ಮೈಸೂರು, ಫೆ.14- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಮೈಸೂರು ತಾಲೂಕು ವ್ಯಾಪ್ತಿಯ ವಿ.ವಿ.ಮೊಹಲ್ಲಾ, ಹೂಟಗಳ್ಳಿ, ಕುವೆಂಪು ನಗರ ಮತ್ತು ರಾಮಕೃಷ್ಣನಗರ ಕಚೇರಿಗಳ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಅಧ್ಯಕ್ಷತೆಯಲ್ಲಿ ಪ್ರತಿ ಮಾಹೆಯ 3ನೇ ಶನಿವಾರ ದÀಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುತ್ತದೆ.
ಫೆ.15ರಂದು ಬೆಳಿಗ್ಗೆ 11ರಿಂದ 1 ಗಂಟೆಗೆ ವಿ.ವಿ.ಮೊಹಲ್ಲಾ ಉಪವಿಭಾಗ ವ್ಯಾಪ್ತಿಯ ಜಯಲಕ್ಷ್ಮೀಪುರಂ, ಎಂ.ಜಿ.ಕೊಪ್ಪಲು, ಒಂಟಿಕೊಪ್ಪಲು ಮತ್ತು ಮೇಟ ಗಳ್ಳಿ ಶಾಖೆಯ ಗ್ರಾಹಕರಿಗೆ ವಿ.ವಿ ಮೊಹಲ್ಲಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ, ಹೂಟಗಳ್ಳಿ ಉಪವಿಭಾಗ ವ್ಯಾಪ್ತಿಯ ಬೀರಿಹುಂಡಿ, ಹೂಟಗಳ್ಳಿ, ಇಲವಾಲ, ರೂಪಾನಗರ ಮತ್ತು ಬೋಗಾದಿ ಶಾಖೆಯ ಗ್ರಾಹಕರಿಗೆ ಹೂಟಗಳ್ಳಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ, ಕುವೆಂಪುನಗರ ಉಪವಿಭಾಗ ವ್ಯಾಪ್ತಿಯ ಸರಸ್ವತಿಪುರಂ, ನಿವೇದಿತ ಮತ್ತು ಅರವಿಂದ ಶಾಖೆಯ ಗ್ರಾಹಕರಿಗೆ ಕುವೆಂಪುನಗರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಹಾಗೂ ರಾಮಕೃಷ್ಣನಗರ ಉಪವಿಭಾಗ ವ್ಯಾಪ್ತಿಯ ವಿವೇಕಾನಂದ, ಜಯಪುರ ಮತ್ತು ಹಾರೋಹಳ್ಳಿ ಶಾಖೆಯ ರಾಮಕೃಷ್ಣನಗರ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಗ್ರಾಹಕರ ಕುಂದುಕೊರತೆ ಸಭೆ ನಡೆಯ ಲಿದೆ. ವಿದ್ಯುತ್ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ವಿದ್ಯುತ್ ಸಂಬಂಧಿತ ಕುಂದು ಕೊರತೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿರುತ್ತದೆ ಎಂದು ವಿ.ವಿ. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.