ಮೈಸೂರು, ಫೆ.16-ವಿಜ್ಞಾನ ಮತ್ತು ತಂತ್ರಜ್ಞಾನವು ಮುಂದುವರೆದಂತೆ ಕೈಗಾರಿಕೆಗಳು ಹೆಚ್ಚಾಗಿ ಅದು ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಮಾನವ ಸಂಸ್ಕøತಿ ಗಳನ್ನು ವಿನಾಶದತ್ತ ಒಯ್ಯುತ್ತಿವೆ. ಅಲ್ಲದೆ ಅಭಿವೃದ್ಧಿ ಪರಿಕಲ್ಪನೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದಂತೆ ಅಭಿವೃದ್ಧಿಯ ವೇಗ ಕುಂಠಿತವಾಗುತ್ತದೆ. ತಲೆಮಾರು ಗಳು ಅಭಿವೃದ್ಧಿ ಫಲವನ್ನು ಕಾಣಲು ಸಾಧ್ಯವಾಗುವು ದಿಲ್ಲವೆಂದು ಮೈಸೂರು ವಿವಿಯ ರಾಜ್ಯಶಾಸ್ತ್ರ ಪ್ರಾಧ್ಯಾ ಪಕ ಪೆÇ್ರ. ಮುಜಾಫರ್ ಅಸಾದಿ ಅಭಿಪ್ರಾಯಪಟ್ಟರು.
ಮೈಸೂರು ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಡಿ.ಸಿ ನಂಜುಂಡ ಅವರ ‘ಅಪೂರ್ವ ಜಾರ್ಖಂಡ್’ ಮತ್ತು 18ನೇ ಅಕ್ಷರೆÀೀಖೆ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಮುಖ್ಯವಾಗಿ ಭಾರತದಲ್ಲಿನ ಸಾಮಾಜಿಕ ಪ್ರಗತಿಯ ಆಯಾಮಗಳು ಮತ್ತಷ್ಟು ಸ್ಪಷ್ಟವಾಗಬೇಕಿದೆ ಮತ್ತು ಒಳಗೊಳ್ಳುವಿಕೆಯ ಬೆಳವಣಿಗೆಗೆ ರಾಜಕೀಯ ಬೆಳವಣಿಗೆ ಪೂರಕವಾಗಬೇಕಿದೆ. ಭಾರತದಲ್ಲಿ ಅತಿಯಾದ ಕೈಗಾರಿಕೀಕರಣದಿಂದ ಗ್ರಾಮೀಣ ಮತ್ತು ಬುಡಕಟ್ಟು ಜನ ಗಳು ಅಸ್ಮಿತೆಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಮಾನ ವೀಯತೆಯಿಂದ ಕೂಡಿದ ಅಭಿವೃದ್ಧಿ ಇಂದಿನ ದಿನ ಗಳಲ್ಲಿ ತೀರಾ ಅವಶ್ಯ ಎಂದು ಅಭಿಪ್ರಾಯಪಟ್ಟರು.
ಭಾರತದ ಸಾಮಾಜಿಕ ಪ್ರಗತಿಯ ವಿವಿಧ ಆಯಾಮ ಗಳನ್ನು ನೋಡಿದರೆ ಅದು ಮೂಲಭೂತವಾಗಿ ಮಾಹಿತಿ, ಶಿಕ್ಷಣ, ಆರೋಗ್ಯ ಮತ್ತು ಉತ್ತಮ ಆಡಳಿತ ಇವುಗಳ ಮೇಲೆ ನಿಂತಿದೆ. ಅದರಲ್ಲೂ ಸಹಿಷ್ಣುತೆ, ಒಳಗೊಳ್ಳು ವಿಕೆ ಮತ್ತು ವೈಯಕ್ತಿಕ ಹಕ್ಕುಗಳ ಕ್ಷೇತ್ರಗಳಲ್ಲಿ ಭಾರತ ಇನ್ನು ತುಲನಾತ್ಮಕವಾಗಿ ದುರ್ಬಲವಾಗಿದೆ ಎಂದು ಅಭಿಪ್ರಾಯಪಟ್ಟರು.
ಜೈನ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ಭಾರ್ಗವ ಹೆಮ್ಮಿಗೆ ಮಾತನಾಡುತ್ತಾ ಪ್ರವಾಸೋ ದ್ಯಮವು ದೇಶದ ಬೆಳವಣಿಗೆಗೆ ಸಹಾಯಕವಾಗಿದೆ. ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾದದ್ದು. ಪ್ರವಾಸೋದ್ಯಮ ದಿಂದ ದೇಶದ ಒಳಗೊಳ್ಳುವಿಕೆ ಅಭಿವೃದ್ಧಿ ಸಾಧ್ಯ. ನಮ್ಮಲ್ಲಿ ಸದ್ಯ ಇರುವ ಐತಿಹಾಸಿಕ ಪೌರಾಣಿಕ ಮತ್ತು ಪ್ರಾಕೃತಿಕ ಸ್ಥಳಗಳನ್ನು ಸರಿಯಾಗಿ ಅಭಿವೃದ್ಧಿಪಡಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಅವು ಮುಂದೆ ಉತ್ತಮ ಪ್ರವಾಸಿ ಸ್ಥಳಗಳು ಆಗಲು ಸಾಧ್ಯವಿದೆ. ನಮ್ಮ ಬೆಂಗ ಳೂರಿನಲ್ಲಿರುವ ಒಂದು ವಿಶಿಷ್ಟ ಕಲ್ಲಿನಕೋಟೆ ಇದಕ್ಕೆ ತಾಜಾ ಉದಾಹರಣೆ. ವಿಶ್ವದ ಹಲವಾರು ದೇಶಗಳು ಪ್ರವಾಸೋದ್ಯಮವನ್ನು ನಂಬಿ ಬದುಕುತ್ತಿವೆ. ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಬಹಳ ಮಹತ್ವವಾದದ್ದು ಎಂದರು.
ಕೌಟಿಲ್ಯ ವಿದ್ಯಾಲಯದ ಅಧ್ಯಕ್ಷ ಆರ್.ರಘು ಮಾತ ನಾಡಿ, ದೇಶದ ಬೆಳವಣಿಗೆಯಲ್ಲಿ ಶಿಕ್ಷಣದ ಮಹತ್ವ ಬಹಳ ಮುಖ್ಯವಾಗಿದ್ದು ಅದರಲ್ಲೂ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಭಿವೃದ್ಧಿ ಅಂಚಿನಲ್ಲಿರುವ ಜನಗಳ ಅಭಿವೃದ್ಧಿಯಲ್ಲಿ ಗುಣಾತ್ಮಕ ಶಿಕ್ಷಣ ಬಹಳ ಪ್ರಮುಖ ಎಂದರು.
ಕಾರ್ಯಕ್ರಮದಲ್ಲಿ ಲೇಖಕ ಡಿ.ಸಿ.ನಂಜುಂಡಪ್ಪ ಮಹಾರಾಜ ಕಾಲೇಜಿನ ಮನಶಾಸ್ತ್ರ ಪ್ರಾಧ್ಯಾಪಕರಾದ ಪೆÇ್ರಫೆಸರ್ ಲ್ಯಾನ್ಸಿ ಡಿಸೋಜಾ ಭಾಗವಹಿಸಿದ್ದರು.