ಮೈಸೂರು,ಫೆ.22(ಎಂಟಿವೈ)-ಮೈಸೂರಿನಲ್ಲಿ ಶುಕ್ರ ವಾರ ಶಿವರಾತ್ರಿ ಹಬ್ಬವನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಮೈಸೂರಿನ ವಿವಿಧೆಡೆ ಶಿವನ ದೇಗುಲಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಶಿವನ ದೇಗುಲಗಳಲ್ಲಿ ನಸುಕಿನಿಂದಲೇ ವಿಶೇಷಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವ ರೆಗೂ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಸಮರ್ಪಿಸಿದ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದÀರು.
ಭಕ್ತರಿಂದ ಶಿವಲಿಂಗಕ್ಕೆ ಅಭಿಷೇಕ: ನಂಜನಗೂಡು ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ಆಶ್ರಮದ ನಾದ ಮಂಟಪದಲ್ಲಿ ಮಹಾಗಣಪತಿ ಹೋಮ ಮತ್ತು ರುದ್ರ ಹೋಮ, ಶ್ರೀಚಕ್ರ ಪೂಜೆ, ಪೂರ್ಣಾಹುತಿ ಮಾಡ ಲಾಯಿತು. ಬಳಿಕ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು. ನಂತರ ಸ್ವಾಮೀಜಿ ಸಚ್ಚಿದಾನಂದ ಲಿಂಗಕ್ಕೆ ರುದ್ರಾಭಿಷೇಕ ನೆರ ವೇರಿಸಿದರು. ಬಳಿಕ ಭಕ್ತರು ಶಿವಲಿಂಗಕ್ಕೆ ಸಹಸ್ರ ಕಳಶಾ ಭಿಷೇಕ ನೆರವೇರಿಸಿದರು. ಮಧ್ಯರಾತ್ರಿ 12ರವರೆಗೂ ಸಂಗೀತ ಕಾರ್ಯಕ್ರಮ, ದ್ವಂದ್ವ ಗಾಯನ, ಭರತ ನಾಟ್ಯ ಪ್ರದರ್ಶನ, ಸ್ವಾಮೀಜಿ ಅವರಿಂದ ಶಿವಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
108 ಲಿಂಗಗಳ ದರ್ಶನ: ರಾಮಾನುಜ ರಸ್ತೆಯ ಶ್ರೀಜಗದ್ಗುರು ಶೈವಶಿಲ್ಪಿ ಬ್ರಹ್ಮಶ್ರೀ ಗುರುಕುಲದ ಆವ ರಣದಲ್ಲಿರುವ ಚತುರ್ವೇದ ಪುರುಷರು(7 ಲಿಂಗ) ಹಾಗೂ 101 ಶಿವಲಿಂಗ ಸೇರಿದಂತೆ 108 ಶಿವಲಿಂಗ ಗಳ ದರ್ಶನ ಪಡೆಯಲು ಸಾವಿರಾರು ಭಕ್ತರು ಶುಕ್ರ ವಾರ ಸಾಲುಗಟ್ಟಿದ್ದರು. ಕಾಮ-ಕಾಮೇಶ್ವರಿ ದೇವಸ್ಥಾನ ದಲ್ಲಿ ಅರಮನೆ ಮುಜರಾಯಿ ಸಂಸ್ಥೆ ವತಿಯಿಂದ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ವಿಜಯ ವಿಶ್ವೇಶ್ವರಸ್ವಾಮಿಗೆ ಏಕಾದಶಾವರ ರುದ್ರಾಭಿಷೇಕ, ಮಧ್ಯಾಹ್ನ ಉತ್ಸವ ಜರು ಗಿತು. ಶುಕ್ರವಾರ ಬೆಳಿಗ್ಗೆ 10ರಿಂದ ಶನಿವಾರ ನಸುಕಿನ 3 ಗಂಟೆವರೆಗೂ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾಮಾನುಜ ರಸ್ತೆ ಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿತ್ತು.
