ಮೈಸೂರು,ಫೆ.19(ಎಂಟಿವೈ)- ಮೈಸೂರು ಆಕಾಶವಾಣಿ ವೃತ್ತದ ಬಳಿ ಬುಧವಾರ ಬೆಳಿಗ್ಗೆ ಮೋಟಾರ್ ಬೈಕ್ ಹಾಗೂ ಮಿನಿಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದರು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂ ಕಿನ ಸೀತಾಪುರ ಗ್ರಾಮದ ನಾರಾಯಣಪ್ಪ (50) ಮೃತರು. ಹೆಲ್ಮೆಟ್ ಧರಿಸಿದ್ದರೂ, ನೆಲಕ್ಕೆ ಬಿದ್ದ ರಭಸಕ್ಕೆ ಹೆಲ್ಮೆಟ್ ಹಾರಿ ಹೋಗಿದೆ. ಇದರಿಂದ ಹಿಂಬದಿ ಚಕ್ರ ಹರಿದು ಸಾವಿಗೀಡಾಗಿದ್ದಾರೆ.
ನಂಜನಗೂಡು ರಸ್ತೆಯ ಶಕ್ತಿಧಾಮದಲ್ಲಿ ಗಾರೆ ಕೆಲಸಕ್ಕೆಂದು ಬೈಕ್‍ನಲ್ಲಿ ತೆರಳುವಾಗ ಈ ದುರ್ಘಟನೆ ನಡೆದಿದೆ. ಮೇಸ್ತ್ರ್ರಿಯೊಬ್ಬರ ಬಳಿ ಸೀತಾಪುರದ ಏಳೆಂಟು ಜನ ಗಾರೆ ಕೆಲಸ ಮಾಡುತ್ತಿದ್ದು, ಅವರಲ್ಲಿ ನಾರಾ ಯಣಪ್ಪ ಅವರು ಒಬ್ಬರು. ನಿಧಾನವಾಗಿ ಬೈಕ್ ಚಲಾಯಿಸುತ್ತಿದ್ದ ಕಾರಣ ನಾರಾ ಯಣಪ್ಪ ಮನೆಯಿಂದ ಬೇಗನೆ ಹೊರಡುತ್ತಿ ದ್ದರು. ಬುಧವಾರ ಬೆಳಿಗ್ಗೆ 7.15ಕ್ಕೆ ಬೈಕ್ (ಕೆಎ11, ಸಿ 2004) ನಲ್ಲಿ ಮನೆಯಿಂದ ಹೊರಟ ನಾರಾ ಯಣಪ್ಪ, ಕೆಆರ್‍ಎಸ್, ಬೆಳಗೊಳದ ಮೂಲಕ ರಿಂಗ್‍ರಸ್ತೆಗೆ ಬಂದು ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್ ಮುಂಭಾ ಗದ ರಸ್ತೆಯಲ್ಲಿ ಹೈವೇ ವೃತ್ತ ತಲುಪಿ, ದೋಬಿ ಘಾಟ್ ರಸ್ತೆ ಮಾರ್ಗವಾಗಿ ಆಕಾಶ ವಾಣಿ ವೃತ್ತ ದಾಟಲು ಮುಂದಾಗಿದ್ದಾರೆ. ಎಸ್‍ಎಸ್ ಟೆಕ್ನಾಲಜಿ ಸಂಸ್ಥೆಗೆ ಸೇರಿದ ಮಿನಿ ಬಸ್(ಕೆಎ09, ಸಿ3092) ಬೆಳಿಗ್ಗೆ 8.20ರಲ್ಲಿ ಸಿಬ್ಬಂದಿ ಕರೆದೊಯ್ಯಲು ಒಂಟಿಕೊಪ್ಪಲು ದೇವಾಲಯದ ಕಡೆಯಿಂದ ದಾಸಪ್ಪ ವೃತ್ತದ ಕಡೆಗೆ ಬರುತ್ತಿದ್ದಾಗ ಆಕಾಶವಾಣಿ ವೃತ್ತದಲ್ಲಿ ಅಡ್ಡ ಬಂದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದ ನಾರಾಯಣಪ್ಪ ಅವರ ತಲೆ ಮೇಲೆ ಮಿನಿ ಬಸ್‍ನ ಹಿಂಬದಿ ಚಕ್ರ ಹರಿದಿದೆ. ಪರಿಣಾಮ ನಾರಾಯಣಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ವಿವಿ ಪುರಂ ಸಂಚಾರ ಪೊಲೀಸರು ಎರಡೂ ವಾಹನಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಮೃತ ದೇಹವನ್ನು ಮೈಸೂರು ಮೆಡಿಕಲ್ ಕಾಲೇ ಜಿನ ಶವಾಗಾರಕ್ಕೆ ಮುಟ್ಟಿಸಿದ್ದಾರೆ.
