೂರು-ಬೆಳಗಾವಿ ಮಾರ್ಗದ `ವಿಶ್ವಮಾನವ ಎಕ್ಸ್‍ಪ್ರೆಸ್’ ರೈಲು ಗಾಡಿಯ ಸಂಚಾರವನ್ನು ಫೆ.23ರಿಂದ 25ರವರೆಗೆ ರದ್ದು ಗೊಳಿಸಲಾಗಿದೆ. ಟ್ರೈನ್ ನಂ.17326 ಮೈಸೂರು-ಬೆಳಗಾವಿ, ಟ್ರೈನ್ ನಂ.17325 ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‍ಪ್ರೆಸ್ ಸಂಚಾರ ರದ್ದಾಗಿದೆ.

ಅಲ್ಲದೆ, ಟ್ರೈನ್ ನಂ.56273/56274 ಅರಸೀ ಕೆರೆ-ಹುಬ್ಬಳ್ಳಿ-ಅರಸಿಕೆರೆ, ಟ್ರೈನ್ ನಂ.56515/56516 ಕೆಎಸ್‍ಆರ್ ಬೆಂಗಳೂರು-ಹುಬ್ಬಳ್ಳಿ-ಕೆಎಸ್‍ಆರ್ ಬೆಂಗಳೂರು ಹಾಗೂ ಟ್ರೈನ್ ನಂ.56914/56913 ಹುಬ್ಬಳ್ಳಿ-ಕೆಎಸ್‍ಆರ್ ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ರೈಲು ಗಾಡಿಗಳನ್ನು ರದ್ದುಪಡಿಸ ಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »