ಮೈಸೂರು, ಫೆ.14 (ಆರ್‍ಕೆಬಿ)- ಕಳೆದ ವಿಧಾನಸಭಾ ಚುನಾವಣೆ ವೇಳೆ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ವಾಗ್ದಾನ ನೀಡಿದಂತೆ ಪರಿವಾರ-ತಳವಾರ ಪದಗಳನ್ನು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ ಸೇರಿಸಿದ್ದು, ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಮೈಸೂರು-ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿಕ್ಕಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಯಡಿಯೂರಪ್ಪನವರು ಪರಿವಾರ-ತಳವಾರ ಎಂಬ ಕುಲಶಾಸ್ತ್ರೀಯ ಅಧ್ಯಯನಕ್ಕೆ…
ಇಂದು ಸೆಸ್ಕ್ ಗ್ರಾಹಕರ ಕುಂದು ಕೊರತೆ ಸಭೆ
February 15, 2020ಮೈಸೂರು, ಫೆ.14- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಮೈಸೂರು ತಾಲೂಕು ವ್ಯಾಪ್ತಿಯ ವಿ.ವಿ.ಮೊಹಲ್ಲಾ, ಹೂಟಗಳ್ಳಿ, ಕುವೆಂಪು ನಗರ ಮತ್ತು ರಾಮಕೃಷ್ಣನಗರ ಕಚೇರಿಗಳ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಅಧ್ಯಕ್ಷತೆಯಲ್ಲಿ ಪ್ರತಿ ಮಾಹೆಯ 3ನೇ ಶನಿವಾರ ದÀಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುತ್ತದೆ. ಫೆ.15ರಂದು ಬೆಳಿಗ್ಗೆ 11ರಿಂದ 1 ಗಂಟೆಗೆ ವಿ.ವಿ.ಮೊಹಲ್ಲಾ ಉಪವಿಭಾಗ ವ್ಯಾಪ್ತಿಯ ಜಯಲಕ್ಷ್ಮೀಪುರಂ, ಎಂ.ಜಿ.ಕೊಪ್ಪಲು, ಒಂಟಿಕೊಪ್ಪಲು ಮತ್ತು ಮೇಟ ಗಳ್ಳಿ ಶಾಖೆಯ ಗ್ರಾಹಕರಿಗೆ ವಿ.ವಿ ಮೊಹಲ್ಲಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್…
ಗರ್ಭಸ್ಥಶಿಶುವಿನಲ್ಲಿ ಶ್ರವಣಶಕ್ತಿ ಬೆಳವಣಿಗೆ; ಗರ್ಭಿಣಿಯರಿಗೆ ಫೆ.16ರಂದು ತಿಳುವಳಿಕೆ
February 15, 2020ಮೈಸೂರು, ಫೆ.14(ಪಿಎಂ)- ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಿಂದ `ವಿಶ್ವ ಶ್ರವಣಶಕ್ತಿ ದಿನ’ದಂಗವಾಗಿ ಫೆ.16ರಂದು ಮಕ್ಕಳಲ್ಲಿ ಶ್ರವಣಶಕ್ತಿ ನಷ್ಟವನ್ನು ನಿಯಂ ತ್ರಿಸುವ ಕುರಿತು ಗರ್ಭಿಣಿಯರಿಗೆ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.3 `ವಿಶ್ವ ಶ್ರವಣಶಕ್ತಿ’ ದಿನವಾ ಗಿದ್ದು, ಅದರ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಮೈಸೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಗರ್ಭಿಣಿಯರು ಭಾಗವಹಿಸಬಹುದು. ಅಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ `ಶಿಶು ಗಳಲ್ಲಿ ಶ್ರವಣಶಕ್ತಿಯ ಸಹಜ ಬೆಳವಣಿಗೆ’ ಕುರಿತು ಸಂಸ್ಥೆಯ ವೈದ್ಯರು ಸಲಹೆ ನೀಡಲಿದ್ದಾರೆ….
ಜೆಎಸ್‍ಎಸ್ ಕಾಲೇಜಿನಲ್ಲಿ ‘ಟೀಚರ್ಸ್ ಕೆಪಾಸಿಟಿ ಬಿಲ್ಡಿಂಗ್’ ಕಾರ್ಯಾಗಾರ
February 15, 2020ಮೈಸೂರು, ಫೆ. 14- ಮೌಲ್ಯಗಳ ಬಗ್ಗೆ ಮಾತನಾಡುವ ಬದಲು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್‍ನ ಅಧ್ಯಕ್ಷ ಗುರುರಾಜ ಕರ್ಜಗಿ ಹೇಳಿದರು. ಮೈಸೂರಿನ ಊಟಿ ರಸ್ತೆಯ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ‘ಟೀಚರ್ಸ್ ಕೆಪಾಸಿಟಿ ಬಿಲ್ಡಿಂಗ್’ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಾಪಕರಿಗೆ ಜ್ಞಾನದ ಜೊತೆಗೆ ಬೋಧನಾ ಕೌಶಲವೂ ಇರಬೇಕು. ಮಕ್ಕಳ ಕಲಿಕಾ ಮಟ್ಟ ಒಂದೇ ರೀತಿಯಲ್ಲಿರುವುದಿಲ್ಲ. ಒಂದು ಕೊಠಡಿಯ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ…
ಮೀಸಲು: ಸುಪ್ರೀಂ ತೀರ್ಪಿನ ವ್ಯಾಖ್ಯಾನದ ಮರು ಪರಿಶೀಲನೆ ಅಗತ್ಯ
February 14, 2020ಮೈಸೂರು,ಫೆ.13(ಎಂಟಿವೈ)- `ಮೀಸ ಲಾತಿ ಮೂಲಭೂತ ಹಕ್ಕಲ್ಲ’ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವ್ಯಾಖ್ಯಾನದ ಮರು ಪರಿಶೀಲನೆಗೆ ಕೇಂದ್ರ ಸರ್ಕಾರ ಕೂಡಲೇ ಅರ್ಜಿ ಸಲ್ಲಿಸ ಬೇಕೆಂದು ಮಾಜಿ ಸಂಸದ ಆರ್.ಧ್ರುವ ನಾರಾಯಣ್ ಒತ್ತಾಯಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮೀಸಲಾತಿ ವಿಚಾರದಲ್ಲಿ ನೀಡಿದ ಆದೇಶದ ವ್ಯಾಖ್ಯಾನ ಆಘಾತಕಾರಿಯಾಗಿದೆ. ಕೂಡಲೇ ಪ್ರಧಾನಿ ಮೋದಿ, ಸರ್ವಪಕ್ಷಗಳ ಸಭೆ ಕರೆದು ಸಮಾ ಲೋಚಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸ ಬೇಕು. ಈ ಹಿಂದೆ ಎಸ್‍ಸಿ-ಎಸ್‍ಟಿ…
ಕೃಷಿ ಸಾಲ ಮನ್ನಾ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
February 14, 2020ಬೆಂಗಳೂರು, ಫೆ.13(ಕೆಎಂಶಿ)- ಕೃಷಿ ಸಾಲ ಮನ್ನಾ ಸಂಬಂಧ ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದು ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ತಿಳಿಸಿದ್ದಾರೆ. ವಿಕಾಸ ಸೌಧದಲ್ಲಿ ನೂತನ ಕಚೇರಿಯಲ್ಲಿ ಪೂಜೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಗೆ ಇಷ್ಟವಾದ ಸಹಕಾರ ಖಾತೆ ನೀಡಿದ್ದಾರೆ. ಸಹಕಾರ ಇಲಾಖೆಯಲ್ಲಿ ಸುಧಾ ರಣೆ ಹಾಗೂ ಅಗತ್ಯ ಬದಲಾವಣೆ ತರುವಲ್ಲಿ ಹಿರಿಯ ಸಹ ಕಾರಿಗಳ ಸಲಹೆ ಪಡೆಯಲಾಗುವುದು ಎಂದರು. ಸಹಕಾರಿಗಳ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಸ್ಥಗಿತ…
ಕಂದಾಯ, ಪಿಂಚಣಿ ಅದಾಲತ್‍ಗೆ ತಹಸೀಲ್ದಾರ್ ರಕ್ಷಿತ್ ಚಾಲನೆ
February 14, 2020ಮೈಸೂರು,ಫೆ.13-ಮೈಸೂರು ಜಿಲ್ಲೆಯ ಜಯಪುರ ಹೋಬ ಳಿಯ ಎಲ್ಲಾ ಗ್ರಾಮಗಳ ರೈತರಿಗಾಗಿ ಗುರುವಾರ ಜಯಪುರ ಹೋಬಳಿ ಉಪ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಮೈಸೂರು ತಾಲೂಕು ತಹಸೀಲ್ದಾರ್ ಕೆ.ಆರ್.ರಕ್ಷಿತ್ ಚಾಲನೆ ನೀಡಿದರು. ರಾಜ್ಯ ಸರ್ಕಾರವು ಕಂದಾಯ ಇಲಾಖೆಯನ್ನು ರೈತರ ಮನೆ ಬಾಗಿಲಿಗೆ ತರುವ ಉದ್ದೇಶದಿಂದ ರೂಪಿಸಿರುವ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಪೌತಿ ಖಾತೆ, ಪಿಂಚಣಿ, ಆರ್‍ಟಿಸಿ ತಿದ್ದುಪಡಿ, ರೇಷನ್ ಕಾರ್ಡ್, ಹಳೇ ಕ್ರಯ ಪತ್ರದಂತೆ ಖಾತೆ…