ಮೊಬೈಲ್ ಕರೆಯಿಂದ ಗುರುತುಪತ್ತೆ: ನಾರಾಯಣಪ್ಪ ಅವರ ಬೇಸಿಕ್ ಮೊಬೈಲ್ ಛಿದ್ರಗೊಂಡಿದೆ. ಜೇಬಿನಲ್ಲಿ ಯಾವುದೇ ಗುರು ತಿನ ಚೀಟಿಯೂ ಇಲ್ಲದ್ದರಿಂದ ಆರಂಭ ದಲ್ಲಿ ಗುರುತು ಪತ್ತೆ ಆಗಿರಲಿಲ್ಲ. ಸಂಚಾರ ಪೊಲೀಸರು ಮೊಬೈಲ್ ಸರಿಪಡಿಸಿ, ಡಯಲ್ ಲಿಸ್ಟ್‍ನಲ್ಲಿದ್ದ ನಂಬರ್‍ಗೆ ಕರೆ ಮಾಡಿ ಅಪ ಘಾತದ ಸುದ್ದಿ ತಿಳಿಸಿದಾಗ ಮೃತ ವ್ಯಕ್ತಿ ನಾರಾಯಣಪ್ಪ ಎಂದು ತಿಳಿದುಬಂದಿದೆ.
4 ದಿನ ಮನೆಯಲ್ಲೇ ಇದ್ದರು: ಮೃತ ನಾರಾ ಯಣಪ್ಪ ಆರೋಗ್ಯದ ಸಮಸ್ಯೆಯಿಂದ ಕಳೆದ 4 ದಿನದಿಂದ ಕೆಲಸಕ್ಕೆ ಗೈರಾಗಿ ಮನೆಯ ಲ್ಲಿಯೇ ಇದ್ದರು. ಇಂದು ಬೆಳಿಗ್ಗೆಯಷ್ಟೇ ಕೆಲಸಕ್ಕೆಂದು ಹೊರಟು ರಸ್ತೆ ಅವಘಡಕ್ಕೆ ಬಲಿಯಾಗಿದ್ದಾರೆ. ಇಷ್ಟು ದಿನ ಊರಿಂದ ಮತ್ತೊಬ್ಬರನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಬರುತ್ತಿದ್ದವರು ಇಂದು ಒಬ್ಬರೇ ಬಂದಿದ್ದರು. ಮಿನಿ ಬಸ್ ದಿಢೀರ್ ಎದುರಾದಾಗ ಗಾಬರಿ ಗೊಂಡು ಎಡಕ್ಕೆ ಬೈಕ್ ತಿರುಗಿಸಲು ಯತ್ನಿಸಿ ದ್ದಾರೆ. ಮಿನಿ ಬಸ್ ಚಾಲಕನೂ ಡಿಕ್ಕಿ ಹೊಡೆ ಯುವುದನ್ನು ತಪ್ಪಿಸಲು ಕಡೆ ಕ್ಷಣದಲ್ಲಿ ಯತ್ನಿಸಿದ್ದಾನೆ. ಅಷ್ಟರಲ್ಲಾಗಲೇ ಬೈಕ್‍ಗೆ ಬಸ್ ಡಿಕ್ಕಿಯಾಗಿ ನಾರಾಯಣಪ್ಪ ಅವರ ತಲೆ ಮೇಲೆ ಹರಿದಿದೆ. ಅಪಘಾತದ ಸುದ್ದಿ ತಿಳಿದು ಧಾವಿಸಿದ ಸಂಬಂಧಿಗಳು, ಗ್ರಾಮ ಸ್ಥರು ಶವಾಗಾರದ ಬಳಿ ರೋದಿಸುತ್ತಿದ್ದ ದೃಶ್ಯ ಎಲ್ಲರ ಮನಕಲಕುವಂತಿತ್ತು. ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.