ಗರ್ಭಸ್ಥಶಿಶುವಿನಲ್ಲಿ ಶ್ರವಣಶಕ್ತಿ ಬೆಳವಣಿಗೆ; ಗರ್ಭಿಣಿಯರಿಗೆ ಫೆ.16ರಂದು ತಿಳುವಳಿಕೆ
ಮೈಸೂರು

ಗರ್ಭಸ್ಥಶಿಶುವಿನಲ್ಲಿ ಶ್ರವಣಶಕ್ತಿ ಬೆಳವಣಿಗೆ; ಗರ್ಭಿಣಿಯರಿಗೆ ಫೆ.16ರಂದು ತಿಳುವಳಿಕೆ

February 15, 2020

ಮೈಸೂರು, ಫೆ.14(ಪಿಎಂ)- ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಿಂದ `ವಿಶ್ವ ಶ್ರವಣಶಕ್ತಿ ದಿನ’ದಂಗವಾಗಿ ಫೆ.16ರಂದು ಮಕ್ಕಳಲ್ಲಿ ಶ್ರವಣಶಕ್ತಿ ನಷ್ಟವನ್ನು ನಿಯಂ ತ್ರಿಸುವ ಕುರಿತು ಗರ್ಭಿಣಿಯರಿಗೆ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.3 `ವಿಶ್ವ ಶ್ರವಣಶಕ್ತಿ’ ದಿನವಾ ಗಿದ್ದು, ಅದರ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಮೈಸೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಗರ್ಭಿಣಿಯರು ಭಾಗವಹಿಸಬಹುದು. ಅಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ `ಶಿಶು ಗಳಲ್ಲಿ ಶ್ರವಣಶಕ್ತಿಯ ಸಹಜ ಬೆಳವಣಿಗೆ’ ಕುರಿತು ಸಂಸ್ಥೆಯ ವೈದ್ಯರು ಸಲಹೆ ನೀಡಲಿದ್ದಾರೆ.

ದೇಹದಲ್ಲಿ ಶ್ರವಣ ಕ್ರಿಯೆಗಳ ಬೆಳವಣಿಗೆಯು ಮಗುವು ತಾಯಿಯ ಗರ್ಭದಲ್ಲಿರುವ 9 ತಿಂಗ ಳಲ್ಲಿಯೇ ನಡೆಯುತ್ತದೆ. ಹಾಗಾಗಿ, ಗರ್ಭಿಣಿ ಯರು ಗರ್ಭಸ್ಥ ಶಿಶುವಿನ ಶ್ರವಣಶಕ್ತಿಯ ಬೆಳ ವಣಿಗೆ ಕುರಿತು ಪ್ರಮುಖ ಅಂಶಗಳನ್ನು ತಿಳಿದುಕೊಳ್ಳಲೇಬೇಕಿದೆ. ಮಗುವಿನ ಮಾತು-ಭಾಷೆ, ಶೈಕ್ಷಣಿಕ ಪ್ರಗತಿ ಮತ್ತು ಭಾವನಾತ್ಮಕ ಬೆಳವಣಿಗೆಗೆ ಶ್ರವಣಶಕ್ತಿಯೇ ಮುಖ್ಯ ಆಧಾರ. ಭಾರತದಲ್ಲಿ ಜನಿಸುವ ಪ್ರತಿಸಾವಿರ ಮಕ್ಕಳಲ್ಲಿ 5-6 ಮಕ್ಕಳು ಜನ್ಮಜಾತ ಶ್ರವಣ ನ್ಯೂನತೆ ಹೊಂದಿರುತ್ತವೆ. ಗರ್ಭಾವಸ್ಥೆಯಲ್ಲಿಯೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಗುವಿನ ಶ್ರವಣದೋಷದ ಸಾಧ್ಯತೆ ಕಡಿಮೆಯಾಗಲಿದೆ. ಅದಾಗ್ಯೂ ಶ್ರವಣ ದೋಷವಿದ್ದ ಮಗು ಜನಿಸಿದರೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಪರಿಣಾಮ ತಗ್ಗಿಸಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

Translate »