ಇಂದು ಪ್ರೇಮಿಗಳ ದಿನ: ಯುವ ಮನಸ್ಸಿನಲ್ಲಿ ಸಂಭ್ರಮ
February 14, 2020ಮೈಸೂರು, ಫೆ.13- ಸಂತ ವ್ಯಾಲೆಂಟೈನ್ಸ್ ನೆನಪಿನಾರ್ಥವಾಗಿ ಜಗತ್ತಿನೆಲ್ಲೆಡೆ ಇಂದು (ಫೆ.14) ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಯುವ ಪ್ರೇಮಿಗಳು ತಮ್ಮ ಸಂಗಾತಿಗೆ ಪ್ರೇಮ ನಿವೇ ದನೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಪ್ರೀತಿ ಪಾತ್ರರಿಗೆ ಇಂದು ಉಡುಗೊರೆ ಕೊಟ್ಟು ತಮ್ಮ ಪ್ರೀತಿಯನ್ನು ಬಿನ್ನವಿಸುತ್ತಾರೆ. ಇದನ್ನೇ ಬಂಡವಾಳ ಮಾಡಿ ಕೊಂಡಿರುವ ವ್ಯಾಪಾರಿಗಳು ಪ್ರೇಮಿಗಳಿಗಾಗಿ ವಿಶೇಷ ತಯಾರಿಗಳನ್ನು ನಡೆಸಿದ್ದಾರೆ. ಮೈಸೂರು ಸೇರಿದಂತೆ ವಿವಿಧೆಡೆ ಮಾರುಕಟ್ಟೆಯಲ್ಲಿ ವಿಶೇಷ ಬಗೆಯ ಕೇಕ್, ಚಾಕೊಲೇಟ್, ಗಿಫ್ಟ್, ಹೂ-ಗುಚ್ಛಗಳ ಭರ್ಜರಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಪ್ರೇಮಿಗಳಿಗಳಿಗಷ್ಟೇ ಅಲ್ಲದೆ ಪ್ರೀತಿಯನ್ನು ಬಯಸುವ,…
ಬಹುರೂಪಿಯ ಜನಪದೋತ್ಸವಕ್ಕೆ ಮಂಜಮ್ಮ ಜೋಗತಿ ಚಾಲನೆ
February 14, 2020ಮೈಸೂರು,ಫೆ.13(ವೈಡಿಎಸ್)-ಮೈಸೂರು ರಂಗಾಯಣದಲ್ಲಿ `ಗಾಂಧಿ ಪಥ’ ಶೀರ್ಷಿಕೆಯಡಿ ಆಯೋಜಿಸಿರುವ `ಬಹು ರೂಪಿ’ ರಾಷ್ಟ್ರೀಯ ನಾಟಕೋತ್ಸವದ ಭಾಗ ವಾದ `ಬಹುರೂಪಿ ಜನಪದೋತ್ಸವ’ಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು. ಕಲಾಮಂದಿರದ ಕಿಂದರಜೋಗಿ ವೇದಿಕೆ ಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರು ಜೋಗತಿಗೆ ಹುಡಿ ಹಾಗೂ ಗೊರವನಿಗೆ ಜೋಳಿಗೆ ತುಂಬುವ ಮೂಲಕ ಜನಪ ದೋತ್ಸವಕ್ಕೆ ವಿಶಿಷ್ಟ ರೀತಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಇಷ್ಟು ದಿನ ಟಿವಿಗಳು ರಂಗಭೂಮಿ, ಸಿನಿಮಾ ಗಳನ್ನು ನುಂಗಿ ಹಾಕಿದವು ಎನ್ನುತ್ತಿದ್ದರು. ಆದರೆ,…
ರಂಗಾಸಕ್ತರಿಗೆ ಇಂದಿನಿಂದ `ಬಹುರೂಪಿ’ ರಸದೌತಣ
February 14, 2020ಮೈಸೂರು,ಫೆ.13(ಎಂಟಿವೈ)- ಗಾಂಧಿ ಪಥ ಶೀರ್ಷಿಕೆಯ `ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವ’ವು ರಂಗಾಸಕ್ತರಿಗೆ ಬಹುರೂಪದ ರಂಗ ವೈಭವದ ರಸದೌತಣ ಉಣಬಡಿಸಲು ಸಜ್ಜಾಗಿದೆ. 4 ವೇದಿಕೆಗಳಲ್ಲಿ 25 ನಾಟಕಗಳು, 18 ಸಿನಿಮಾಗಳ ಪ್ರದರ್ಶನದೊಂದಿಗೆ ಜಾನ ಪದ ಸೊಗಡಿನ ಪರಿಚಯವನ್ನೂ ಮಾಡಿ ಕೊಡಲು ಬಹುರೂಪಿ ಸಜ್ಜಾಗಿದೆ. ವಿವಿಧ ಕಾರಣಗಳಿಂದಾಗಿ 1 ತಿಂಗಳು ತಡ ವಾಗಿ ನಡೆಯುತ್ತಿರುವ `ಬಹುರೂಪಿ’ ನಾಟಕೋ ತ್ಸವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಯ ಮುನ್ನೆಲೆಯೊಂದಿಗೆ ಫೆ.14 ರಂದು ಆರಂಭಗೊಳ್ಳುತ್ತಿದೆ. ನಾಟಕೋತ್ಸವ ಫೆ.19ರವರೆಗೂ ನಡೆಯಲಿದೆ. ಸಿದ್ಧತೆಗಳೆಲ್ಲವೂ ಪೂರ್ಣಗೊಂಡಿದ್ದು, ಶುಕ್ರವಾರ…