ಸುತ್ತೂರು ಮಠದಲ್ಲಿ: ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶಿವಲಿಂಗಕ್ಕೆ ಅಭಿಷೇಕ, ಪುಷ್ಪಾರ್ಚನೆ ಮಾಡಿ, ಹಲವು ಭಕ್ತರಿಗೆ ಲಿಂಗದೀಕ್ಷೆ ನೀಡಿದರು. ಮಠದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಗಮನ ಸೆಳೆದ ಅಲಂಕಾರ: ಮೈಸೂರು-ಬನ್ನೂರು ರಸ್ತೆಯ ನಜರ್‍ಬಾದ್‍ನಲ್ಲಿರುವ ಮಲೆಮಹಾದೇಶ್ವರ ದೇವಾಲಯ ಹಾಗೂ ಕೆ.ಜಿ.ಕೊಪ್ಪಲಿನ ಚಂದ್ರಮೌಳೇ ಶ್ವರ ದೇವಾಲಯವನ್ನು ಶಿವರಾತ್ರಿ ಹಿನ್ನೆಲೆಯಲ್ಲಿ ಭವ್ಯ ವಾಗಿ ಅಲಂಕರಿಸಲಾಗಿತ್ತು. ಮಹಾದೇಶ್ವರ ದೇವಾ ಲಯದ ಗರ್ಭಗುಡಿಯನ್ನು ಗುಹೆಯೊಳಗೆ ಹೊಕ್ಕು ಪರ್ವತದಲ್ಲಿ ಶಿವಲಿಂಗ ಇರುವಂತೆ ವಿನ್ಯಾಸಗೊಳಿಸ ಲಾಗಿತ್ತು. ಚಂದ್ರಮೌಳೇಶ್ವರ ದೇವಾಲಯವನ್ನು ಬಣ್ಣ ಬಣ್ಣದ ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ವಿವಿಧೆಡೆ: ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದ ಶಿವರಾಂಪೇಟೆ ಮಹಾಲಿಂಗೇಶ್ವರ ದೇಗುಲ ದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಮಹಾಲಿಂಗೇಶ್ವರ, ಪಾರ್ವತಿ ಮತ್ತು ಚಾಮುಂಡೇ ಶ್ವರಿ ವಿಗ್ರಹ ಇರುವುದು ದೇಗುಲದ ವಿಶೇಷ. ಮಾತೃ ಮಂಡಳಿ ವೃತ್ತದ ಚಂದ್ರವೌಳೇಶ್ವರ ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜೆ ಮಾಡಲಾಯಿತು. ರಾತ್ರಿ ಪೂರ್ತಿ ಸಂಗೀತ ಸೇವೆ ಜರು ಗಿತು. ಲಷ್ಕರ್ ಮೊಹಲ್ಲಾದ ಮಹದೇಶ್ವರ ದೇವಸ್ಥಾನ ದಲ್ಲಿ ಸ್ವಾಮಿ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ನೆರವೇರಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಯಿತು. ಸುವರ್ಣ ಕೊಳಗದ ಮೆರವಣಿಗೆ ಕಂಡು ಭಕ್ತರು ಭಕ್ತಿ ಪರವಶರಾದರು. ಚಾಮರಾಜ ಪುರಂನ ಶ್ರೀಪ್ರಸನ್ನ ವಿಶ್ವೇಶ್ವರ ದೇವಸ್ಥಾನ, ಕೆ.ಜಿ. ಕೊಪ್ಪಲಿನ ಚಂದ್ರವೌಳೇಶ್ವರ ದೇವಸ್ಥಾನ, ವಿದ್ಯಾರಣ್ಯ ಪುರಂನ ರಾಮಲಿಂಗೇಶ್ವರ ದೇಗುಲ, ಹಳೇಬೀಡು ಮಹದೇಶ್ವರಸ್ವಾಮಿ ದೇಗುಲ, ಅಶೋಕಪುರಂನ ಮುಕ್ಕಣ್ಣೇಶ್ವರ ಸ್ವಾಮಿ ದೇಗುಲ, ಕುಂಬಾರಕೊಪ್ಪಲಿನ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ, ಲಷ್ಕರ್ ಮೊಹ ಲ್ಲಾದ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ವಿವಿಧ ಶಿವ ದೇಗುಲಗಳಲ್ಲಿ ಶಿವರಾತ್ರಿ ಆಚರಣೆಯ ಸಂಭ್ರಮ ಮನೆ ಮಾಡಿತ್ತು.