ವಿವಿಧ ರಾಜ್ಯ, ಸಂಸ್ಕøತಿಗಳ ಕಲಾವಿದರಿಂದ ಕಳೆಗಟ್ಟಿದ ಜನಪದೋತ್ಸವ
ಮೈಸೂರು

ವಿವಿಧ ರಾಜ್ಯ, ಸಂಸ್ಕøತಿಗಳ ಕಲಾವಿದರಿಂದ ಕಳೆಗಟ್ಟಿದ ಜನಪದೋತ್ಸವ

February 16, 2020

ಮೈಸೂರು, ಫೆ.15(ಎಸ್‍ಬಿಡಿ)- `ಬಹು ರೂಪಿ’ಯಲ್ಲಿ ಶನಿವಾರ ವಿವಿಧ ರಾಜ್ಯಗಳ ಜಾನಪದ ವೈಭವ ಮೇಳೈಸಿತು. `ಬಹುರೂಪಿ’ ರಾಷ್ಟ್ರೀಯ ನಾಟಕೋ ತ್ಸವದ ಭಾಗವಾಗಿ ಕಿಂದರಜೋಗಿ ಆವ ರಣದಲ್ಲಿ ಏರ್ಪಡಿಸಿರುವ `ಜನಪದೋ ತ್ಸವ’ದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳ ಸಂಸ್ಕøತಿ ಸಮ್ಮಿಳಿತವಾಗಿ, ನೂರಾರು ಪ್ರೇಕ್ಷಕರ ಹೃನ್ಮನ ತಣಿಸಿತು.

ious state and cultures -1

ತಮಿಳುನಾಡು ತಂಜಾವೂರಿನ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ಕಲಾವಿ ದರು ಪ್ರಸ್ತುತಪಡಿಸಿದ ಜನಪದ ನೃತ್ಯ ವಿಶೇಷವಾಗಿತ್ತು. ನಾದಸ್ವರ, ಡೋಲು, ತಮಟೆ ಸದ್ದಿನ ಸಮ್ಮಿಳಿತಕ್ಕೆ ಕಲಾವಿದರು ಆಕರ್ಷಕ ಹೆಜ್ಜೆ ಹಾಕಿದರು. ನಡುವೆ ವಾದ್ಯ ಗಳ ಸದ್ದು ನಿಂತು, ನೃತ್ಯ ಕಾರರ ಕಾಲಲ್ಲಿ ಕಟ್ಟಿದ್ದ ಗೆಜ್ಜೆಯ ನಾದ ಹೊರಹೊಮ್ಮಿ ಮುದ ನೀಡಿತ್ತು. ಪುರುಷ-ಮಹಿಳಾ ಕಲಾ ವಿದರು ತಮಟೆ ಬಾರಿಸುವುದರೊಂದಿಗೆ ಗಿರಕಿ, ಲಾಗ, ಪಲ್ಟಿ ಹೊಡೆದು ನೆರೆದಿ ದ್ದವರನ್ನು ನಿಬ್ಬೆರಗಾಗಿಸಿದರು.

ious state and cultures -1-2

ಕಲಾವಿದರಿಬ್ಬರು ಸೊಂಟ ಭಾಗಿಸಿ, ಪರಸ್ಪರ ಶಿರ ಜೋಡಿಸಿದರೆ, ಮತ್ತೋರ್ವ ಕಲಾವಿದ ಈಜು ಮಾದರಿಯಲ್ಲಿ ಹಾರಿ ಸಾಹಸ ಪ್ರದರ್ಶಿಸಿದರು. ಇಂಪಾದ ನಾದ ಸ್ವರ, ಅಬ್ಬರದ ತಮಟೆ ಸದ್ದಿಗೆ ಆಕರ್ಷಕ ಹೆಜ್ಜೆ ಸಂಯೋಜನೆಯನ್ನು ಪ್ರೇಕ್ಷಕರು ಮೆಚ್ಚಿ ಆಸ್ವಾದಿಸಿದರು. ಆಂಧ್ರಪ್ರದೇಶದ ಸಾಂಪ್ರದಾಯಿಕ `ಕೊಮ್ಮು (ಕೊಂಬು) ಕೋಯ’ ನೃತ್ಯ ಆಕರ್ಷಕವಾಗಿತ್ತು. ವಿಶಿಷ್ಟ ಉಡುಗೆಯುಟ್ಟಿದ್ದ ಪುರುಷ ನೃತ್ಯಕಾರರ ಶಿರದಲ್ಲಿ ನವಿಲುಗರಿ ಗುಚ್ಛ ಸಹಿತ ಕೊಂಬು, ಮಹಿಳಾ ಕಲಾವಿದರ ಶಿರದಲ್ಲಿ ನವಿಲು ಗರಿ ಕಂಗೊಳಿಸುತ್ತಿತ್ತು. ಎಲ್ಲಾ ಕಲಾವಿ ದರೂ ಉದ್ದವಾದ ಡೋಲು ಬಾರಿ ಸುತ್ತಾ ನರ್ತಿಸಿದರು. ಹಬ್ಬ-ಉತ್ಸವಗಳಲ್ಲಿ ಪ್ರದರ್ಶಿ ಸುವ ಆಂಧ್ರದ ಜನಪದ ನೃತ್ಯ ಪ್ರಸ್ತುತಪಡಿಸಿ ದ ಕಲಾವಿದರನ್ನು ಪ್ರೇಕ್ಷಕರು ಕರತಾಡನದ ಮೂಲಕ ಪ್ರೋತ್ಸಾಹಿಸಿದರು.

ious state and cultures -3

ಬಳ್ಳಾರಿಯ ರಾಮಣ್ಣ ಮತ್ತು ಸಂಗಡಿ ಗರ `ಗೊಂದಲಿಗರ ಮೇಳ’ ಪ್ರಸ್ತುತಿ ನೆರೆದಿ ದ್ದವರ ಮನಸೂರೆಗೊಂಡಿತು. ಜನಪದ ಹಾಡು-ಸಂಭಾಷಣೆಯೊಂದಿಗೆ ಆದಿಶಕ್ತಿ ಅಂಭಾಭವಾನಿಯನ್ನು ಸ್ಮರಿಸಿದ್ದು ವಿಶೇಷ ವಾಗಿತ್ತು. ಕೇರಳ ಕಣ್ಣೂರಿನ `ರಹೀಸ್, ಇತ್ತಿ ಕಲಾವಿದರ ತಂಡ’ ಅಮೋಘ ನೃತ್ಯ ಪ್ರದರ್ಶಿಸಿತು. ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ವೇದಿಕೆ ತುಂಬಿದ್ದ ಕಲಾ ವಿದರು, ಸಾಮರಸ್ಯ ಸಾರುವ ಹಾಡು ಗಳಿಗೆ ಹೆಜ್ಜೆ ಹಾಕಿ, ಮನರಂಜನೆ ನೀಡಿದರು.

ious state and cultures -3

ಭಾನುವಾರ ಸಂಜೆ 5.30ಕ್ಕೆ ತಂಜಾ ವೂರು ತಂಡದಿಂದ ಜನಪದ ನೃತ್ಯ, ಮೈಸೂರು ಕೊಡವ ಸಮಾಜದ `ಉಮ್ಮತ್ತಾಟ್ ಮತ್ತು ಬೊಳಕಾಟ್’ ನೃತ್ಯ, ಕೋಲಾರದ `ಈ ಭೂಮಿ ತಮಟೆ ಕಲಾ ತಂಡ’ದ ಪ್ರದರ್ಶನ ನಡೆಯಲಿದೆ.

Translate »